ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಆಕೆ ಮಲಗಿರುವಾಗಲೇ ಕೊಲೆಗೆ ಯತ್ನಿಸಿದ ಪತಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶ ಮೂಲದ ರಾಮ್ ನರೇಶ್ ಬಂಧಿತ ಆರೋಪಿಯಾಗಿದ್ದಾನೆ. ಈತ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ, ಪತ್ನಿ ಗಾಯತ್ರಿ, ಓರ್ವ ಮಗಳೊಂದಿಗೆ ಆರ್.ಆರ್.ನಗರದ ಕೃಷ್ಣಪ್ಪ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಪತ್ನಿಯ ಶೀಲ ಶಂಕಿಸಿ ಜುಲೈ 13ರಂದು ಪತ್ನಿಗೆ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿ ಪರಾರಿಯಾಗಿದ್ದ, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ರಾಮ್ ಕೆಲಸ ಮಾಡುತ್ತಿದ್ದ, ಕುಡಿತದ ಚಟಕ್ಕೆ ಬಿದ್ದು, ಇತ್ತೀಚೆಗೆ ಕೆಲಸ ತೊರೆದಿದ್ದ. ಮದ್ಯಸೇವನೆಗೆ ಹಣ ನೀಡಲು ಪೀಡಿಸುತ್ತಿದ್ದ. ಅಲ್ಲದೇ, ಪತ್ನಿ ಮೇಲೆ ಅನುಮಾನಗೊಂಡು ಇದೇ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದ.
ಜುಲೈ 13ರಂದು ಇದೇ ವಿಚಾರಕ್ಕಾಗಿ ಕ್ಯಾತೆ ತೆಗೆದು, ಮನೆಯಲ್ಲಿದ್ದ ಮಗಳನ್ನು ಅಂಗಡಿಗೆ ಕಳುಹಿಸಿ ಪತ್ನಿ ಮಲಗಿರುವಾಗಲೇ ಸೀರೆಯಿಂದ ಕುಣಿಕೆ ಸಿದ್ದಪಡಿಸಿ ಹತ್ಯೆಗೆ ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದ. ಅಂಗಡಿಗೆ ಹೋಗಿದ್ದ ಮಗಳು ಮನೆಗೆ ಬಂದಾಗ ವಿಚಾರ ಗೊತ್ತಾಗಿದ್ದು, ನೆರೆಹೊರೆಯವರ ನೆರವಿನಿಂದ ಮಹಿಳೆಯನ್ನ ಕಾಪಾಡಿದ್ದಾರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಪತಿ ನೀಡಿದ ದೂರು ಆಧರಿಸಿ ಆರೋಪಿಯನ್ನ ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಸಣ್ಣ ಉಳಿತಾಯಕ್ಕೆ ಭದ್ರ ಹೂಡಿಕೆ ಆಯ್ಕೆ: ಭಾರತೀಯ ಅಂಚೆ ಕಚೇರಿಯ ಮರುಕಳಿಸುವ ಠೇವಣಿ ಯೋಜನೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


