ರಾಯಚೂರು: ನಿನ್ನೆ ( ನವೆಂಬರ್ 17 ) ನಡೆದ ಪಿಡಿಒ ಪರೀಕ್ಷೆ ವೇಳೆ ಸಿಂಧನೂರಿನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಮಾಡಿದ್ದ 12 ಪರೀಕ್ಷಾರ್ಥಿಗಳ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಹೌದು, ನಿನ್ನೆ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೀಡಾಗಿತ್ತು. ಕೆಪಿಎಸ್‌ಸಿಯ ಮತ್ತೊಂದು ಯಡವಟ್ಟು ಎಂದು ಎಲ್ಲರೂ ಟೀಕಿಸಿದ್ದರು. ಸಿಂಧನೂರು ಪರೀಕ್ಷಾ ಕೇಂದ್ರ ಕೊಠಡಿಯೊಂದರಲ್ಲಿ 24 ಅಭ್ಯರ್ಥಿಗಳಿದ್ದು 12 ಪ್ರಶ್ನೆ ಪತ್ರಿಕೆಗಳನ್ನು ಮಾತ್ರ ನೀಡಿದ್ದಾರೆ ಎಂದು ಆರೋಪಿಸಿ ಹಲವಾರು ಅಭ್ಯರ್ಥಿಗಳು ಕುಷ್ಟಗಿ – ಸಿಂಧನೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು.
ಈ ಸಂಬಂಧ ಪರೀಕ್ಷಾ ಮೇಲ್ವಿಚಾರಕ ಬಸವರಾಜ್ ತಡಕಲ್ ದೂರು ನೀಡಿದ್ದು ಪಶುಪತಿ, ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್ ಸೇರಿ 12 ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ 12 ಜನರು ಯಾದಗಿರಿ ಮೂಲದರು ಎನ್ನಲಾಗಿದೆ. ಸುಳ್ಳು ಸುದ್ದಿ ಹಬ್ಬಿಸಿರುವುದು, ಪ್ರಚೋದನೆ, ರಸ್ತೆ ತಡೆದು ಪ್ರತಿಭಟನೆ ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ. ಪಶುಪತಿ ಎಂಬ ಅಭ್ಯರ್ಥಿ ಘಟನೆಗೆ ಕಾರಣ ಅಂತ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


