Saturday, August 8, 2026
spot_img
More
    spot_img
    HomeBreaking Newsವಿದೇಶದ ಆಸ್ತಿ, ಆದಾಯ ಘೋಷಿಸದಿದ್ದವರಿಗೆ ಭಾರೀ ದಂಡದ ಎಚ್ಚರಿಕೆ ನೀಡಿದ ಆದಾಯ ತೆರಿಗೆ ಇಲಾಖೆ

    ವಿದೇಶದ ಆಸ್ತಿ, ಆದಾಯ ಘೋಷಿಸದಿದ್ದವರಿಗೆ ಭಾರೀ ದಂಡದ ಎಚ್ಚರಿಕೆ ನೀಡಿದ ಆದಾಯ ತೆರಿಗೆ ಇಲಾಖೆ

    ಹೊಸದಿಲ್ಲಿ: ತೆರಿಗೆದಾರರು ವಿದೇಶದಲ್ಲಿ ಹೊಂದಿರುವ ಆಸ್ತಿ ಅಥವಾ ವಿದೇಶದಿಂದ ಗಳಿಸಿದ ಆದಾಯದ ವಿವರ ಘೋಷಿಸದಿದ್ದರೆ ಅಂಥವರಿಗೆ ಕಪ್ಪುಹಣ ತಡೆ ಕಾಯ್ದೆಯಡಿ 10 ಲಕ್ಷ ರೂ. ದಂಡ ವಿಧಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

    Advertisement

    2024-25ನೇ ಐಟಿ ರಿಟರ್ನ್‌ (ಐಟಿಆರ್) ಮೌಲ್ಯಮಾಪನ ವರ್ಷದಲ್ಲಿ ಸಲ್ಲಿಸಿರುವ ಐಟಿಆರ್‌ಗಳಲ್ಲಿ ವಿದೇಶಿ ಸ್ವತ್ತು ಅಥವಾ ಆದಾಯ ಕುರಿತು ಘೋಷಣೆ ಮಾಡದಿರುವ ತೆರಿಗೆದಾರರಿಗೆ ಸಂದೇಶ ರವಾನಿಸಲು ಅಭಿಯಾನ ಆರಂಭಿಸಲಾಗಿದೆ. ಇದರ ಭಾಗವಾಗಿ ಇಲಾಖೆಯು ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಮಾಹಿತಿ ಪ್ರಕಟಿಸಿದೆ.

    ವಿದೇಶಿ ಆಸ್ತಿ ಎಂದರೇನು?

    ಐಟಿ ಇಲಾಖೆಯ ಸಲಹೆಯ ಪ್ರಕಾರ ವಿದೇಶದಲ್ಲಿ ಬ್ಯಾಂಕ್ ಖಾತೆ, ವಿಮಾ ಒಪ್ಪಂದ, ಕಂಪನಿ ಅಥವಾ ವ್ಯವಹಾರದಲ್ಲಿನ ಬಡ್ಡಿ, ಸ್ಥಿರಾಸ್ತಿ, ಕಸ್ಟಡಿಯಲ್ ಖಾತೆ, ಟ್ರಸ್ಟಿ, ಷೇರು ಮತ್ತು ಸಾಲಪತ್ರಕ್ಕೆ ಲಭಿಸಿರುವ ಬಡ್ಡಿ ಇತ್ಯಾದಿಯನ್ನು ವಿದೇಶಿ ಸ್ವತ್ತು ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದೆ.

    2024-25ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ವಿಳಂಬ ಹಾಗೂ ಪರಿಷ್ಕೃತ ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರಂದು ಅಂತಿಮ ದಿನವಾಗಿದೆ. ಹಾಗಾಗಿ ಎಲ್ಲಾ ಅರ್ಹ ತೆರಿಗೆದಾರರು ತಮ ಐಟಿ ರಿಟರ್ನ್ಸ್‌ನಲ್ಲಿ ವಿದೇಶಿ ಆಸ್ತಿ (ಎಫ್‍ಎ) ಅಥವಾ ವಿದೇಶಿ ಮೂಲ ಆದಾಯ (ಎಫ್‍ಎಸ್‍ಐ) ವೇಳಾಪಟ್ಟಿಯನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು ಎಂದು ಎಂದು ಇಲಾಖೆ ಎಚ್ಚರಿಸಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading