ಬೆಂಗಳೂರು ಮಹಾನಗರದಲ್ಲಿ ಅನಧಿಕೃತ ಕಟ್ಟಡಗಳು ಮತ್ತು ಬಡಾವಣೆ ನಿರ್ಮಾಣಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಬಹುದೊಡ್ಡ ನಿರ್ಧಾರ ಕೈಗೊಂಡಿದೆ. ಸುಮಾರು 5 ಲಕ್ಷ ಬಿ ಖಾತಾ ಸ್ವತ್ತುಗಳಿಗೆ ‘ಎ’ ಖಾತಾ ಜತೆಗೆ ಎಲ್ಲಾ ಮೂಲ ಸೌಕರ್ಯಗಳ ಅಧಿಕೃತ ವಿಧಾಯತೆ ದೊರಕಲಿದೆ. ಇದಕ್ಕಾಗಿ ಆಸ್ತಿ ಮಾಲೀಕರು ಮಾರ್ಗಸೂಚಿ ದರದ ಶೇಕಡಾ 5 ರಷ್ಟು ಶುಲ್ಕ ಪಾವತಿಸಬೇಕಾಗುತ್ತದೆ.ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ 2009 ರಿಂದ 2024ರ ಸೆಪ್ಟೆಂಬರ್ 30ರ ವರೆಗೆ ನೀಡಲಾಗಿದ್ದ ಬಿ ಖಾತಾ ಆಸ್ತಿ ಹೊಂದಿರುವ ಎಲ್ಲರಿಗೆ ಎ ಖಾತಾ ಮಾನ್ಯತೆ ದೊರೆಯಲಿದೆ. ಸರ್ಕಾರದ ಅಧಿಕೃತ ಅಧಿಸೂಚನೆ ಸದ್ಯದಲ್ಲೇ ಹೊರಬೀಳುವ ನಿರೀಕ್ಷೆಯಿದೆ. ಈ ಮೂಲಕ ಬಿಬಿಎಂಪಿ ಕಾನೂನುಪೂರ್ವಕ ನಕ್ಷೆ, ಪ್ಲಾನಿಂಗ್, ಓಸಿ, ಸಿಸಿ, ಹಾಗೂ ಬ್ಯಾಂಕ್ ಸಾಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ.ಇದರ ಫಲವಾಗಿ, ಈ ಹಿಂದೆ ಬಿ ಖಾತಾ ಆಸ್ತಿಗಳ ಮೇಲೆ ಇರುವ ನೀರು, ವಿದ್ಯುತ್, ಒಳಚರಂಡಿ ಸಂಪರ್ಕ, ಬ್ಯಾಂಕ್ ಲೋನ್‌ಗಳು ಹಾಗೂ ಬಿಬಿಎಂಪಿ ಅನುಮೋದನೆಗಳ ಸಮಸ್ಯೆಗಳಿಗೆ ಈಗ ಪರಿಹಾರ ದೊರೆಯಲಿದೆ. ಈ ನಿರ್ಧಾರವು ನಗರ ನಾಗರಿಕರಿಗೆ ಅನುಕೂಲಕರವಾಗಿದ್ದು, ಯೋಜಿತ ನಗರಾಭಿವೃದ್ಧಿಗೆ ಬಲ ನೀಡಲಿದೆ.
ಎ ಖಾತಾ ಸಿಗಲಿರುವ ಆಸ್ತಿ ಮಾಲೀಕರಾರು?
2009 ರಿಂದ 2024ರ ಸೆಪ್ಟೆಂಬರ್ 30ರ ನಡುವೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ನೀಡಲಾಗಿದ್ದ ಎಲ್ಲಾ ಆಸ್ತಿ ಮಾಲೀಕರಿಗೆ ಈಗ ಎ ಖಾತಾ ಮಾನ್ಯತೆ ಸಿಗಲಿದೆ. ಸರ್ಕಾರದ ಇತ್ತೀಚಿನ ಸಂಪುಟ ತೀರ್ಮಾನದಿಂದಾಗಿ, ಈ ಅವಧಿಯಲ್ಲಿ ಬಿ ಖಾತಾ ಪಡೆದವರು ಮಾರ್ಗಸೂಚಿ ದರದ ಶೇ.5 ಶುಲ್ಕ ಪಾವತಿಸಿದರೆ ಎಲ್ಲ ಮೂಲಸೌಕರ್ಯಗಳೊಂದಿಗೆ ಅಧಿಕೃತ ಎ ಖಾತಾ ಪಡೆಯುತ್ತಾರೆ. 2024ರ ಸೆಪ್ಟೆಂಬರ್ 30 ರ ಬಳಿಕ ಬಿ ಖಾತಾ ನೀಡುವ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಈ ನಿರ್ಧಾರ 2009ರಿಂದ 2024ರ ಸೆ. 30ರವರೆಗೆ ನೀಡಲಾದ ಬಿ ಖಾತಾದಾರರಿಗೆ ಮಾತ್ರ ಅನ್ವಯವಾಗುತ್ತದೆ
