Friday, November 6, 2026
spot_img
More
    spot_img
    HomeEntertainmentಭೈರತಿ ರಣಗಲ್‌ 2 ದಿನದ ಕಲೆಕ್ಷನ್‌ ಕೇವಲ 6 ಕೋಟಿ? ಸತ್ಯ ಬಿಚ್ಚಿಟ್ರು ನಿರ್ಮಾಪಕರು!

    ಭೈರತಿ ರಣಗಲ್‌ 2 ದಿನದ ಕಲೆಕ್ಷನ್‌ ಕೇವಲ 6 ಕೋಟಿ? ಸತ್ಯ ಬಿಚ್ಚಿಟ್ರು ನಿರ್ಮಾಪಕರು!

    ಶಿವರಾಜ್‌ಕುಮಾರ್‌ ನಟನೆಯ ಹಾಗೂ ನರ್ತನ್‌ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಭೈರತಿ ರಣಗಲ್‌ ಕಳೆದ ಶುಕ್ರವಾರವಷ್ಟೇ ಬಿಡುಗಡೆಗೊಂಡಿದ್ದು, ಎಲ್ಲೆಡೆ ತುಂಬಿದ ಪ್ರದರ್ಶನ ಕಾಣುತ್ತಿದೆ.

    ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದ ಕುರಿತು ಉತ್ತಮ ವಾಕ್‌ ಪ್ರಚಾರ ನೀಡಿದ ಪರಿಣಾಮ ಸಿನಿಮಾ ಮೊದಲ ದಿನದಿಂದಲೇ ಭರ್ಜರಿ ರೆಸ್ಪಾನ್ಸ್‌ ಗಳಿಸಿದೆ. ಚಿತ್ರಕ್ಕೆ ಹೆಚ್ಚಿನ ಜನರು ಹರಿದು ಬರುತ್ತಿರುವ ಕಾರಣ ಬೆಂಗಳೂರಿನ ಊರ್ವಶಿ ಹಾಗೂ ಮಾನಸ ಚಿತ್ರಮಂದಿರಗಳು ಸೇರಿದಂತೆ ಇನ್ನೂ ಹಲವೆಡೆ ಹೆಚ್ಚುವರಿ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

    ಹೀಗೆ ಚಿತ್ರ ಪಡೆದುಕೊಳ್ಳುತ್ತಿರುವ ಉತ್ತಮ ವಿಮರ್ಶೆ ಹಾಗೂ ಭರ್ಜರಿ ರೆಸ್ಪಾನ್ಸ್‌ ಕಂಡ ಗಾಂಧಿನಗರದ ಮಂದಿ ಚಿತ್ರ ಒಳ್ಳೆಯ ಗಳಿಕೆ ಮಾಡಿರುವುದಂತೂ ಖಚಿತ ಎನ್ನುತ್ತಿದ್ದಾರೆ. ಹೀಗಿರುವಾಗ ಸಿನಿಮಾ ಕಲೆಕ್ಷನ್‌ ಟ್ರ್ಯಾಕ್‌ ಮಾಡುವ ʼಕನ್ನಡ ಟಾಕೀಸ್‌ʼ ತನ್ನ ಎಕ್ಸ್‌ ಖಾತೆಯಲ್ಲಿ ಭೈರತಿ ರಣಗಲ್‌ ಎರಡು ದಿನಕ್ಕೆ 6.85 ಕೋಟಿ ಗಳಿಸಿದೆ ಎಂದು ಟ್ವೀಟ್‌ ಮಾಡಿತ್ತು.

    ಇದನ್ನು ಕಂಡ ಸಿನಿ ರಸಿಕರು ಚಿತ್ರ ಪಡೆದುಕೊಳ್ಳುತ್ತಿರುವ ಪ್ರತಿಕ್ರಿಯೆಗೂ ಈ ಅಂಕಿಅಂಶಕ್ಕೂ ಹೋಲಿಕೆಯೇ ಇಲ್ಲ ಎಂದು ಕಾಮೆಂಟ್ ಮಾಡಿದ್ದರು. ಸದ್ಯ ಭೈರತಿ ರಣಗಲ್ ಚಿತ್ರಕ್ಕೆ ಬಂಡವಾಳ ಹೂಡಿರುವ ಗೀತಾ ಶಿವರಾಜ್‌ಕುಮರ್‌ ಒಡೆತನದ ಗೀತಾ ಪಿಕ್ಚರ್ಸ್‌ ಎಕ್ಸ್‌ ಖಾತೆ ಸಹ ಈ ಟ್ವೀಟ್‌ ಬಗ್ಗೆ ಪ್ರತಿಕ್ರಿಯಿಸಿದ್ದು ʼಒಂದು ಲಾರಿ ಹಿಡಿಯುವಷ್ಟು ಗಳಿಕೆಯನ್ನು ನೀವು ಬಿಟ್ಟುಬಿಟ್ಟಿದ್ದೀರಿʼ ಎಂದು ಬರೆದುಕೊಳ್ಳುವ ಮೂಲಕ ಚಿತ್ರದ ಗಳಿಕೆ ಇದಕ್ಕಿಂತ ಇನ್ನೂ ದೊಡ್ಡ ಮಟ್ಟದಲ್ಲಿದೆ, ಇದು ನಕಲಿ ಅಂಕಿಅಂಶ ಎಂಬುದನ್ನು ತಿಳಿಸಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search