Wednesday, November 4, 2026
spot_img
More
    spot_img
    HomeSportsCricketಕೆಎಸ್‌ಸಿಎ ಚುನಾವಣೆ ಮುಂದೂಡಿಕೆ: ನಮ್ಮನ್ನು ನೋಡಿ ಆ ಮಾಜಿ ಕ್ರಿಕೆಟಿಗ ಭಯ ಬಿದ್ದಿದ್ದಾರೆ ಎಂದ ವೆಂಕಟೇಶ್‌...

    ಕೆಎಸ್‌ಸಿಎ ಚುನಾವಣೆ ಮುಂದೂಡಿಕೆ: ನಮ್ಮನ್ನು ನೋಡಿ ಆ ಮಾಜಿ ಕ್ರಿಕೆಟಿಗ ಭಯ ಬಿದ್ದಿದ್ದಾರೆ ಎಂದ ವೆಂಕಟೇಶ್‌ ಪ್ರಸಾದ್‌

    ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ನ ಪದಾಧಿಕಾರಿಗಳ ಚುನಾವಣೆ ಎರಡನೇ ಬಾರಿಗೆ ಮುಂದೂಡಿಕೆಯಾಗಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಅರ್ಹತೆಯಲ್ಲಿ ಗೊಂದಲ ಉಂಟಾದ ಕಾರಣ ಚುನಾವಣಾ ಅಧಿಕಾರಿ ಚುನಾವಣೆಯನ್ನು ಮುಂದೂಡಿದ್ದಾರೆ.

    ಕೆಲವರು ಅಭ್ಯರ್ಥಿಗಳ ಅರ್ಹತೆ ಕುರಿತಾಗ ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಸಮಸ್ಯೆ ಬಗೆಹರಿಸಿಕೊಂಡು ಬನ್ನಿ ಎಂದು ಚುನಾವಣಾಧಿಕಾರಿಗಳು ನವೆಂಬರ್‌ 30ರಂದು ನಡೆಯಬೇಕಿದ್ದ ಚುನಾವಣೆಯನ್ನು ಡಿಸೆಂಬರ್‌ 30ಕ್ಕೆ ಮುಂದೂಡಿದ್ದಾರೆ. ಈ ಹಿಂದೆಯೂ ಸೆಪ್ಟೆಂಬರ್‌ 30ರಂದು ನಿಗದಿಯಾಗಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.

    ಈ ಕುರಿತು ಚುನಾವಣೆಯಲ್ಲಿ ಟೀಮ್‌ ಗೇಮ್‌ ಚೇಂಜರ್ಸ್‌ ತಂಡದ ಪರ ಅಧ್ಯಕ್ಷ ಸ್ಥಾನಕ್ಕೆ ಕಣಕ್ಕಿಳಿಯಲು ಸಿದ್ಧರಾಗಿದ್ದ ವೆಂಕಟೇಶ್‌ ಪ್ರಸಾದ್‌ ಆಕ್ರೋಶ ಹೊರಹಾಕಿದ್ದಾರೆ. ನಿನ್ನೆ ( ನವೆಂಬರ್‌ 17 ) ಬೆಳಗ್ಗೆ ಚುನಾವಣೆ ರದ್ದಾಗಿದೆ ಎಂಬುದನ್ನು ಕೇಳಿದ ಕೂಡಲೇ ತನಗೆ ಶಾಕ್‌ ಆಯಿತು ಎಂದ ವೆಂಕಟೇಶ್‌ ಪ್ರಸಾದ್‌ ಯಾವ ಕಾರಣಕ್ಕೆ ಮುಂದೂಡಿದ್ದಾರೋ ಗೊತ್ತಿಲ್ಲ, ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡು ಈಗ ಮುಂದೂಡಿಕೆ ಎಂದರೆ ಅರ್ಥವೇನು ಎಂದಿದ್ದಾರೆ. ಈ ರೀತಿ ಚುನಾವಣೆಯನ್ನು ಮುಂದೂಡುತ್ತಲೇ ಇದ್ದರೆ ಕ್ರಿಕೆಟ್‌ನ ಗತಿ ಏನು ಆತಂಕ ವ್ಯಕ್ತಪಡಿಸಿದರು.

    ಇನ್ನು ಕಳೆದ ಐವತ್ತು ವರ್ಷಗಳಲ್ಲಿ ಕೆಎಸ್‌ಸಿಎಯನ್ನು ಅನಿಲ್‌ ಕುಂಬ್ಳೆ, ರೋಜರ್‌ ಬಿನ್ನಿ, ರಾಮ್‌ಪ್ರಸಾದ್‌, ಅಶೋಕ್‌ ಆನಂದ್‌ ರೀತಿಯ ಕ್ರಿಕೆಟಿಗರು ಮುನ್ನಡೆಸಿಕೊಂಡು ಬಂದಿದ್ದು, ಇದೀಗ ಆ ಪರಂಪರೆ ಸಂಕಷ್ಟದಲ್ಲಿದೆ ಎಂದರು. ಏಕೆಂದರೆ ಒಬ್ಬ ಕ್ರಿಕೆಟ್‌ ಆಡದ ವ್ಯಕ್ತಿಯನ್ನು ಕ್ರಿಕೆಟಿಗನ ವಿರುದ್ಧ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ ಎಂದರೆ ಆ ಪರಂಪರೆ ನಿಜಕ್ಕೂ ಸಂಕಷ್ಟದಲ್ಲಿದೆ, ಇದರ ಹಿಂದೆ ಯಾರಿದ್ದಾರೆ, ಯಾರು ಇದನ್ನೆಲ್ಲ ಮಾಡಿಸುತ್ತಿದ್ದಾರೆ ಎಂಬುದು ನನಗೆ ಗೊತ್ತು ಎಂದರು.

    ಬ್ರಿಜೇಶ್‌ ಪಟೇಲ್‌ ಅವರೇ ಕ್ರಿಕೆಟಿಗರು ಅಸೋಸಿಯೇಷನ್‌ ಅನ್ನು ನಡೆಸಬೇಕು ಎಂದು ಹೇಳಿದ್ದರು. ಆದರೆ ಇವತ್ತು ಅವರೇ ಅದನ್ನು ವಿರೋಧ ಮಾಡುತ್ತಿರುವುದನ್ನು ನೋಡಿದರೆ ಬೇಜಾರಾಗುತ್ತದೆ. ಆದರೆ ಈ ರೀತಿ ಯಾಕೆ ಮಾಡುತ್ತಿದ್ದಾರೋ, ನನಗನಿಸುತ್ತೆ ಅವರು ನಾವು ಚುನಾವಣೆಗೆ ಮಾಡಿದ ಗ್ರೌಂಡ್‌ ವರ್ಕ್‌ ನೋಡಿ ಭಯಬಿದ್ದಿದ್ದಾರೆ ಎನಿಸುತ್ತದೆ ಎಂದು ಆಕ್ರೋಶ ಹೊರಹಾಕಿದರು.

    Fact Check | ಬುಮ್ರಾ ನೀನು ನನ್ನನ್ನು ಕುಳ್ಳ ಎಂದೆ ಆದರೆ ನಿಮ್ಮ ದೇಶದ ಜನ ನನ್ನನ್ನು ದೇವರು ಎನ್ನುತ್ತಿದ್ದಾರೆ: ಬವುಮಾ ಖಡಕ್‌ ಟಾಂಗ್; ವಿಡಿಯೊ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search