ಸರ್ಕಾರದ ಸುತ್ತೋಲೆಯ ಆಧಾರದ ಮೇಲೆ ಬಿ-ಖಾತಾ ನೀಡಲಾಗಿದ್ದರೆ, ಅದನ್ನು ಈಗಿನಿಂದ ಎ-ಖಾತಾ ಎಂದು ಪರಿಗಣಿಸಬಹುದು. ಈ ಬಗ್ಗೆ ಸ್ಪಷ್ಟ ವರದಿ ನೀಡಿರುವ ಸಂಪುಟ, ಇತರ ಎಲ್ಲ ಪ್ರಕರಣಗಳಲ್ಲಿ ಕೂಡ ಪ್ರಸ್ತುತ ಬಿ-ಖಾತಾ ಅನ್ನು ಸರಿಯಾದ ಖಾತೆಯಾಗಿ ಪರಿಗಣಿಸಿ ಕಾನೂನು ಉದ್ದೇಶಕ್ಕೆ ಅಧಿಕೃತವೆಂದು ಪರಿಗಣಿಸಲು ನಿರ್ಧರಿಸಿದೆ.ಈ ಮಹತ್ವದ ತೀರ್ಮಾನದಿಂದ ಬಿಬಿಎಂಪಿ ನಕ್ಷೆ ಅನುಮೋದನೆ, ಓಸಿ (OC), ಸಿಸಿ (CC) ಸೇರಿದಂತೆ ಈಗಾಗಲೇ ಬಿ-ಖಾತಾ ಆಸ್ತಿದಾರರು ಅನುಭವಿಸುತ್ತಿದ್ದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಇದರಿಂದ ಆಸ್ತಿ ಅಭಿವೃದ್ಧಿ, ಮಾರಾಟ, ಯೋಜನೆ ಅನುಮೋದನೆ, ದಾವಾ, ಲೋನ್ ಮುಂತಾದ ವ್ಯವಹಾರಗಳಲ್ಲಿ ಸುಲಭತೆ ಮೂಡಲಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಿಮ್ಮ ನಿವೇಶನದ ಮಾರ್ಗಸೂಚಿ ದರ ಪ್ರತಿ ಚದರ ಅಡಿಗೆ ₹3,000 ಇದ್ದರೆ, ಎ ಖಾತಾ ಪಡೆಯಲು ನೀವು ಸುಮಾರು ₹1.80 ಲಕ್ಷ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಇದಲ್ಲದೆ, ಪ್ರತಿ ಚದರ ಮೀಟರ್‌ಗೆ ₹250ರಂತೆ ಸುಮಾರು ₹27,870 ಅಭಿವೃದ್ಧಿ ಶುಲ್ಕವೂ ವಿಧಿಸಲಾಗುತ್ತದೆ.
ಎ ಖಾತಾ ಯಾರಿಗೆ ಲಾಭ? ಇಲ್ಲಿದೆ ವಿವರ:
‘ಬಿ’ ಖಾತಾ ಪಡೆದಿರುವ ನಿವೇಶನದಾರರು ಬಿಬಿಎಂಪಿಯಿಂದ ಬಿ ಖಾತಾ ಪಡೆದವರು.
ಅನಧಿಕೃತ ಬಡಾವಣೆ ಅಥವಾ ನಿವೇಶನಗಳು ಬಿ ಖಾತಾ ಹೊಂದಿರುವ ಅಥವಾ ಇಲ್ಲದ ಮನೆಗಳು ಹಾಗೂ ಕಟ್ಟಡಗಳಿಗೆ.
ಎಕ್ ನಿವೇಶನದಲ್ಲಿರುವ ಅಪಾರ್ಟ್‌ಮೆಂಟ್‌ಗಳು ಬಿಬಿಎಂಪಿ ಖಾತೆ ಇಲ್ಲದೆ ನಿರ್ಮಿಸಲಾದ ಅಪಾರ್ಟ್‌ಮೆಂಟ್ ಸಮುದಾಯಗಳು.
ಭೂ ಪರಿವರ್ತನೆಯಾದರೂ ಅನುಮೋದನೆ ಇಲ್ಲದ ಖಾಲಿ ನಿವೇಶನಗಳು ಜಿಲ್ಲಾಧಿಕಾರಿಯಿಂದ ಭೂ ಪರಿವರ್ತನೆಯಾಗಿ, ಆದರೆ ಕೆಟಿಸಿಪಿ ಕಾಯ್ದೆಯಂತೆಯೇ ಅನುಮೋದನೆ ಇಲ್ಲದವು.
ಭೂ ಪರಿವರ್ತನೆಯ ಬಳಿಕ ನೋಂದಣಿ ಮೂಲಕ ವಿಭಾಗಗೊಂಡ ಖಾಲಿ ನಿವೇಶನಗಳು.
ಭೂ ಪರಿವರ್ತನೆಯಿಲ್ಲದೆ ವಿಭಾಗವಿಲ್ಲದ ಸರ್ವೆ/ಹಿಸ್ಸಾ ಸಂಖ್ಯೆಯ ಖಾಲಿ ನಿವೇಶನಗಳು.
ಭೂ ಪರಿವರ್ತನೆಯಿಲ್ಲದ ಸರ್ವೆ/ಹಿಸ್ಸಾ ಸಂಖ್ಯೆಯಲ್ಲಿ, ಸೆ.30, 2024ರೊಳಗೆ ನೋಂದಣಿಯ ದಾಖಲೆ ಹೊಂದಿರುವ ನಿವೇಶನಗಳು.
ಈ ಎಲ್ಲ ಕೇಟಗರಿಗಳಿಗೆ ಈಗ ‘ಎ ಖಾತಾ’ ಪಡೆಯಲು ಅವಕಾಶ ನೀಡಿದ್ದು, ಕಾನೂನು ಪ್ರಕ್ರಿಯೆ ಸುಲಭಗೊಳ್ಳಲಿದೆ.
ಇನ್ಮುಂದೆ ಮೆಟ್ರೋದಲ್ಲಿ ಫುಲ್ ನೆಟ್‌ವರ್ಕ್: ವೈಫೈ ಸೇವೆ ಆರಂಭಕ್ಕೆ ಬಿಎಂಆರ್‌ಸಿಎಲ್ ತೀರ್ಮಾನ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


