Wednesday, November 4, 2026
spot_img
More
    spot_img
    HomeLatest newsಚಿನ್ನ-ಬೆಳ್ಳಿ ಬೆಲೆ ಮತ್ತೆ ಏರಿಕೆ: ಪ್ರತಿ ಕೆಜಿ ಬೆಳ್ಳಿಗೆ ಒಂದೇ ದಿನ 8,900 ರೂ. ಹೆಚ್ಚಳ

    ಚಿನ್ನ-ಬೆಳ್ಳಿ ಬೆಲೆ ಮತ್ತೆ ಏರಿಕೆ: ಪ್ರತಿ ಕೆಜಿ ಬೆಳ್ಳಿಗೆ ಒಂದೇ ದಿನ 8,900 ರೂ. ಹೆಚ್ಚಳ

    ಬೆಂಗಳೂರು: ದೇಶೀಯ ಷೇರು ಮಾರುಕಟ್ಟೆಯಲ್ಲಿನ ಏರಿಳಿತದ ನಡುವೆ, ಬುಧವಾರ (ಡಿಸೆಂಬರ್ 17) ಅಮೂಲ್ಯ ಲೋಹಗಳ ಬೆಲೆ ಭಾರಿ ಏರಿಕೆ ಕಂಡಿದೆ. ಅದರಲ್ಲೂ ಬೆಳ್ಳಿಯ ದರವು ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ಮಟ್ಟಕ್ಕೆ ತಲುಪಿದ್ದು, ಖರೀದಿದಾರರ ಜೇಬಿಗೆ ಕತ್ತರಿ ಬಿದ್ದಿದೆ.ನಿನ್ನೆ ಅಲ್ಪ ಇಳಿಕೆ ಕಂಡಿದ್ದ ಬೆಳ್ಳಿ ಬೆಲೆ ಇಂದು ಬೆಂಗಳೂರಿನಲ್ಲಿ ಪ್ರತಿ ಗ್ರಾಮ್‌ಗೆ 9 ರೂಪಾಯಿ ಹೆಚ್ಚಳವಾಗುವ ಮೂಲಕ 208 ರೂಪಾಯಿ ಮುಟ್ಟಿದೆ.

    ಬುಧವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಂಡುಬಂದಿದ್ದು, ಹೂಡಿಕೆದಾರರು ಮತ್ತು ಗ್ರಾಹಕರ ಗಮನ ಸೆಳೆದಿದೆ. ವಿದೇಶಿ ಮಾರುಕಟ್ಟೆಯ ಪ್ರಭಾವದಿಂದಾಗಿ ಭಾರತದಲ್ಲೂ ಬೆಲೆಗಳು ಗರಿಷ್ಠ ಮಟ್ಟದಲ್ಲಿವೆ.

    ಬೆಂಗಳೂರು ಸೇರಿದಂತೆ ಭಾರತದಾದ್ಯಂತ 10 ಗ್ರಾಮ್ ಚಿನ್ನದ ಬೆಲೆ ₹1,23,300 ರಷ್ಟಿದೆ. (ಇಂದು ₹60 ರಷ್ಟು ಅಲ್ಪ ಏರಿಕೆ ಕಂಡಿದೆ).ಶುದ್ಧ ಚಿನ್ನದ ಬೆಲೆ ಪ್ರತಿ 10 ಗ್ರಾಮ್‌ಗೆ ₹1,34,510 ಮುಟ್ಟಿದೆ.ತಮಿಳುನಾಡು ಮತ್ತು ಕೇರಳದಲ್ಲಿ ಬಿಳಿ ಲೋಹದ ಅಬ್ಬರ ಜೋರಾಗಿದ್ದು, 100 ಗ್ರಾಮ್ ಬೆಳ್ಳಿ ಬೆಲೆ ಬರೋಬ್ಬರಿ ₹22,200 ತಲುಪಿದೆ.ಜಾಗತಿಕವಾಗಿ ಕೆಲವೆಡೆ ಮಾತ್ರ ಸ್ವರ್ಣ ದರ ಏರಿಕೆಯಾಗಿದ್ದರೂ, ಭಾರತದಲ್ಲಿ ಅದರ ಪ್ರಭಾವ ಕಾಣಿಸುತ್ತಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬೆಳ್ಳಿ ಬೆಲೆಯು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ.

    ಇಂದಿನ ಚಿನ್ನ-ಬೆಳ್ಳಿ ದರಪಟ್ಟಿ

    24 ಕ್ಯಾರಟ್ (ಅಪರಂಜಿ) ₹13,451 ₹1,34,510

    22 ಕ್ಯಾರಟ್ (ಆಭರಣ ಚಿನ್ನ) ₹12,330 ₹1,23,300

    18 ಕ್ಯಾರಟ್ ₹10,088 ₹1,00,880

    1 ಗ್ರಾಮ್ ಬೆಳ್ಳಿ: ₹208

    ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

    ಬೆಂಗಳೂರು ₹1,34,510

    ನಾಗ್ಪುರ ₹1,34,510

    ಮುಂಬೈ ₹1,34,510

    ಚೆನ್ನೈ ₹1,34,510

    ಕೋಲ್ಕತ್ತಾ ₹1,34,510

    ಪಾಟ್ನಾ ₹1,34,560

    ಸೂರತ್‌ ₹1,34,560

    ಚಂಡೀಗಢ ₹1,34,660

    ಲಕ್ನೋ ₹1,34,660

    ಬೆಂಗಳೂರು ಹೊಸ ವರ್ಷಾಚರಣೆ 2026: ಪೊಲೀಸ್ ಇಲಾಖೆಯ ’19 ಸೂತ್ರಗಳ’ ಮಾರ್ಗಸೂಚಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search