Tuesday, November 3, 2026
spot_img
More
    spot_img
    HomeEntertainmentಎಕ್ಕ ಭರ್ಜರಿ ಬಿಡುಗಡೆ: ಹೇಗಿದೆ ಚಿತ್ರದ ಫಸ್ಟ್‌ ಹಾಫ್?‌ ಚಿತ್ರ ನೋಡಿದವರು ಹೇಳಿದ್ದಿಷ್ಟು

    ಎಕ್ಕ ಭರ್ಜರಿ ಬಿಡುಗಡೆ: ಹೇಗಿದೆ ಚಿತ್ರದ ಫಸ್ಟ್‌ ಹಾಫ್?‌ ಚಿತ್ರ ನೋಡಿದವರು ಹೇಳಿದ್ದಿಷ್ಟು

    ನಿರ್ದೇಶಕ ರೋಹಿತ್‌ ಪದಕಿ ನಿರ್ದೇಶನದ ಎರಡನೇ ಚಿತ್ರ ಎಕ್ಕ ಇಂದು ( ಜುಲೈ 18 ) ಭರ್ಜರಿ ಬಿಡುಗಡೆ ಕಂಡಿದೆ. ಗಾಂಧಿನಗರದ ಬೀದಿಗಳಲ್ಲಿ ಈ ವರ್ಷಪೂರ್ತಿ ಕಾಣ ಸಿಗದಂತಹ ಜನಸಂದಣಿ ಚಿತ್ರಮಂದಿರದ ಮುಂದೆ ಸೇರಿದೆ.

    ತನ್ನ ಹಾಡುಗಳು ಹಾಗೂ ಟ್ರೈಲರ್‌ ಮೂಲಕ ಅಭಿಮಾನಿಗಳು ಹಾಗೂ ಸಿನಿ ರಸಿಕರ ಮನ ಗೆದ್ದಿದ್ದ ಎಕ್ಕ ಚಿತ್ರಮಂದಿರದಲ್ಲಿ ಹೇಗಿರಲಿದೆ? ಯುವ ಹಾಗೂ ರೋಹಿತ್‌ ಪದಕಿ ತಮ್ಮ ಎರಡನೇ ಚಿತ್ರದಲ್ಲೂ ಪ್ರೇಕ್ಷಕರ ಮನ ಗೆಲ್ಲುತ್ತಾರಾ? ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.

    ಹೀಗೆ ಟ್ರೈಲರ್‌ ಹಾಗೂ ಹಾಡುಗಳನ್ನು ಮೆಚ್ಚಿ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡು ಚಿತ್ರಮಂದಿರಗಳಿಗೆ ಫಸ್ಟ್‌ ಡೇ ಫಸ್ಟ್‌ ಶೋ ವೀಕ್ಷಿಸಲು ಹೊರಟವರು ಚಿತ್ರದ ಮೊದಲಾರ್ಧ ಮುಗಿಯುತ್ತಿದ್ದಂತೆ ಎಕ್ಸ್‌ ಅಪ್ಲಿಕೇಶನ್‌ನಲ್ಲಿ ತಮ್ಮ ವಿಮರ್ಶೆಗಳನ್ನು ಹಂಚಿಕೊಂಡಿದ್ದಾರೆ.

    ಪವನ್‌ ಎಂಬ ಅಭಿಮಾನಿ ಚಿತ್ರದ ಮೊದಲಾರ್ಧದ ಕುರಿತು ಬರೆದುಕೊಂಡಿದ್ದು, ಫಸ್ಟ್‌ ಹಾಫ್‌ ಕ್ರೇಜಿಯಾಗಿದೆ, ಎಮೋಷನಲ್‌ ಆಕ್ಷನ್‌ ಅನ್ನು ಉತ್ತಮವಾಗಿ ತೋರಿಸಿದ್ದಾರೆ ಎಂದು ಹೊಗಳಿದ್ದಾರೆ. ನಿರೀಕ್ಷೆಯಂತೆ ಚರಣ್‌ ರಾಜ್‌ ಸಂಗೀತವನ್ನು ಹೊಗಳಿದ್ದು, ಯುವರಾಜ್‌ಕುಮಾರ್‌ ನಟನೆ ಬಗ್ಗೆ ಮಾತನಾಡುವವರಿಗೆ ಟಾಂಗ್‌ ಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ನೇಮ್‌ ಈಸ್‌ ರಾಜ್‌ ಎಂಬ ಸಿನಿ ಪ್ರೇಮಿ ಟ್ವೀಟ್‌ ಮಾಡಿದ್ದು, ಬ್ಯಾಂಗಲ್ ಬಂಗಾರಿ ಹಾಡನ್ನು ಹೊಗಳಿದ್ದಾರೆ, ಎಮೋಷನಲ್‌ ಸೀನ್‌ಗಳು ಚೆನ್ನಾಗಿವೆ ಎಂದಿದ್ದಾರೆ. ಚಿತ್ರದ ಮಧ್ಯಂತರದಲ್ಲಿ ನಾಯಕನ ಡೈಲಾಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿ ಇವರೂ ಸಹ ಚರಣ್‌ ರಾಜ್‌ ಸಂಗೀತಕ್ಕೆ ಜೈ ಎಂದಿದ್ದಾರೆ. ಯುವ ಹಾಗೂ ಸಂಜನಾ ಆನಂದ್‌ ನಟನೆಯನ್ನೂ ಹೊಗಳಿದ್ದಾರೆ.

    ಮತ್ತೋರ್ವ ಬಳಕೆದಾರ ಚಿತ್ರದಲ್ಲಿ ಎಲ್ಲ ಅಂಶಕ್ಕಿಂತ ಯುವ ರಾಜ್‌ಕುಮಾರ್‌ ನಟನೆ ಹೆಚ್ಚ ಸದ್ದು ಮಾಡಲಿ ಎಂದು ಬಣ್ಣಿಸಿದ್ದು, ರೋಹಿತ್‌ ಪದಕಿ ನಿಂಗೆ ನೀನೇ ಸಾಟಿ ಗುರು ಎಂದು ನಿರ್ದೇಶಕನನ್ನು ಕೊಂಡಾಡಿದ್ದಾರೆ.

    ಹೀಗೆ ಬಹುತೇಕ ಪಾಸಿಟಿವ್‌ ವಿಮರ್ಶೆಗಳನ್ನೇ ತನ್ನ ಮೊದಲಾರ್ಧಕ್ಕೆ ಪಡೆದುಕೊಂಡಿರುವ ಎಕ್ಕ ಚಿತ್ರದ ದ್ವಿತೀಯಾರ್ಧ ಹೇಗಿರಲಿದೆ ಎಂಬುದನ್ನು ಪೂರ್ತಿ ವಿಮರ್ಶೆಯಲ್ಲಿ ತಿಳಿಯಬಹುದಾಗಿದೆ.

    ಬೆಂಗಳೂರು: 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಪೊಲೀಸ್ ಇಲಾಖೆ ಹಾಗೂ ನಿಷ್ಕ್ರಿಯ ದಳದಿಂದ ತಪಾಸಣೆ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search