ವಡೋದರಾದ ಕೊಟಂಬಿ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ಹಾಗೂ ವಿದರ್ಭ ತಂಡಗಳ ನಡುವಿನ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ 36 ರನ್‌ಗಳ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ವಿದರ್ಭ ಕರ್ನಾಟಕ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಕಲೆಹಾಕಿ ವಿದರ್ಭ ತಂಡಕ್ಕೆ 349 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ವಿದರ್ಭ 48.2 ಓವರ್‌ಗಳಲ್ಲಿ 312 ರನ್‌ಗಳಿಗೆ ಆಲ್‌ಔಟ್ ಆಯಿತು.
ಹೀಗೆ ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಕರ್ನಾಟಕ ಐದನೇ ಬಾರಿಗೆ ವಿಜಯ್ ಹಜಾರೆ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಹಿಂದೆ ಝೋನಲ್ ಹಾಗೂ ರಣಜಿ ಒಡಿಐ ಫಾರ್ಮ್ಯಾಟ್‌ನಲ್ಲಿ ನಡೆಯುತ್ತಿದ್ದ ಲೀಗ್‌ಗೆ 2007-08ನೇ ಸಾಲಿನ ಟೂರ್ನಿಯಿಂದ ವಿಜಯ್ ಹಜಾರೆ ಟ್ರೋಫಿ ಎಂದು ಹೆಸರಿಡಲಾಗಿದ್ದು, ಆಗಿನಿಂದ ಇಲ್ಲಿಯವರೆಗೂ ಕರ್ನಾಟಕ ಅತಿಹೆಚ್ಚು ಬಾರಿ ಟ್ರೋಫಿಯನ್ನು ಗೆದ್ದಿದೆ. ಹಾಗಿದ್ದರೆ ಯಾವ ವರ್ಷ ಯಾವ ತಂಡ ಚಾಂಪಿಯನ್ ಆಯಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..
2007-08: ಸೌರಾಷ್ಟ್ರ
2008-09: ತಮಿಳುನಾಡು
2009-10: ತಮಿಳುನಾಡು
2010-11: ಜಾರ್ಖಂಡ್
2011-12: ಬೆಂಗಾಲ್
2012-13: ಡೆಲ್ಲಿ
2013-14: ಕರ್ನಾಟಕ
2014-15: ಕರ್ನಾಟಕ
2015-16: ಗುಜರಾತ್
2016-17: ತಮಿಳುನಾಡು
2017-18: ಕರ್ನಾಟಕ
2018-19: ಮುಂಬೈ
2019-20: ಕರ್ನಾಟಕ
2020-21: ಮುಂಬೈ
2021-22: ಹಿಮಾಚಲ ಪ್ರದೇಶ
2022-23: ಸೌರಾಷ್ಟ್ರ
2023-24: ಹರಿಯಾಣ
2024-25: ಕರ್ನಾಟಕ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


