ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಇಂದು ಚಿಕ್ಕಜಾತ್ರೆಯು ವಿಜೃಂಭಣೆಯಿಂದ ನೆರವೇರಿತು.
ಇಂದು ಮುಂಜಾನೆಯೇ ಚಿನ್ನಾಭರಣ ಹಾಗೂ ಬಣ್ಣ ಬಣ್ಣದ ಹೂಗಳಿಂದ ಶ್ರೀಕಂಠೇಶ್ವರ ಸ್ವಾಮಿ ಸೇರಿದಂತೆ ಪಾರ್ವತಿ ಅಮ್ಮನವರು ಹಾಗೂ ಗಣೇಶ ಮತ್ತು ಚಂಡಿಕೇಶ್ವರ ಸ್ವಾಮಿಯವರ ಉತ್ಸವ ಮೂರ್ತಿಗಳನ್ನು ದೇವಾಲಯದಿಂದ ಹೊರಗೆ ತಂದು ಹೊರಗಿನ ಪ್ರಾಂಗಣದಲ್ಲಿರಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಾಲಯದ ಸುತ್ತಲೂ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಮಾಡಲಾಯಿತು.
ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು, ರಥಕ್ಕೆ ಪೂಜೆ ಸಲ್ಲಿಸಿ, ಹಗ್ಗ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಬೆಳಿಗ್ಗೆ 10.45ರಿಂದ 11.30ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಸಾವಿರಾರು ಮಂದಿ ಸಾರ್ವಜನಿಕರ ಹರ್ಘೋದ್ಘಾರದ ನಡುವೆ ಚಿಕ್ಕಜಾತ್ರೆ ನೆರವೇರಿತು.
ಇನ್ನು ರಥೋತ್ಸವವನ್ನು ನೋಡಲು ಆಗಮಿಸಿದ್ದ ಸಾವಿರಾರು ಮಂದಿ, ರಥಗಳಿಗೆ ಹಣ್ಣು ಜವನ ಎಸೆದು ತಮ್ಮ ಹರಕೆ ತೀರಿಸಿದರು. ಚಿಕ್ಕಜಾತ್ರೆಯ ಪ್ರಯುಕ್ತ ದೇವಾಲಯ ಒಳಗಡೆ ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


