ಕಾಂತಾರ ಬಳಿಕ ಯಾವುದೇ ಚಿತ್ರಗಳಲ್ಲಿ ನಟಿಸದೇ ಅದರ ಪ್ರೀಕ್ವೆಲ್ ಚಿತ್ರೀಕರಣದಲ್ಲಿ ನಿರತರಾಗಿರುವ ರಿಷಭ್ ಶೆಟ್ಟಿ ಕಾಂತಾರ ಹಿಟ್ ಆಗುವುದಕ್ಕೂ ಮುನ್ನ ಒಪ್ಪಿಕೊಂಡಿದ್ದ ಹಲವು ಕಮರ್ಷಿಯಲ್ ಸಿನಿಮಾಗಳಿಂದ ಹೊರಬಂದಿದ್ದರು.
ಹೀಗಾಗಿ ಕಾಂತಾರ ಪ್ರೀಕ್ವೆಲ್ ಬಳಿಕ ರಿಷಭ್ ಶೆಟ್ಟಿ ಯಾವ ಚಿತ್ರವನ್ನು ಮಾಡಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು. ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜ ಅವರ ಜೀವನಾಧರಿತ ಚಿತ್ರವನ್ನು ಒಪ್ಪಿಕೊಳ್ಳುವ ಮೂಲಕ ರಿಷಭ್ ತಮ್ಮ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದರು.
ಇದೀಗ ಈ ಚಿತ್ರತಂಡದಿಂದ ಬೃಹತ್ ಸುದ್ದಿಯೊಂದು ಹೊರಬಿದ್ದಿದ್ದು, ಚಿತ್ರ 2027ರ ಜನವರಿ 21ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ.
ಅಲ್ಲಿಗೆ ಛತ್ರಪತಿ ಶಿವಾಜಿ ಮಹಾರಾಜ ಚಿತ್ರವನ್ನು ತೆರೆ ಮೇಲೆ ಕಾಣಲು ಇನ್ನೂ ಎರಡು ವರ್ಷಗಳ ಕಾಲ ಕಾಯಬೇಕಿದೆ.
ಇನ್ನು ರಿಷಭ್ ಶೆಟ್ಟಿ ಈ ಚಿತ್ರವನ್ನ ಒಪ್ಪಿಕೊಂಡಾಗಿನಿಂದ ಕರ್ನಾಟಕದ ಕೆಲ ಸಿನಿ ಪ್ರೇಕ್ಷಕರಿಂದ ತೀವ್ರ ವಿರೋಧ ಎದುರಿಸಿದ್ದಾರೆ. ಈ ಚಿತ್ರವನ್ನು ಮಾಡಬಾರದಾಗಿ ಹಲವರು ರಿಷಭ್ ಶೆಟ್ಟಿಗೆ ಆಗ್ರಹಿಸಿದ್ದರು ಹಾಗೂ ಇನ್ನೂ ಕೆಲವರು ಇಷ್ಟು ದಿನಗಳ ಕಾಲ ಒಳ್ಳೊಳ್ಳೆ ಸಾಮಾಜಿಕ ಅಂಶಗಳುಳ್ಳ ಸಿನಿಮಾ ಮಾಡುತ್ತಿದ್ದ ನಟ ಈಗ ಒಂದು ವರ್ಗಕ್ಕಾಗಿ ಸಿನಿಮಾ ಮಾಡಲು ಆರಂಭಿಸಿದ್ದಾರೆ ಎಂದು ಟೀಕಿಸಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


