ಮಂಡ್ಯ: ನಾನು ಕೊವಿಡ್ ಹಗರಣದಲ್ಲಿ ಸಿಲುಕುವ ಪ್ರಮೇಯವೇ ಇಲ್ಲ ಎಂದು ಸಂಸದ ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
ಮಂಡ್ಯದಲ್ಲಿ ಕೋವಿಡ್ ತನಿಖೆ ಕುರಿತು ಮಾತನಾಡಿದ ಅವರು, ನಾನು ಕೋವಿಡ್-19 ಸಮಿತಿಯ ಮುಖ್ಯಸ್ಥನಲ್ಲ, ಆ ಸಮಿತಿಗೆ ಒಬ್ಬ ಸಲಹೆಗಾರ, ನಾನು ಕೇವಲ ಅಭಿಪ್ರಾಯ ಕೊಡುವವನು. ಆದ್ದರಿಂದ ಈ ಹಗರಣದಲ್ಲಿ ಸಿಲುಕುವ ಪ್ರಮೇಯವೇ ಇಲ್ಲ ಎಂದು ಹೇಳಿದರು.
ಇನ್ನು ನಿಮ್ಮ ವಿರುದ್ಧ ಬೆಡ್ ಖರೀದಿ ಬಗ್ಗೆ ಆರೋಪಗಳು ಕೇಳಿಬಂದಿದ್ದವು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂಜುನಾಥ್ ಅವರು, ಸಮಿತಿಯಲ್ಲಿ ಅನೇಕ ತಜ್ಞರು ಹಾಗೂ ಇಲಾಖೆಗಳಿವೆ. ಹಾಗೇಯೇ ಅದು ಮೆಡಿಕಲ್ ಎಮರ್ಜೆನ್ಸಿ. ಪ್ರಪಂಚದಾದ್ಯಂತ ಕೊರೊನಾ ಆರ್ಭಟಿಸುತ್ತಿದ್ದ ಕಾರಣ ನಮ್ಮನ್ನು ಸ್ಪೆಷಲಿಸ್ಟ್ ಆಗಿ ನೇಮಕ ಮಾಡಿಕೊಂಡಿದ್ದರು ಅಷ್ಟೇ. ನಮಗೆ ನೇರ ಆಡಳಿತವಿರಲಿಲ್ಲ ಎಂದರು.
ನಿಮ್ಮ ವಿರುದ್ಧ ತನಿಖೆ ಆದರೆ ಸಿದ್ದನಾ? ಎಂಬ ಮಾಧ್ಯಮದವರ ಪ್ರಶ್ನೆಗೆ, ಮುಂದೆ ನೋಡೋಣ ಬಿಡಿ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


