2025 ರ ಏಷ್ಯಾಕಪ್ (Asia Cup 2025) ಸೆಪ್ಟೆಂಬರ್ 9 ರಿಂದ ಸೆಪ್ಟೆಂಬರ್ 28 ರವರೆಗೆ ನಡೆಯಲಿದೆ.ಇದು ಈ ಪಂದ್ಯಾವಳಿಯ 17 ನೇ ಆವೃತ್ತಿಯಾಗಿದ್ದು, ಈ ಬಾರಿ ಟಿ20 ಸ್ವರೂಪದಲ್ಲಿ ಆಡಲಾಗುವುದು. ಏಷ್ಯಾಕಪ್ ಏಷ್ಯಾದ ಅತಿದೊಡ್ಡ ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಇದನ್ನು 1984 ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಾರಂಭಿಸಿತು. 2016 ರಿಂದ, ಇದನ್ನು ಐಸಿಸಿಯ ಪ್ರಮುಖ ಪಂದ್ಯಾವಳಿಗಳ ಸ್ವರೂಪಕ್ಕೆ ಅನುಗುಣವಾಗಿ ಅಂದರೆ ಏಕದಿನ ಸ್ವರೂಪ ಅಥವಾ 20-ಓವರ್ ಸ್ವರೂಪದಲ್ಲಿ ನಡೆಸಲಾಗುತ್ತಿದೆ.
ಇಲ್ಲಿಯವರೆಗೆ, ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಏಷ್ಯಾಕಪ್‌ನಲ್ಲಿ ಪ್ರಾಬಲ್ಯ ಸಾಧಿಸಿವೆ. ಏಷ್ಯಾಕಪ್ ಯಾವಾಗಲೂ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ರೋಮಾಂಚಕ ಪಂದ್ಯಗಳಿಗೆ ಸಾಕ್ಷಿಯಾಗಿದೆ.
ಭಾರತ ಅತಿ ಹೆಚ್ಚು ಅಂದರೆ 8 ಬಾರಿ (1984, 1988, 1991, 1995, 2010, 2016, 2018, 2023) ಪ್ರಶಸ್ತಿಯನ್ನು ಗೆದ್ದಿದ್ದರೆ, ಶ್ರೀಲಂಕಾ 6 ಬಾರಿ (1986, 1997, 2004, 2008, 2014, 2022) ಚಾಂಪಿಯನ್ ಆಗಿದೆ. ಉಳಿದಂತೆ ಪಾಕಿಸ್ತಾನ ಕೂಡ 2 ಬಾರಿ (2000, 2012) ಟ್ರೋಫಿಯನ್ನು ಗೆದ್ದಿದೆ. ಬಾಂಗ್ಲಾದೇಶ ಕೂಡ 3 ಬಾರಿ ಫೈನಲ್ ತಲುಪಿದೆಯಾದರೂ ಇಲ್ಲಿಯವರೆಗೆ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


