Friday, August 7, 2026
spot_img
More
    spot_img
    HomeTop StoryIPL 2025: 18 ವರ್ಷಗಳಿಂದ ಐಪಿಎಲ್ ಆಡುತ್ತಿರುವವರಿಗೆ ಪ್ರಶಸ್ತಿ; ಕೊಹ್ಲಿ, ಧೋನಿ, ರೋಹಿತ್‌ಗೆ ಕೊಟ್ಟು ಕನ್ನಡಿಗನನ್ನು...

    IPL 2025: 18 ವರ್ಷಗಳಿಂದ ಐಪಿಎಲ್ ಆಡುತ್ತಿರುವವರಿಗೆ ಪ್ರಶಸ್ತಿ; ಕೊಹ್ಲಿ, ಧೋನಿ, ರೋಹಿತ್‌ಗೆ ಕೊಟ್ಟು ಕನ್ನಡಿಗನನ್ನು ಕೈಬಿಟ್ಟ ಬಿಸಿಸಿಐ!

    ಪ್ರಸ್ತುತ ಹದಿನೆಂಟನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದೆ. ಈ ಬಾರಿಯ ಟೂರ್ನಿಯ ಆವೃತ್ತಿ ಸಂಖ್ಯೆಯನ್ನು ಈ ಹಿಂದಿನ ಯಾವುದೇ ಆವೃತ್ತಿಯಲ್ಲಿಯೂ ಸಹ ಮಾಡದಷ್ಟು ಸಂಭ್ರಮಿಸಲಾಗುತ್ತಿದ್ದು, ನೋಡುಗರಲ್ಲಿ ವಿಶೇಷವೆನಿಸುವ ಹಾಗೆ ಮಾಡಲಾಗಿದೆ.

    Advertisement

    ಅಲ್ಲದೇ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 2008ರಿಂದ ಇಲ್ಲಿಯವರೆಗೆ ಎಲ್ಲ ಆವೃತ್ತಿಯಲ್ಲಿಯೂ ಆಡಿರುವ ಆಟಗಾರರಿಗೆ ಐಪಿಎಲ್‌ನ ವಿಶೇಷ ನೆನೆಪಿನ ಕಾಣಿಕೆಯನ್ನು ನೀಡಿ ಬಿಸಿಸಿಐ ಗೌರವಿಸಿದೆ.

    ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಎಲ್ಲ ಆವೃತ್ತಿಯಲ್ಲಿಯೂ ಕಣಕ್ಕಿಳಿದಿರುವ ಆಟಗಾರರಿಗೆ ಬಿಸಿಸಿಐ ಈ ರೀತಿಯ ನೆನಪಿನ ಕಾಣಿಕೆ ಅಥವಾ ಪ್ರಶಸ್ತಿ ನೀಡಿ ಗೌರವಿಸುವುದು ಖುಷಿಯ ವಿಚಾರವೇ. ಆದರೆ ಗೌರವ ಸಲ್ಲಿಸುವ ವೇಳೆ ಸಮಾನತೆ ಇರದಿದ್ದರೆ ಎಷ್ಟು ಸರಿ ಅಲ್ಲವೇ?

    ಹೌದು, ಹದಿನೆಂಟು ಆವೃತ್ತಿಗಳಲ್ಲಿಯೂ ಸತತವಾಗಿ ಕಣಕ್ಕಿಳಿದಿರುವ ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಈ ಮೂವರಿಗೂ ಬಿಸಿಸಿಐ ಈ ಒಂದು ನೆನಪಿನ ಕಾಣಿಕೆಯನ್ನು ಗೌರವಿಸಿದೆ. ಅದೇ ರೀತಿ ಕರ್ನಾಟಕದ ಆಟಗಾರ ಮನಿಷ್ ಪಾಂಡೆ ಸಹ ಎಲ್ಲ ಹದಿನೆಂಟು ಐಪಿಎಲ್ ಆವೃತ್ತಿಗಳಲ್ಲಿಯೂ ಕಣಕ್ಕಿಳಿದಿದ್ದಾರೆ. ಆದರೆ ಬಿಸಿಸಿಐ ಕೊಹ್ಲಿ, ಧೋನಿ ಹಾಗೂ ರೋಹಿತ್‌ಗೆ ನೀಡಿದ ಗೌರವವನ್ನು ಮನಿಷ್ ಪಾಂಡೆಗೆ ನೀಡಿಲ್ಲ.

    ಇನ್ನು ಐಪಿಎಲ್‌ನಲ್ಲಿ ಮನಿಷ್ ಪಾಂಡೆ ಪ್ರದರ್ಶನದ ಅಂಕಿಅಂಶ ಕಡಿಮೆಯೇನಿಲ್ಲ. 172 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಮನಿಷ್ ಪಾಂಡೆ 3869 ರನ್ ಬಾರಿಸಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿ ಪ್ರಥಮ ಶತಕ ಬಾರಿಸಿದ ಭಾರತೀಯ ಎಂಬ ದಾಖಲೆಯನ್ನೂ ಸಹ ಹೊಂದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading