ನಮ್ಮ ಭಾರತ ಅಂದ್ರೆ ಅಲ್ಲಿ ಬರೀ ‘ಟ್ರಡಿಷನ್’ ಅಷ್ಟೇ ಅಲ್ಲ, ನಂಬೋಕೆ ಕಷ್ಟ ಅನ್ನೋ ಎಷ್ಟೋ ಅಚ್ಚರಿಗಳೂ ಇವೆ. ನಾವು ಎಷ್ಟೇ ಮಾಡರ್ನ್ ಆದ್ರೂ ಮನೆಯಲ್ಲಿ ಅಡುಗೆ ಮಾಡೋದು ಬಿಟ್ಟಿಲ್ಲ. ಆದ್ರೆ, ಈ ಹಳ್ಳಿಯಲ್ಲಿ ಮಾತ್ರ ಯಾರೂ ಒಲೆ ಹಚ್ಚಲ್ಲ, ಅಡುಗೆ ಮಾಡಲ್ಲ! ಹಾಗಿದ್ರೆ ಇಲ್ಲಿನ ಜನ ಹಸಿವಿನಿಂದ ಇರ್ತಾರಾ? ಖಂಡಿತ ಇಲ್ಲ. ಹೊಟ್ಟೆ ತುಂಬಾ ಊಟ ಮಾಡ್ತಾರೆ, ಅಷ್ಟೇ ಅಲ್ಲ ಮಸ್ತ್ ಆಗಿ ಲೈಫ್ ಎಂಜಾಯ್ ಮಾಡ್ತಾರೆ!
ಈ ವಿಶಿಷ್ಟ ಗ್ರಾಮ ಇರೋದು ನಮ್ಮ ಪಕ್ಕದ ಗುಜರಾತ್ ರಾಜ್ಯದ ಮೆಹ್ಸಾನಾ ಜಿಲ್ಲೆಯಲ್ಲಿ. ಹಳ್ಳಿಯ ಹೆಸರು ‘ಚಂದಂಕಿ’. ಈ ಹಳ್ಳಿಯ ಸ್ಪೆಷಾಲಿಟಿನೇ ಇಲ್ಲಿನ ಜನ ತೋರಿಸೋ ಪ್ರೀತಿ ಮತ್ತು ಒಗ್ಗಟ್ಟು.ಈ ಚಂದಂಕಿ ಗ್ರಾಮದ 500ಕ್ಕೂ ಹೆಚ್ಚು ಜನರಿಗೆ ಬರೀ ಒಂದೇ ಕಿಚನ್! ಇಲ್ಲಿನ ಯಾವ ಮನೆಯಲ್ಲೂ ಸಪರೇಟ್ ಅಡುಗೆ ಮನೆ ಇಲ್ಲ.ಇಡೀ ಊರಿಗೆ ಒಂದೇ ಕಡೆ ಅಡುಗೆ ರೆಡಿ ಆಗುತ್ತೆ.ಇದನ್ನು ‘ಕಮ್ಯುನಿಟಿ ಕಿಚನ್’ (Community Kitchen) ಅಂತ ಕರೆಯಲಾಗುತ್ತೆ.ಸಾವಿರ ಜನ ಇರೋ ಈ ಹಳ್ಳಿಯಲ್ಲಿ ಅವಿಭಕ್ತ ಕುಟುಂಬದಂತೆ ಎಲ್ಲರೂ ಒಟ್ಟಿಗೆ ಕೂತು ಹರಟೆ ಹೊಡೆಯುತ್ತಾ ಊಟ ಮಾಡ್ತಾರೆ.
ಈ ಐಡಿಯಾ ಹುಟ್ಟಿದ್ದು ಹೇಗೆ?
ಈ ವಿಶಿಷ್ಟ ಪದ್ಧತಿ ಶುರುವಾಗಿದ್ದು ಮೋಜಿಗೆ ಅಲ್ಲ, ಬದಲಾಗಿ ಅನಿವಾರ್ಯತೆಗೆ. ಹಳ್ಳಿಯ ಬಹುತೇಕ ಯುವಕರು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಪಟ್ಟಣಗಳಿಗೆ ಅಥವಾ ವಿದೇಶಗಳಿಗೆ ಹೋಗಿ ಸೆಟಲ್ ಆದ್ರು. ಆಗ ಊರಲ್ಲಿ ಉಳಿದಿದ್ದು ಬರೀ ವಯಸ್ಸಾದವರು ಮಾತ್ರ.ಪಾಪ, ವಯಸ್ಸಾದ ಮೇಲೆ ಸ್ವತಃ ಅಡುಗೆ ಮಾಡಿಕೊಳ್ಳೋದು ಅವರಿಗೆ ದೊಡ್ಡ ತಲೆನೋವಾಗಿತ್ತು.ಒಂಟಿತನ ಅವರನ್ನು ಕಾಡುತ್ತಿತ್ತು.
ಈ ಸಮಸ್ಯೆಗೆ ಪರಿಹಾರ ಹುಡುಕಿದ್ದೇ ಊರಿನ ಸರಪಂಚ್ ಪೂನಂಬಾಯಿ ಪಟೇಲ್.ವಿದೇಶದಲ್ಲಿ ಕೆಲಸ ಮಾಡಿ ಹಳ್ಳಿಗೆ ಮರಳಿದ ಸರಪಂಚರು, ಈ ‘ಕಮ್ಯುನಿಟಿ ಕಿಚನ್’ ಐಡಿಯಾ ತಂದ್ರು. ಆರಂಭದಲ್ಲಿ ಇದು ಅಚ್ಚರಿ ಎನಿಸಿದ್ರೂ, ಈಗ ಇದು ಊರಿನ ಲೈಫ್ಲೈನ್!ತಿಯೊಬ್ಬರೂ ತಿಂಗಳಿಗೆ ಕೇವಲ 2,000 ರೂ. ಕೊಟ್ರೆ ಸಾಕು, ದಿನಾ ಮೂರು ಹೊತ್ತು ಪೌಷ್ಟಿಕ ಊಟ ರೆಡಿ.ಅಡುಗೆ ಮಾಡೋರಿಗೆ ತಿಂಗಳಿಗೆ 11,000 ರೂ. ಸಂಬಳ ನೀಡಿ ಕೆಲಸಕ್ಕೆ ಇಟ್ಟುಕೊಳ್ಳಲಾಗಿದೆ,ಇಲ್ಲಿರೋದು ಸಾಮಾನ್ಯ ಕಿಚನ್ ಅಲ್ಲ ಸೌರಶಕ್ತಿಯಿಂದ (Solar) ನಡೆಯೋ ಎಸಿ ಹಾಲ್ನಲ್ಲಿ ಅಡುಗೆ ನಡೆಯುತ್ತೆ,ಇಲ್ಲಿ ತಯಾರಾಗೋ ಸಾಂಪ್ರದಾಯಿಕ ಗುಜರಾತಿ ಊಟ ಸವಿಯುತ್ತಾ, ಊರಿನ ಹಿರಿಯರು ಹರಟೆ ಹೊಡೀತಾರೆ.
ಇದರಿಂದ ಅವರ ಒಂಟಿತನ ಮಾಯವಾಗಿದೆ. ಹಬ್ಬ ಬಂದ್ರೆ ಇಡೀ ಊರೇ ಒಟ್ಟಾಗಿ ಸಂಭ್ರಮಿಸುತ್ತೆ. ಇವತ್ತಿಗೂ ಸುಮಾರು 100 ಜನ ಸ್ವಯಂಸೇವಕರು ಈ ಕೆಲಸದಲ್ಲಿ ಕೈಜೋಡಿಸುತ್ತಾರೆ.
ಈಗ ಈ ಹಳ್ಳಿ ಎಷ್ಟು ಫೇಮಸ್ ಅಂದ್ರೆ, ಈ ‘ಅವಿಭಕ್ತ ಹಳ್ಳಿ’ಯ ಸಂಪ್ರದಾಯ ನೋಡೋಕೆ ಪ್ರವಾಸಿಗರು ಲಗ್ಗೆ ಇಡ್ತಿದ್ದಾರೆ. ಬಂದವರಿಗೆ ಊರಿನವರು ಪ್ರೀತಿಯಿಂದ ತಮ್ಮ ಕಮ್ಯುನಿಟಿ ಕಿಚನ್ನ ಊಟ ಬಡಿಸಿ ಕಳಿಸ್ತಾರೆ.ಇವತ್ತಿನ ಕಾಲದಲ್ಲಿ, “ನಾವೆಲ್ಲ ಒಂದೇ” ಅಂತ ಬದುಕ್ತಿರೋ ಈ ಚಂದಂಕಿ ಗ್ರಾಮದ ಜನ ನಿಜಕ್ಕೂ ಗ್ರೇಟ್ ಅಲ್ವಾ? ಇದು ಬರೀ ಹಳ್ಳಿಯಲ್ಲ, ಇವತ್ತಿನ ಸೊಸೈಟಿಗೆ ಒಂದು ದೊಡ್ಡ ಪಾಠ!
134 ಕೋಟಿ ಭಾರತೀಯರ ಆಧಾರ್ ದತ್ತಾಂಶ ಸಂಪೂರ್ಣ ಸುರಕ್ಷಿತ: ಕೇಂದ್ರ ಸರ್ಕಾರ ಘೋಷಣೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


