ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ತಿಳಿದಿರುವ ವಿಷಯವೇ. ಆದರೂ ಇಷ್ಟು ದಿನಗಳ ಕಾಲ ಈ ಸಿದ್ದರಾಮಯ್ಯನವರ ನಂತರ ಆ ಸ್ಥಾನ ಯಾರು ತುಂಬಲಿದ್ದಾರೆ ಎನ್ನುವ ಪ್ರಶ್ನೆ ಎದ್ದೇ ಇರಲಿಲ್ಲ.
ಏಕೆಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪೂರ್ಣ ಅವಧಿ ಪೂರೈಸುವುದಿಲ್ಲ ಎಂದು ಹೇಳಲಾಗುತ್ತಿತ್ತು. ಆದರೀಗ ಸಿದ್ದರಾಮಯ್ಯ ಯಶಸ್ವಿ ಮೂರು ವರ್ಷಗಳನ್ನು ಪೂರೈಸುವುದರಲ್ಲಿದ್ದು, ಇದೀಗ ಚರ್ಚೆ ಮುಂದಿನ ಸಿಎಂ ಯಾರು ಎನ್ನುವ ಬದಲು ಮುಂದಿನ ನಾಯಕ ಯಾರು, ಸಿದ್ದರಾಮಯ್ಯನವರ ಉತ್ತರಾಧಿಕಾರಿ ಯಾರು ಎನ್ನುವುದರ ಕಡೆ ತಿರುಗಿದೆ.
ಹೀಗಿರುವಾಗಲೇ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಮುಂದಿನ ನಾಯಕ, ಅವರೇ ಸಿದ್ದರಾಮಯ್ಯನವರ ಉತ್ತರಾಧಿಕಾರಿಯಾಗಲಿದ್ದಾರೆ ಎನ್ನಲಾಗುತ್ತಿದ್ದು, ಈ ಕುರಿತು ಮಾಜಿ ಸಚಿವ ಕೆ. ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಅವರೇ ಆಗಲಿ ಬಿಡಿ, ಯಾಕೆ ಕುಮಾರಸ್ವಾಮಿ ದೇವೇಗೌಡರ ಉತ್ತರಾಧಿಕಾರಿಯಾಗಬಹುದು, ಯತೀಂದ್ರ ಸಿದ್ದರಾಮಯ್ಯನವರ ಉತ್ತರಾಧಿಕಾರಿ ಆಗುವ ಹಾಗಿಲ್ವಾ? ಎಂದು ಪ್ರಶ್ನಿಸಿದ ರಾಜಣ್ಣ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾದರೂ ದೊಡ್ಡ ನಾಯಕನಾಗಲಿಲ್ಲ ಎಂದು ಇದೇ ವೇಳೆ ಎಚ್‌ಡಿಕೆ ಕಾಲೆಳೆದರು.
ಅಲ್ಲದೇ ಯತೀಂದ್ರ ಸಿದ್ದರಾಮಯ್ಯನವರೇ ಉತ್ತರಾಧಿಕಾರಿಯಾಗಬೇಕು ಎಂಬುದು ನನ್ನ ಬಯಕೆ ಎಂದ ರಾಜಣ್ಣ ಮುಂದಿನ ದಿನಗಳಲ್ಲಿ ಅವರ ನಾಯಕತ್ವ ಹಾಗೂ ಸ್ಥಾನವನ್ನು ವಹಿಸಿಕೊಂಡು ಇವರು ನಡೆಸಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಆರ್‌ಎಸ್‌ಎಸ್ ಅಂಬೇಡ್ಕರ್ ಸಂವಿಧಾನ ವಿರೋಧಿಗಳು ಎಚ್ಚರಿಕೆಯಿಂದ ಇರಬೇಕು; ಸಿದ್ದರಾಮಯ್ಯ ಕರೆ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


