Wednesday, September 2, 2026
spot_img
More
    spot_img
    HomeStateDistrictಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಭೂಮಿ ಮೇಲೆ 5 ಬುರುಡೆ ಸಿಕ್ಕರೂ ಏಕೆ ನೆಲ ಅಗೆದು ಕಾರ್ಯಾಚರಣೆ ಮಾಡುತ್ತಿಲ್ಲ?

    ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಭೂಮಿ ಮೇಲೆ 5 ಬುರುಡೆ ಸಿಕ್ಕರೂ ಏಕೆ ನೆಲ ಅಗೆದು ಕಾರ್ಯಾಚರಣೆ ಮಾಡುತ್ತಿಲ್ಲ?

    ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ ದಿನದಿಂದ ದಿನಕ್ಕೆ ಬಲು ಕುತೂಹಲವನ್ನು ಕೆರಳಿಸಿದ್ದು, ಸದ್ಯ ಸೌಜನ್ಯ ಮಾವ ವಿಠ್ಠಲ ಗೌಡ ನೀಡಿದ ಮಾಹಿತಿಯ ಮೇರೆಗೆ ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ.

    Advertisement

    ನಿನ್ನೆ ( ಸೆಪ್ಟೆಂಬರ್‌ 17 ) ಬಂಗ್ಲೆಗುಡ್ಡದಲ್ಲಿ ದಿನವಿಡೀ ಕಾರ್ಯಾಚರಣೆ ನಡೆಸಿದ ಎಸ್‌ಐಟಿ ಅಧಿಕಾರಿಗಳು ಮೂಳೆಗಳನ್ನು ಚೀಲ, ಬಕೆಟ್‌ನಲ್ಲಿ ತುಂಬಿಕೊಂಡು ಹೊರಬಂದರು. ಇನ್ನು ಇಲ್ಲಿ ಶೋಧ ಕಾರ್ಯ ಆರಂಭವಾದ ಕೆಲವೇ ನಿಮಿಷಗಳಲ್ಲೇ ಮೂಳೆಗಳು ಪತ್ತೆಯಾಗಿದ್ದು, ಒಟ್ಟು 9 ಕಡೆಗಳಲ್ಲಿ ಮೂಳೆಗಳು ಸಿಕ್ಕಿವೆ ಎನ್ನಲಾಗಿದೆ.

    ಈ ವೇಳೆ ಒಟ್ಟು 5 ಮಾನವನ ಬುರುಡೆಗಳು ಪತ್ತೆಯಾಗಿದ್ದು, ಸದ್ಯ ಇದು ಪ್ರಕರಣದ ದಿಕ್ಕನ್ನೇ ಬದಲಿಸಿದೆ. ಇನ್ನು ಭೂಮಿಯನ್ನು ಅಗೆಯದೇ ಇಷ್ಟು ಮೂಳೆಗಳು ಸಿಕ್ಕಿದ್ದು, ಆದರೂ ಸಹ ಇಲ್ಲಿ ಏಕೆ ನೆಲ ಅಗೆದು ಶೋಧ ಕಾರ್ಯ ನಡೆಸುತ್ತಿಲ್ಲ ಎಂಬ ಪ್ರಶ್ನೆ ಇದೇ ವೇಳೆ ಹಲವರಲ್ಲಿ ಮೂಡಿದೆ.

    ಇದಕ್ಕೆ ಕಾರಣ ಬಂಗ್ಲೆಗುಡ್ಡ ಒಂದು ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಉತ್ಖನನ ಮಾಡಬೇಕೆಂದರೆ ನ್ಯಾಯಾಲಯದ ಅನುಮತಿ ಪಡೆಯಬೇಕಿದೆ. ಸದ್ಯ ಶೋಧ ಕಾರ್ಯಕ್ಕಾಗಿ ಅರಣ್ಯ ಇಲಾಖೆಯಿಂದ ಅನುಮತಿಯನ್ನು ಮಾತ್ರ ಪಡೆಯಲಾಗಿದೆ.

    ಇದೇ ವಿಚಾರವಾಗಿ ಸೌಜನ್ಯ ಮಾವ ಪುರಂದರ ಗೌಡ ಹಾಗೂ ತುಕಾರಾಂ ಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದು, ಬಂಗ್ಲೆಗುಡ್ಡದಲ್ಲಿ ಉತ್ಖನನ ಮಾಡಲು ಎಸ್‌ಐಟಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಅರ್ಜಿಯ ವಿಚಾರಣೆ ಇಂದು ನಡೆಯಲಿದ್ದು, ನ್ಯಾಯಾಲಯ ಅನುಮತಿ ನೀಡಿದ್ದೇ ಆದರೆ ಬಂಗ್ಲೆ ಗುಡ್ಡದಲ್ಲೂ ಸಹ ಹಾರೆ, ಗುದ್ದಲಿಗಳು ಸದ್ದು ಮಾಡಲಿವೆ.

    ಗ್ರೇಟರ್ ಬೆಂಗಳೂರು ವಾರ್ಡ್ ಮರುಹಂಚಿಕೆ: ಹಳೆಯ 198 ಬಿಬಿಎಂಪಿ ವಾರ್ಡ್‌ಗಳ ಬದಲು ಈಗ ಹೊಸ 400 ವಾರ್ಡ್‌ಗಳು!

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading