ಯುವ ರಾಜ್‌ಕುಮಾರ್ ನಟನೆಯ ಎರಡನೇ ಚಿತ್ರ ಎಕ್ಕ ಇಂದು ( ಜುಲೈ 18 ) ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಡಗೆಯಾಗುತ್ತಿದೆ. ಕಳೆದ ವರ್ಷ ಯುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಯುವ ರಾಜ್‌ಕುಮಾರ್ ನೆಪೋ ಕಿಡ್ ಟ್ರೋಲಿಗರಿಗೆ ತಕ್ಕ ಪಾಠ ಕಲಿಸಿದ್ದರು.
ಅದರ ಫಲವಾಗಿಯೇ ರತ್ನನ್ ಪ್ರಪಂಚ ನಿರ್ದೇಶಿಸಿದ್ದ ನಿರ್ದೇಶಕ ರೋಹಿತ್ ಪದಕಿ ತಮ್ಮ ಎಕ್ಕ ಚಿತ್ರಕ್ಕೆ ಯುವ ತಕ್ಕ ನಟ ಎಂದು ಆರಿಸಿಕೊಂಡು ಚಿತ್ರವನ್ನು ಕಟ್ಟುಕೊಟ್ಟಿದ್ದಾರೆ. ಇನ್ನು ಮೊದಲ ಚಿತ್ರದಲ್ಲೇ ಭಾರೀ ಭರವಸೆ ಮೂಡಿಸಿದ್ದ ರೋಹಿತ್ ಪದಕಿಯ ಎರಡನೇ ಚಿತ್ರ ಹೇಗಿರಲಿದೆ ಎನ್ನುವ ಕುತೂಹಲ ಅಪ್ಪಟ ಕನ್ನಡ ಸಿನಿಮಾಭಿಮಾನಿ ಮನದಲ್ಲಿದ್ದು, ಈ ಚಿತ್ರವೇನಾದರೂ ಕ್ಲಿಕ್ ಆದರೆ ಕನ್ನಡದ ಸ್ಟಾರ್ ನಟರಿಗೆ ಚಿತ್ರ ಮಾಡಬಲ್ಲ ನಿರ್ದೇಶಕನ ಉಗಮವಾಗುವುದು ಖಚಿತ.
ಹೀಗೆ ಮಹತ್ವವನ್ನು ಪಡೆದುಕೊಂಡಿರುವ ಎಕ್ಕ ಫಲಿತಾಂಶದ ಮೇಲೆ ಕನ್ನಡ ಸಿರಿ ರಸಿಕರು ಕಣ್ಣಿಟ್ಟಿದ್ದು, ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಮೊದಲ ಶೋ ಮುಗಿಯುವ ಮುನ್ನವೇ ಕಿಡಿಗೇಡಿಗಳು ಚಿತ್ರ ಫ್ಲಾಪ್ ಎಂಬ ವಿಮರ್ಶೆಗಳನ್ನು ಹರಿಬಿಡುತ್ತಿದ್ದಾರೆ. ಬಳ್ಳಾರಿಯಲ್ಲಿ ಮುಂಜಾನೆ ಚಿತ್ರ ಬೇಗ ಆರಂಭವಾಗಿದ್ದುಬಿಟ್ಟರೆ ಬೆಂಗಳೂರಿನಲ್ಲಿ 9 ಗಂಟೆಯ ನಂತರವೇ ಚಿತ್ರ ತೆರೆಗೆ ಬಂದಿದೆ.
ಆದರೆ ಕಿಡಿಗೇಡಿಗಳು ಮಾತ್ರ 10 ಗಂಟೆಗೆಲ್ಲ ಎಕ್ಕ ಫ್ಲಾಪ್, ಡಿಸಾಸ್ಟರ್ ಎಂದು ಟ್ವೀಟ್ ಮಾಡಿ ವಿಕೃತಿ ಮೆರೆಯುತ್ತಿದ್ದಾರೆ. ಇನ್ನು ಈ ಕಿಡಿಗೇಡಿಗಳ ನೀಚ ಕೃತ್ಯ ಹೊಸತಲ್ಲ. ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾದಾಗ ತಮ್ಮ ನಟನ ಚಿತ್ರಗಳ ಹಾಗೆ ಇವರ ಚಿತ್ರ ಗೆಲ್ಲಬಾರದು ಎಂದು ಪ್ರತಿ ಚಿತ್ರಕ್ಕೂ ಈ ರೀತಿ ಷಡ್ಯಂತ್ರ ನಡೆಸುವುದು ಕಾಮನ್.
ಆದರೆ ಎಲ್ಲದಕ್ಕೂ ಉತ್ತರ ಮ್ಯಾಟಿನಿ ಶೋ ಬಳಿಕ ಲಭ್ಯವಾಗಲಿದ್ದು, ಚಿತ್ರ ಹೇಗಿದೆ ಎಂಬ ಅಸಲಿ ಚಿತ್ರಣ ಆಗಷ್ಟೇ ಹೊರಬೀಳಲಿದೆ.
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


