ಮುಂಬರುವ ಚಿತ್ರ ಬೇಬಿ ಜಾನ್ ಸಿನಿಮಾ ಪ್ರಚಾರಕ್ಕಾಗಿ ನಿರ್ದೇಶಕ ಅಟ್ಲೀ ಇತ್ತೀಚೆಗೆ ನೆಟ್‌ಫ್ಲಿಕ್ಸ್‌ನ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ ಭಾಗಿಯಾಗಿದ್ದರು. ಈ ಶೋನಲ್ಲಿ ಪ್ರಶ್ನೆ ಕೇಳುವ ಭರದಲ್ಲಿ ನಿರೂಪಕ ಕಪಿಲ್ ಶರ್ಮಾ ಪರೋಕ್ಷವಾಗಿ ಅಟ್ಲಿ ಅವರ ವರ್ಣವನ್ನು ಟೀಕಿಸಿದ್ದಾರೆ.
ಈ ವೇಳೆ ಪ್ರಶ್ನೆ ಕೇಳುವ ಭರದಲ್ಲಿ ಕಪಿಲ್ ಅವರು ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ‘ಯಾವುದಾದರೂ ಸ್ಟಾರ್ನ ಮೊದಲ ಬಾರಿ ಭೇಟಿ ಮಾಡಲು ಹೋದಾಗ ಅಟ್ಲಿ ಎಲ್ಲಿ ಎಂದು ಕೇಳಿದ ಉದಾಹರಣೆ ಇದೆಯೇ’ ಎಂದು ಕೇಳುತ್ತ ನಕ್ಕರು ಕಪಿಲ್ ಶರ್ಮಾ. ಆದರೆ, ಅಟ್ಲಿ ನಗಲಿಲ್ಲ.
‘ಒಂದು ರೀತಿಯಲ್ಲಿ ನಾನು ನಿಮ್ಮ ಪ್ರಶ್ನೆಯನ್ನು ಅರ್ಥಮಾಡಿಕೊಂಡಿದ್ದೇನೆ. ನಾನು ಉತ್ತರಿಸಲು ಪ್ರಯತ್ನಿಸುತ್ತೇನೆ. ಎಆರ್ ಮುರುಗದಾಸ್ ಸರ್ ನನ್ನ ಮೊದಲ ಚಿತ್ರವನ್ನು ನಿರ್ಮಿಸಿದ ಕಾರಣ ನಾನು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ನಾನು ಹೇಗಿದ್ದೇನೆ ಎಂದು ನೋಡಿಲ್ಲ. ಅವರು ನನ್ನ ಸ್ಕ್ರಿಪ್ಟ್ ನರೇಷನ್ ಕೇಳಿ ಇಷ್ಟಪಟ್ಟರು. ನಾವು ಹೇಗೆ ಕಾಣುತ್ತೇವೆ ಎಂಬುದರ ಮೇಲೆ ಜಡ್ಜ್ ಮಾಡಬಾರದು. ನಮ್ಮ ಮನಸ್ಸನ್ನು ನೋಡಿ ಜಡ್ಜ್ ಮಾಡಬೇಕು’ ಎಂದು ಅಟ್ಲಿ ಹೇಳಿದ್ದಾರೆ.
ಎಪಿಸೋಡ್‌ನ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕಪಿಲ್ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಅವರ ಬಣ್ಣ ನೋಡಿ ಈ ರೀತಿಯಲ್ಲಿ ಟೀಕೆ ಮಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಇನ್ನು ವಿಡಿಯೋ ವೈರಲ್ ಆಗುತ್ತಿದ್ದಂತೆ ಕಪಿಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಆತ್ಮೀಯ ಸರ್, ನಾನು ಈ ವೀಡಿಯೊದಲ್ಲಿ ಏನಿದೆ ಎಂದು ನನಗೆ ವಿವರಿಸುವಿರಾ? ದಯವಿಟ್ಟು ಸಾಮಾಜಿಕ ಮಾಧ್ಯಮದಲ್ಲಿ ದ್ವೇಷವನ್ನು ಹರಡಬೇಡಿ ಎಂದು ಬರೆದುಕೊಂಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


