Wednesday, September 2, 2026
spot_img
More
    spot_img
    HomeStateDistrictಧರ್ಮಸ್ಥಳ: ಅಸ್ತಿಪಂಜರ ಸಿಕ್ಕಿದ್ಯಾ ಇಲ್ವಾ? ಅನಾಮಿಕ ಹೇಳಿದ್ದು ಸುಳ್ಳಾ? ಸದನದಲ್ಲಿ ಉತ್ತರಿಸಿದ ಪರಮೇಶ್ವರ್

    ಧರ್ಮಸ್ಥಳ: ಅಸ್ತಿಪಂಜರ ಸಿಕ್ಕಿದ್ಯಾ ಇಲ್ವಾ? ಅನಾಮಿಕ ಹೇಳಿದ್ದು ಸುಳ್ಳಾ? ಸದನದಲ್ಲಿ ಉತ್ತರಿಸಿದ ಪರಮೇಶ್ವರ್

    ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪಿಸಿರುವ ಅನಾಮಿಕ ವ್ಯಕ್ತಿಯೊಬ್ಬ ನೀಡಿದ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್‌ಐಟಿ ತಂಡವನ್ನು ರಚಿಸಿದ್ದು, ತನಿಖೆ ನಡೆಯುತ್ತಿದೆ.

    Advertisement

    ಅನಾಮಿಕ ದೂರುದಾರ 17 ಸ್ಥಳಗಳನ್ನು ಗುರುತಿಸಿದ್ದು, ಎಲ್ಲೆಡೆ ಉತ್ಖನನ ಕಾರ್ಯ ನಡೆದಿದೆ. ಇನ್ನು ಎಸ್‌ಐಟಿ ತನಿಖೆ ಮೂರು ವಾರಗಳ ಕಾಲ ನಡೆಯುತ್ತಿದ್ದಂತೆ ಬಿಜೆಪಿ ಶಾಸಕರು ಸರ್ಕಾರದಿಂದ ಎಸ್‌ಐಟಿ ಮಧ್ಯಂತರ ವರದಿಗೆ ಆಗ್ರಹಿಸಿದರು.

    ಅದರಂತೆ ಇಂದು ( ಆಗಸ್ಟ್‌ 18 ) ಗೃಹ ಸಚಿವ ಜಿ. ಪರಮೇಶ್ವರ್‌ ಎಸ್‌ಐಟಿ ಮಧ್ಯಂತರ ವರದಿಯನ್ನು ಬಹಿರಂಗಪಡಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು.

    ಆದರೆ ಪರಮೇಶ್ವರ್‌ ಎಸ್‌ಐಟಿ ಅಧಿಕಾರಿಗಳು ಇನ್ನೂ ಯಾವುದೇ ಮಧ್ಯಂತರ ವರದಿಯನ್ನು ಸಲ್ಲಿಸಿಲ್ಲ, ನಮಗೆ ಇಂತಹ ಸಮಯಕ್ಕೆ ವರದಿ ಬೇಕು ಎಂದು ಅವರನ್ನು ಕೇಳುವ ಹಾಗಿಲ್ಲ. ಅವರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಸಂಪೂರ್ಣ ತನಿಖೆ ಮುಗಿದ ಬಳಿಕ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

    ಅಲ್ಲದೇ ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಸತ್ಯ ಹೊರಬರುವ ತನಕ ವಿರೋಧ ಪಕ್ಷದವರು ತಾಳ್ಮೆಯಿಂದ ಇರಬೇಕು. ತನಿಖೆ ಮುಗಿದ ಬಳಿಕ ಸತ್ಯ ಹೊರಬರಲಿದೆ ಎಂದು ಹೇಳಿದರು.

    ಧರ್ಮಸ್ಥಳದ ಕುರಿತ ಅಪಪ್ರಚಾರ ತಡೆಯಲು ರಾಜ್ಯ ಸರ್ಕಾರಕ್ಕೆ ಇಷ್ಟ ಇಲ್ವಾ?; ವಿಜಯೇಂದ್ರ ಕಿಡಿ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading