ಕಂಗನಾ ರಣಾವತ್ ನಿರ್ದೇಶಿಸಿ ನಟಿಸಿರುವ ಎಮರ್ಜೆನ್ಸಿ ಚಿತ್ರ ಇದೇ ಶುಕ್ರವಾರ ( ಜನವರಿ 17 ) ತೆರೆಗೆ ಬಂದಿದ್ದು, ಮೊದಲ ದಿನ ಹೇಳಿಕೊಳ್ಳುವಂತಹ ಓಪನಿಂಗ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ.
ಇಂದಿರಾ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಘೋಷಣೆಯಾಗಿದ್ದ ನ್ಯಾಷನಲ್ ಎಮರ್ಜೆನ್ಸಿ ಕುರಿತಾದ ಈ ಸಿನಿಮಾಗೆ ಸ್ವತಃ ಕಂಗನಾ ರಣಾವತ್ ಕಥೆ ಬರೆದಿದ್ದು, ನಿರ್ದೇನವನ್ನೂ ಮಾಡಿದ್ದಾರೆ. ರಿತೇಶ್ ಶಾ ಚಿತ್ರಕಥೆ ಬರೆದಿದ್ದಾರೆ.
ಕಂಗನಾ ರಣಾವತ್ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಅನುಪಮ್ ಖೇರ್ ಜಯಪ್ರಕಾಶ್ ನಾರಾಯಣ್ ಹಾಗೂ ಶ್ರೇಯಸ್ ತಲ್ಪಾಡೆ ಅಟಲ್ ಬಿಹಾರಿ ವಾಜಪೇಯಿ ಪಾತ್ರವನ್ನು ನಿಭಾಯಿಸಿದ್ದಾರೆ.
ಇನ್ನು ಬಿಡುಗಡೆಗೂ ಮುನ್ನ ಹಲವಾರು ವಿವಾದಗಳಿಗೆ ಒಳಗಾಗಿ ವಿರೋಧಗಳನ್ನು ಎದುರಿಸಿದ್ದ ಚಿತ್ರ ಬಿಡುಗಡೆಯ ನಂತರ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಹೀಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಎಮರ್ಜೆನ್ಸಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಜೀ ಸ್ಟುಡಿಯೊಸ್ ಘೋಷಿಸಿದ್ದು, ಮೊದಲೆರಡು ದಿನಗಳಲ್ಲಿ ಚಿತ್ರ 7.39 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
ಮೊದಲ ದಿನ 3.11 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದ ಎಮರ್ಜೆನ್ಸಿ ಎರಡನೇ ದಿನ 4.28 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


