ತೆಲುಗಿನ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಇದೆ, ಅದು ಅತಿ ಚಿಕ್ಕ ಚಿತ್ರರಂಗ, ಕೆಜಿಎಫ್, ಕಾಂತಾರ ಬಳಿಕ ಹಿಟ್ ಚಿತ್ರ ಯಾವುದು ಬಂತು, ಸ್ಯಾಂಡಲ್‌ವುಡ್ ಬೆಳೆಯುವುದಿಲ್ಲ ಎಂದೆಲ್ಲಾ ಕಾಮೆಂಟ್ ಮಾಡಿದ್ದ ನಟಿ, ನಿರೂಪಕಿ ಸೌಮ್ಯಾ ರಾವ್ ಇದೀಗ ಕನ್ನಡದ ಯುಟ್ಯೂಬರ್ ರಾಜೇಶ್ ಗೌಡ ಅವರ ಸಂದರ್ಶನದಲ್ಲಿಯೂ ಪಾಲ್ಗೊಂಡಿದ್ದು ಇಲ್ಲಿ ತಮ್ಮ ತೆಲುಗು ಸಂದರ್ಶನದ ಹೇಳಿಕೆಗೆ ಸ್ಪಷ್ಟನೆ ನೀಡುವ ಯತ್ನ ಮಾಡಿದ್ದಾರೆ ಹಾಗೂ ಇದರಿಂದ ತಾವು ಎದುರಿಸಿದ ನಿಂದನೆಯನ್ನು ತೆರೆದಿಟ್ಟಿದ್ದಾರೆ.
ತಮ್ಮ ಸಂದರ್ಶನದ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಹಲವಾರು ಮಂದಿ ತನ್ನನ್ನು ನಿಂದಿಸಿದರು ಎಂದು ಸೌಮ್ಯಾ ರಾವ್ ಆರೋಪಿಸಿದರು. ತೆಲುಗಿನಲ್ಲಿ ಖ್ಯಾತ ನಿರೂಪಕಿಯಾಗಿ ಯಶಸ್ಸು ಸಾಧಿಸಿರುವ ಸೌಮ್ಯಾ ರಾವ್ ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಹೀಗಿರುವ ತಮ್ಮ ಖಾತೆಯಲ್ಲಿನ ಫೋಟೊಗಳಿಗೆ ಕೆಟ್ಟ ಕಾಮೆಂಟ್ ಮಾಡಿದರು ಎಂದು ಬೇಸರ ಹೊರಹಾಕಿದರು.
ಕನ್ನಡ ಚಿತ್ರರಂಗ ಬೆಳೆದಿಲ್ಲ, ಬೆಳೆಯಲ್ಲ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸೌಮ್ಯಾ ʼಕನ್ನಡ ಚಿತ್ರರಂಗದ ಮೇಲೆ ನನಗೆ ಒಲವು ಇಲ್ಲ, ಏಕೆಂದರೆ ಅವರು ನನ್ನನ್ನು ಬೆಳೆಸಿಲ್ಲ ಎಂದು ನಾನು ಹೇಳಿದ್ದೆ. ಅದನ್ನು ನಾನು ಬೇಸರದಿಂದ ಹೇಳಿದ್ದು. ಪ್ರಸ್ತುತ ಕನ್ನಡ ಚಿತ್ರರಂಗ ಒಳ್ಳೆಯ ನಟಿಯರನ್ನು ಕಳೆದುಕೊಳ್ಳುತ್ತಿದೆ. ಕೆಟ್ಟ ಹುಳದಿಂದ ಇಂಡಸ್ಟ್ರಿ ಹಾಳಾಗುತ್ತಿದೆ ಎಂದು ನಾನು ಸಂದರ್ಶನದಲ್ಲಿ ಹೇಳಿದ್ದೆʼ ಎಂದಿದ್ದಾರೆ.
ಅಲ್ಲದೇ ಅಣ್ಣಾವ್ರ ಚಿತ್ರಗಳನ್ನು ನೋಡಿದ್ದೀರಾ ಎಂದೆಲ್ಲಾ ಕಾಮೆಂಟ್ ಮಾಡಿದ್ದರು. ನಾನು ಚಿಕ್ಕ ವಯಸ್ಸಿನಲ್ಲಿ ರಾಜ್‌ಕುಮಾರ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವಳು. ಬೇಡರ ಕಣ್ಣಪ್ಪದಿಂದ ಶಬ್ದವೇಧಿವರೆಗೆ ಎಲ್ಲಾ ಚಿತ್ರಗಳನ್ನೂ ನಾನು ನೋಡಿದ್ದೇನೆ ಎಂದರು ಸೌಮ್ಯಾ ರಾವ್.
ಇನ್ನೂ ಮುಂದುವರಿದು ಕೆಲವರು ನನ್ನನ್ನು ಕರ್ನಾಟಕಕ್ಕೆ ಬರಬೇಡ ಬಂದರೆ ಮೆಟ್ಟಲ್ಲಿ ಹೊಡೆಯುತ್ತೇವೆ, ತೆಲುಗಿನಲ್ಲೇ ಸಾಯಿ ಎಂದೆಲ್ಲಾ ನಿಂದಿಸಿದ್ದರು. ನನ್ನ ರಾಜ್ಯಕ್ಕೆ ನಾನು ಬರೋಕೆ ಅವರ ಅನುಮತಿ ಬೇಕಾ? ಬಟ್ಟೆ ಬಿಚ್ಚಿದವರಿಗೆ ಹೆಚ್ಚು ಫಾಲೋವರ್ಸ್, ಅವರೇ ಇವರಿಗೆ ದೇವರುಗಳು ಎಂದು ಕಿಡಿಕಾರಿದರು.
ಅಲ್ಲದೇ ʼತೆಲುಗಿನಲ್ಲಿ ಯಾರದ್ದೋ ಜೊತೆ ಮಲಗಿ ಅವಕಾಶ ಪಡೆದುಕೊಂಡಿದ್ದಾಳೆ ಎಂದು ಯಾರೋ ಕಾಮೆಂಟ್ ಮಾಡಿದ್ದರು. ತೆಲುಗಿನಲ್ಲಿ ಮಲಗಿದವಳಿಗೆ ಕನ್ನಡದವರ ಜೊತೆ ಮಲಗೋಕೆ ಬರಲ್ವಾ? ಅಲ್ಲಿರೋನು ಗಂಡಸೇ, ಇಲ್ಲಿರೋನು ಗಂಡಸೇ. ನಾನು ಆ ರೀತಿಯ ಕಲಾವಿದೆ ಅಲ್ಲʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


