Monday, March 30, 2026
spot_img
More
    spot_img
    HomeStateಮೈಸೂರಿನ ಚಾಮುಂಡಿ ಬೆಟ್ಟದ ನಂದಿಗೆ ಮಹಾಮಸ್ತಾಭಿಷೇಕ

    ಮೈಸೂರಿನ ಚಾಮುಂಡಿ ಬೆಟ್ಟದ ನಂದಿಗೆ ಮಹಾಮಸ್ತಾಭಿಷೇಕ

    ಮೈಸೂರು: ಭಾರತದ ಮೂರನೇ ಅತಿದೊಡ್ಡ ನಂದಿ ವಿಗ್ರಹ ಎಂಬ ಖ್ಯಾತಿಗೆ ಒಳಗಾಗಿರುವ ಚಾಮುಂಡಿ ಬೆಟ್ಟದ ನಂದಿಗೆ ಇಂದು ಮಹಾಮಸ್ತಾಭಿಷೇಕ ನೆರವೇರಿಸಲಾಯಿತು.

    ಚಾಮುಂಡಿ ಬೆಟ್ಟ ಬಳಗ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಇಂದು 19ನೇ ವರ್ಷದ ಮಹಾಮಸ್ತಾಭಿಷೇಕ ನೆರವೇರಿದ್ದು, ವಿಗ್ರಹಕ್ಕೆ 34 ಬಗೆಯ ದ್ರವ್ಯಗಳು ಸೇರಿದಂತೆ 38 ವಿಧಗಳಲ್ಲಿ ಅಭಿಷೇಕ ನೆರವೇರಿಸಲಾಯಿತು.

    ಇಂದು ಬೆಳಿಗ್ಗೆಯೇ ನಡೆದ ಮಸ್ತಕಾಭಿಷೇಕದಲ್ಲಿ ನಂದಿ ವಿವಿಧ ವರ್ಣದಲ್ಲಿ ಕಂಗೊಳಿಸಿದೆ. ಹಾಲು ಮೊಸರು ಸಕ್ಕರೆ ಹಾಗು ಭಸ್ಮಗಳ ಮಜ್ಜನದಿಂದ ಶ್ವೇತವರ್ಣದಲ್ಲಿ ಅರಿಶಿನ ಚಂದನದ ಅಭಿಷೇಕದೊಂದಿಗೆ ಹಳದಿ ಬಣ್ಣ ಕುಂಕುಮ ಸಿಂಧೂರ ರಕ್ತ ಚಂದನದಲ್ಲಿ ಮಿಂದು ಕೆಂಪು ರಂಗಿನಲ್ಲಿ ವಿಗ್ರಹವು ಕಂಗೊಳಿಸಿದೆ.

    ಈ ನಂದಿ ವಿಗ್ರಹವು 1659 ರಿಂದ 1673ರವರೆಗೆ ಮೈಸೂರು ಸಂಸ್ಥಾನವನ್ನಾಳಿದ ದೊಡ್ಡ ದೇವರಾಜ ಒಡೆಯರ್‌ ಕಾಲದಲ್ಲಿ ನಿರ್ಮಾಣವಾಗಿದ್ದು, 350ಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿದೆ.

    ಇದನ್ನು ಚಾಮುಂಡಿ ಬೆಟ್ಟವನ್ನು ಕಾಲ್ನಡಿಗೆಯ ಮೂಲಕ ಹತ್ತುವಾಗ 700 ಮೆಟ್ಟಿಲುಗಳ ಬಳಿ ಏಕಶಿಲಾ ಮೂರ್ತಿಯನ್ನಾಗಿ ಕೆತ್ತನೆ ಮಾಡಲಾಗಿದೆ. ಅಲ್ಲದೇ ಈ ವಿಗ್ರಹವು 16 ಅಡಿ ಎತ್ತರ ಹಾಗೂ 25 ಅಡಿ ಉದ್ದವಿದೆ.

    ಚಾಮುಂಡಿ ಬೆಟ್ಟದಲ್ಲಿರುವ ಈ ನಂದಿ ವಿಗ್ರಹವು ತಮಿಳುನಾಡಿನ ತಂಜಾವೂರಿನ ಬೃಹದೇಶ್ವರ ದೇವಾಲಯದ ನಂದಿ ಹಾಗೂ ಆಂಧ್ರ ಪ್ರದೇಶದ ಲೇಪಾಕ್ಷಿಯ ವೀರಭದ್ರ ದೇವಸ್ಥಾನದ ನಂದಿಯನ್ನು ಬಿಟ್ಟರೆ, ಇದೇ ದೇಶದ ಮೂರನೇ ನಂದಿ ವಿಗ್ರಹವಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬ್ರೇಕಿಂಗ್ರಾ! ಮನವಮಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗುತ್ತಾ? ಹೂಡಿಕೆದಾರರಿಗೆ ಕ್ಲಿಯರ್ ಮಾಹಿತಿ!

    “ಸ್ಟಾಕ್ ಮಾರ್ಕೆಟ್ ಹಾಲಿಡೇ 2026” ಇದೀಗ ಹೂಡಿಕೆದಾರರಲ್ಲಿ ದೊಡ್ಡ ಗೊಂದಲ ಮೂಡಿಸಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ಅಥವಾ ಶುಕ್ರವಾರ ಷೇರು ಮಾರುಕಟ್ಟೆ ಬಂದ್ ಆಗುತ್ತದೆಯಾ? ಎಂಬ ಪ್ರಶ್ನೆ ಟ್ರೇಡರ್‌ಗಳ ನಡುವೆ ಭಾರೀ...

    ಬ್ರೇಕಿಂಗ್! ಮಾರುಕಟ್ಟೆ ರಾಕೆಟ್—ಸೆನ್ಸೆಕ್ಸ್ 1300 ಪಾಯಿಂಟ್ ಜಿಗಿತ! ರೂಪಾಯಿ ಕುಸಿತ, ಚಿನ್ನ ಏರಿಕೆ… ಏನಿದು ಮಿಶ್ರ ಸಿಗ್ನಲ್?

    “ಸ್ಟಾಕ್ ಮಾರ್ಕೆಟ್ 24 ಮಾರ್ಚ್ 2026” ಹೂಡಿಕೆದಾರರಿಗೆ ಒಂದೇ ದಿನದಲ್ಲಿ ರೋಲರ್ ಕೋಸ್ಟರ್ ಅನುಭವ ನೀಡಿದೆ! ಒಂದೆಡೆ ಷೇರು ಮಾರುಕಟ್ಟೆ ಭರ್ಜರಿ ಏರಿಕೆ ಕಂಡಿದ್ದರೆ, ಇನ್ನೊಂದೆಡೆ ರೂಪಾಯಿ ಕುಸಿತ ಮತ್ತು ಚಿನ್ನದ ಬೆಲೆ...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading