ಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಜನಿವಾರ ಧರಿಸಿದ್ದ ಕಾರಣ ಪ್ರವೇಶ ನಿರಾಕರಣೆ ಮಾಡಿದರು ಎಂಬ ಆರೋಪ ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಕೇಳಿಬಂದಿದೆ.
ಬೀದರ್‌ನಲ್ಲಿ ಜನಿವಾರ ಕಳಚಿ ಬರಬೇಕು, ಇಲ್ಲದಿದ್ದರೆ ಪ್ರವೇಶವಿಲ್ಲ ಎಂದು ಸೂಚನೆ ನೀಡಲಾಗಿದ್ದು, ವಿದ್ಯಾರ್ಥಿಯೊಬ್ಬ ಇದನ್ನು ವಿರೋಧಿಸಿದ್ದಕ್ಕೆ ಪರೀಕ್ಷೆ ಬರೆಯುವ ಅನುಮತಿಯನ್ನು ಕೊಟ್ಟಿಲ್ಲ. ಅತ್ತ ಜನಿವಾರ ತೆಗೆಯಲು ಒಪ್ಪದ ವಿದ್ಯಾರ್ಥಿ ಪರೀಕ್ಷೆ ಬರೆಯದೇ ಪರೀಕ್ಷಾ ಕೇಂದ್ರದಿಂದ ಹೊರಬಂದಿದ್ದಾನೆ.
ಇನ್ನು ಶಿವಮೊಗ್ಗದ ಕಾಲೇಜೊಂದರಲ್ಲಿ ಜನಿವಾರ ಕತ್ತರಿಸಿ ಡಸ್ಟ್‌ಬಿನ್‌ಗೆ ಹಾಕಿ ಪ್ರವೇಶ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ನಡೆಗೆ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಬ್ರಾಹ್ಮಣ ಸಮುದಾಯ ಸಿಡಿದೆದ್ದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಪರೀಕ್ಷೆಯ ನಿಯಮಕ್ಕೆ ತಕ್ಕಂತೆ ವಸ್ತ್ರ ಧರಿಸಿ ಬರದಿದ್ದರೆ ಪ್ರವೇಶ ನಿರಾಕರಿಸಲಿ, ಆದರೆ ನಿಯಮ ಪಾಲಿಸಿದ್ದರೂ ಒಂದು ಸಮುದಾಯವನ್ನು ಈ ರೀತಿ ನಡೆಸಿಕೊಂಡು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ.
ಇನ್ನು ಜನಿವಾರವನ್ನು ಡಸ್ಟ್‌ಬಿನ್‌ಗೆ ಯಾಕೆ ಹಾಕಿದ್ರಿ ಎಂದು ಭಾವನಾತ್ಮಕವಾಗ ಮನನೊಂದವರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಮುಂದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


