ಬೆಂಗಳೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಮುಖಾಮುಖಿಯಾಗಿದ್ದು, ಮುಡಾ ಪ್ರಕರಣದ ಬಗ್ಗೆ ಕೆಲ ಸಮಯ ಸ್ವಾಮರಸ್ಯಕರ ಚರ್ಚೆ ನಡೆಸಿದ್ದಾರೆ.
ಬೆಂಗಳೂರಿನಲ್ಲಿಂದು ಬೆಳಗಿನ ಉಪಹಾರಕ್ಕಾಗಿ ಮುಖಾಮುಖಿಯಾದ ಉಭಯ ನಾಯಕರು ನಗುನಗುತ್ತಲೇ ಮುಡಾ ಪ್ರಕರಣದ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ ಅವರು, ಸಿದ್ದರಾಮಣ್ಣ ಹಾಗೂ ನನ್ನ ನಡುವೆ ಯಾವುದೇ ಮುಚ್ಚು ಮರೆಯಿಲ್ಲ. ನಂದು ಏನಿದ್ದರೂ ನೇರ ಮಾತುಕತೆ. ಬೇರೆಯವರಿಗೆ ಹೆದರಿಸುವ ಹಾಗೇ ಹಿಂದೊಂದು ಮುಂದೊಂದು ರೀತಿಯಲ್ಲಿ ಕುತಂತ್ರ ಮಾಡಿದವನಲ್ಲ. ಅದರ ಬಗ್ಗೆಯೂ ನನಗೆ ತಿಳಿದಿಲ್ಲ. ಸಿದ್ದರಾಮಯ್ಯ ಅವರು ನನ್ನ ಮಾತು ಕೇಳಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ. ಮುಡಾದ ಕೇವಲ 14 ನಿವೇಶನಗಳಿಗಾಗಿ ಇಷ್ಟೆಲ್ಲಾ ಆಗುತ್ತಿದೆ. ಅಂದೇ ನನ್ನ ಮಾತು ಕೇಳಿ ನಿವೇಶನಗಳನ್ನು ಹಿಂದಿರುಗಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದರು.
ಬಳಿಕ ಸೋಮಣ್ಣನವರ ಮಾತಿಗೆ ನಗುತ್ತಲೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅದು ಆಗಲ್ಲ ಕೇಳಯ್ಯಾ ಇಲ್ಲಿ. ಭೂ ಸುಧಾರಣೆ ಕಾಯ್ದೆ ಇದ್ದಂತೆ ಪ್ರಕ್ರಿಯೆ ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ನನ್ನದಂತೂ ಏನೂ ತಪ್ಪಿಲ್ಲ. ಸುಮ್ಮನೆ ಗೊತ್ತಿಲ್ಲದೇ ಏನೇನೋ ಮಾತನಾಡಬೇಡ ಎಂದು ಅಪಹಾಸ್ಯ ಮಾಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


