ಬ್ರಿಸ್ಬೇನ್: ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಕಾಂಗರೂಗಳ ವಿರುದ್ಧದ 5 ಪಂದ್ಯಗಳ ಬಾರ್ಡರ್ – ಗವಾಸ್ಕರ್ ಟೆಸ್ಟ್ ಟ್ರೋಫಿಯಲ್ಲಿ ನಿರತವಾಗಿದೆ. ಟ್ರೋಫಿಯ 3ನೇ ಪಂದ್ಯ ಇಂದು (ಡಿಸೆಂಬರ್ 18) ಮುಕ್ತಾಯಗೊಂಡಿದ್ದು, ಈ ಪಂದ್ಯ ಮುಕ್ತಾಯವಾಗುತ್ತಿದ್ದಂತೆ ಭಾರತದ ಲೆಜೆಂಡರಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ್ದಾರೆ.
ಹೀಗೆ ಯಾವುದೇ ಮುನ್ಸೂಚನೆಯನ್ನೂ ನೀಡದೇ ಅಶ್ವಿನ್ ನಿವೃತ್ತಿ ಘೋಷಿಸಿರುವುದು ಆಶ್ಚರ್ಯದ ಜತೆಗೆ ಅನುಮಾನವನ್ನೂ ಸಹ ಹುಟ್ಟುಹಾಕಿದೆ. ಹೌದು, ಯಾವುದಾದರೂ ಆಟಗಾರ ನಿವೃತ್ತಿ ಘೋಷಿಸಬೇಕೆಂದರೆ ಆ ಒಂದು ನಿರ್ದಿಷ್ಟ ಸರಣಿ ಆರಂಭವಾಗುವ ಮುನ್ನವೇ ತಿಳಿಸುತ್ತಾರೆ. ಆದರೆ ಇಲ್ಲಿ ಅಶ್ವಿನ್ ಯಾವುದೇ ಮುನ್ಸೂಚನೆಯನ್ನೂ ಸಹ ನೀಡದೇ ಸರಣಿಯಲ್ಲಿ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ನಿವೃತ್ತಿ ಘೋಷಿಸಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹೌದು, ಈ ಬಾರ್ಡರ್ – ಗವಾಸ್ಕರ್ ಟ್ರೋಫಿ ಮುಕ್ತಾಯವಾದ ಕೂಡಲೇ ಭಾರತ ತಂಡದಿಂದ ಇಬ್ಬರು ಹಿರಿಯ ಆಟಗಾರರನ್ನು ಕೈಬಿಡುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿದ್ದು, ಈ ಪೈಕಿ ಅಶ್ವಿನ್ ಸಹ ಒಬ್ಬರು ಎನ್ನಲಾಗುತ್ತಿತ್ತು. ಹೀಗಾಗಿಯೇ ಅಶ್ವಿನ್ ಸ್ವತಃ ವಿದಾಯ ಹೇಳಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಇನ್ನು ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಸೂಚನೆ ಮೇರೆಗೆ ಬಿಸಿಸಿಐ ಆಟಗಾರರನ್ನು ಕೈಬಿಡಲು ನಿರ್ಧರಿಸಿತ್ತು ಎನ್ನಲಾಗಿದ್ದು, ಹೀಗಾಗಿಯೇ ಅಶ್ವಿನ್ ಸರಣಿ ಮುಕ್ತಾಯಕ್ಕೂ ಮುನ್ನವೇ ಹೊರನಡೆದಿದ್ದಾರೆ ಎನ್ನಲಾಗಿದೆ. ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಬೆಂಚ್ ಕಾದಿದ್ದ ಅಶ್ವಿನ್ ಎರಡನೇ ಪಂದ್ಯದಲ್ಲಿ ಕೇವಲ ಒಂದು ವಿಕೆಟ್ ಪಡೆದಿದ್ದರು ಹಾಗೂ ಮೂರನೇ ಪಂದ್ಯದಿಂದಲೂ ಸಹ ಹೊರಗುಳಿದು ಬೆಂಚ್ ಕಾದಿದ್ದರು.
ಅಶ್ವಿನ್ ಸಾಧನೆ: 106 ಟೆಸ್ಟ್‌ಗಳನ್ನಾಡಿ 537 ವಿಕೆಟ್‌ಗಳನ್ನು ಪಡೆದಿರುವ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 8ರ ಹರೆಯದ ಅವರು 37 ಟೆಸ್ಟ್ಗಳಲ್ಲಿ ಐದು ವಿಕೆಟ್ಗಳ ಗುಚ್ಚ ಗಳಿಸಿದ್ದಾರೆ, ಇದು ಮುತ್ತಯ್ಯ ಮುರಳೀಧರನ್ (67) ನಂತರದ ಎರಡನೇ ಸ್ಥಾನದಲ್ಲಿದೆ. 2011 ಮತ್ತು 2013 ರಲ್ಲಿ ಭಾರತದ ODI ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲೂ ಅಶ್ವಿನ್ ಭಾಗಿಯಾಗಿದ್ದರು. ತಮಿಳುನಾಡು ಮೂಲದ ಸ್ಪಿನ್ನರ್ ಅಶ್ವಿನ್ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಒಟ್ಟು 765 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮೂರು ಸೀಸನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಅಶ್ವಿನ್, 100 WTC ವಿಕೆಟ್‌ಗಳನ್ನು ದಾಖಲಿಸಿದ ಮೊದಲ ಬೌಲರ್ ಆಗಿದ್ದಾರೆ. ಪ್ರಸ್ತುತ 41 ಪಂದ್ಯಗಳಲ್ಲಿ 195 ವಿಕೆಟ್ಗಳೊಂದಿಗೆ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ನಂತರದ ಸ್ಥಾನದಲ್ಲಿ ಆಸ್ಟ್ರೇಲಿಯಾದ ನಾಥನ್ ಲಿಯಾನ್ (190) ಇದ್ದಾರೆ.
ನಾನು ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳುವುದಿಲ್ಲ. ಭಾರತ ಕ್ರಿಕೆಟಿಗನಾಗಿ ಇಂದು ನನಗೆ ಕೊನೆಯ ದಿನವಾಗಿದೆ’ ಎಂದು ಅಶ್ವಿನ್ ನಾಯಕ ರೋಹಿತ್ ಶರ್ಮಾ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


