ಸಿಲಿಕಾನ್ ಸಿಟಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಜನದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಾರಾಂತ್ಯ ಹಾಗೂ ಸೋಮವಾರದಂದು ಇಲ್ಲಿ ಕಿಕ್ಕಿರಿದು ಸೇರುವ ಜನಸಂದಣಿಯಿಂದ ಕಿರಿಕಿರಿ ಹೆಚ್ಚಾಗಿದೆ.
ಇನ್ನು ಹಬ್ಬದ ದಿನಗಳ ವಿಚಾರಕ್ಕೆ ಬಂದರೆ ಕೇಳುವ ಹಾಗಿಲ್ಲ. ಹಬ್ಬಗಳ ಸಲುವಾಗಿ ವಿಶೇಷ ರೈಲುಗಳನ್ನು ಆಯೋಜಿಸುವ ಕಾರಣದಿಂದಾಗಿ ಜನದಟ್ಟಣೆ ಇನ್ನೂ ದೊಡ್ಡ ಮಟ್ಟದಲ್ಲಿರಲಿದೆ. ಕೇವಲ ಜನರಿಗೆ ಮಾತ್ರವಲ್ಲದೇ ರೈಲುಗಳೂ ಸಹ ಟ್ರ್ಯಾಕ್ ಇಲ್ಲದೇ ಕಾದ ಉದಾಹರಣೆಗಳು ಸಾಕಷ್ಟಿವೆ.
ಹೀಗಾಗಿ ಮಹಾನಗರ ಬೆಂಗಳೂರಿಗೆ ಇನ್ನೂ ಹೆಚ್ಚಿನ ರೈಲು ನಿಲ್ದಾಣಗಳ ಅವಶ್ಯಕತೆ ದೊಡ್ಡ ಮಟ್ಟದಲ್ಲಿದ್ದು, ಇದೀಗ ಈ ಕುರಿತಾಗಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಮಾತನಾಡಿ ಎರಡು ಹೊಸ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮಾದರಿಯಲ್ಲಿ ಈ ಎರಡು ಹೊಸ ರೈಲು ನಿಲ್ದಾಣಗಳನ್ನು ನಿರ್ಮಿಸಲಿದ್ದು, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿಯಲ್ಲಿ ಈ ಎರಡು ರೈಲು ನಿಲ್ದಾಣಗಳು ತಲೆ ಎತ್ತಲಿವೆ ಎಂದು ಸೋಮಣ್ಣ ತಿಳಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


