ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಚೀನಾ, ಈಗ ಮಾನವನ ಸಂತಾನೋತ್ಪತ್ತಿಯ ಮೇಲೂ ನಿಯಂತ್ರಣ ಸಾಧಿಸಲು ಮುಂದಾಗಿದೆ. ಇದು ಪ್ರಕೃತಿಯ ಸೃಷ್ಟಿಗೆ ನೇರ ಸವಾಲು ಹಾಕುವಂತಿದೆ. ಮನುಷ್ಯರಂತೆ ಗರ್ಭಧಾರಣೆ ಮಾಡಿ ಮಗುವಿಗೆ ಜನ್ಮ ನೀಡುವ ‘ಗರ್ಭಧಾರಣಾ ರೋಬೋಟ್’ ಅನ್ನು ಚೀನಾ ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ರೋಬೋಟ್, ಬಂಜೆತನದ ಸಮಸ್ಯೆ ಇರುವವರಿಗೆ, ಅಥವಾ ತಮ್ಮದೇ ಕಾರಣಗಳಿಂದ ಗರ್ಭಧಾರಣೆಯನ್ನು ಬಯಸದ ವ್ಯಕ್ತಿಗಳಿಗೆ ಹೊಸ ಆಯ್ಕೆಯನ್ನು ಒದಗಿಸಲಿದೆ.
ಇದು 2026ರ ವೇಳೆಗೆ ಲಭ್ಯವಾಗಲಿದೆ ಎಂದು ವರದಿಯಾಗಿದೆ. ಈ ರೋಬೋಟ್, ಬಂಜೆತನದ ಸಮಸ್ಯೆ ಇರುವವರಿಗೆ ಹಾಗೂ ನೈಸರ್ಗಿಕ ಗರ್ಭಧಾರಣೆ ಬಯಸದವರಿಗೆ ವರದಾನವಾಗಬಹುದು. ಈ ಮೂಲಕ ಚೀನವು ಸೈಸರ್ಗಿಕ ಸೃಷ್ಟಿಗೆ ಸವಾಲು ಹಾಕಲು ಮುಂದಾಗಿದೆ. ಈ ಆವಿಷ್ಕಾರವನ್ನು ಗುಾಂಗ್‌ಜೋ ಆಧಾರಿತ ಕೈವಾ ಟೆಕ್ನಾಲಜಿಯವರು ಅಭಿವೃದ್ಧಿಪಡಿಸುತ್ತಿದ್ದು, ಡಾ. ಝಾಂಗ್ ಕಿಫೆಂಗ್ (ನಾನ್ಯಾಂಗ್ ಟೆಕ್ನಾಲಾಜಿಕಲ್ ಯೂನಿವರ್ಸಿಟಿ) ಇದರ ಮುನ್ನಡೆಸುತ್ತಿದ್ದಾರೆ. ಡಾ. ಝಾಂಗ್ ಅವರ ಬಹಿರಂಗಪಡಿಸಿದ ಮಾಹಿತಿ ಚೀನಾದ ಟಿಕ್‌ಟಾಕ್ ಆವೃತ್ತಿ ಡೌಯಿನ್ ನಲ್ಲಿ ನಡೆದ ಸಂದರ್ಶನದ ವೇಳೆ ಪ್ರಕಟವಾಯಿತು.
ಏನಿದು ತಂತ್ರಜ್ಞಾನ?
ಕೃತಕ ಗರ್ಭಕೋಶ: ಗುವಾಂಗ್‌ಝೌ ಮೂಲದ ಕೈವಾ ಟೆಕ್ನಾಲಜಿ ಸಂಸ್ಥೆ ಈ ಯೋಜನೆಯನ್ನು ಮುನ್ನಡೆಸುತ್ತಿದ್ದು, ಮಾನವ ಗರ್ಭಾಶಯವನ್ನೇ ಹೋಲುವ ಕೃತಕ ಗರ್ಭಕೋಶವನ್ನು ಅಭಿವೃದ್ಧಿಪಡಿಸುತ್ತಿದೆ. ಇದು ಭ್ರೂಣವು ಶಿಶುವಾಗಿ ಬೆಳೆಯಲು ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತದೆ.
ಮಹಿಳೆಯಂತೆಯೇ ಕಾರ್ಯ: ಈ ರೋಬೋಟ್ ಮಹಿಳೆಯಂತೆಯೇ ಒಂಬತ್ತು ತಿಂಗಳುಗಳ ಕಾಲ ಶಿಶುವನ್ನು ತನ್ನೊಳಗೆ ಬೆಳೆಸಿಕೊಂಡು, ಸಾಮಾನ್ಯ ಹೆರಿಗೆ ಮಾದರಿಯಲ್ಲೇ ಹೊರತರುವಂತೆ ವಿನ್ಯಾಸಗೊಳಿಸಲಾಗುತ್ತಿದೆ.
ವೆಚ್ಚ: ಕೃತಕ ಬುದ್ಧಿಮತ್ತೆ ಸಾಧನಗಳಿಗೆ ಹೋಲಿಸಿದರೆ ಇದರ ಬೆಲೆ ಇದು ಸುಮಾರು $13,800 (ಸುಮಾರು 1 ಲಕ್ಷ ಯುವಾನ್) ದರದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ.

ಮಹತ್ವ ಮತ್ತು ಸವಾಲುಗಳು
ಈ ತಂತ್ರಜ್ಞಾನವು ವೈದ್ಯಕೀಯ ಮತ್ತು ಕುಟುಂಬ ವ್ಯವಸ್ಥೆಯನ್ನು ಶಾಶ್ವತವಾಗಿ ಬದಲಾಯಿಸಬಹುದು. ಚೀನಾದಲ್ಲಿ ಬಂಜೆತನದ ಪ್ರಮಾಣವು 2007ರಲ್ಲಿ 11.9% ಇದ್ದದ್ದು, 2020ರಲ್ಲಿ 18%ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನವು ಅಲ್ಲಿನ ಹೆಚ್ಚುತ್ತಿರುವ ಬಂಜೆತನ ಸಮಸ್ಯೆಗೆ ಪರಿಹಾರ ಒದಗಿಸಬಹುದು ಎಂದು ಹೇಳಲಾಗಿದೆ. ಈ ಯೋಜನೆಯ ಬೆಂಬಲಿಗರು ಇದನ್ನು ವೈದ್ಯಕೀಯ ಕ್ಷೇತ್ರದ ಕ್ರಾಂತಿಕಾರಿ ಹೆಜ್ಜೆ ಎಂದು ನೋಡಿದರೆ, ವಿಮರ್ಶಕರು ಇದರ ನೈತಿಕ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಆದರೆ, ಇದು ನೈತಿಕ ಮತ್ತು ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ರೋಬೋಟ್‌ನಿಂದ ಜನಿಸಿದ ಮಗುವನ್ನು ಸಮಾಜವು ಹೇಗೆ ಸ್ವೀಕರಿಸುತ್ತದೆ ಮತ್ತು ಇದು ಕುಟುಂಬ ವ್ಯವಸ್ಥೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ವಿಷಯಗಳ ಕುರಿತು ಕಾನೂನುಗಳನ್ನು ರೂಪಿಸುವುದು ಅನಿವಾರ್ಯವಾಗಿದೆ.
ಮೂತ್ರಪಿಂಡ ಆರೋಗ್ಯ ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ 5 ಸೂಪರ್‌ಫುಡ್ಸ್
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


