ಕರಾಚಿ: ಇಲ್ಲಿನ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025ರ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದು, ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 320 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 321 ರನ್‌ಗಳ ಸವಾಲಿನ ಗುರಿಯನ್ನು ನೀಡಿದೆ.
ನ್ಯೂಜಿಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಡಿವಾನ್ ಕಾನ್ವೆ 10 ರನ್ ಗಳಿಸಿದರೆ, ವಿಲ್ ಯಂಗ್ 113 ಎಸೆತಗಳಲ್ಲಿ 107 ರನ್ ಗಳಿಸಿದರು. ಇನ್ನುಳಿದಂತೆ ಕೇನ್ ವಿಲಿಯಮ್ಸನ್ 1 ರನ್, ಡೆರಿಲ್ ಮಿಚೆಲ್ 10 ರನ್, ಗ್ಲೆನ್ ಫಿಲಿಪ್ಸ್ 39 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 61 ರನ್ ಚಚ್ಚಿದರು. ಮೈಕೆಲ್ ಬ್ರೇಸ್‌ವೆಲ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರೆ, ಟಾಮ್ ಲಾಥಮ್ ಅಜೇಯ 118 ರನ್ ಗಳಿಸಿದರು.
ಕಿವೀಸ್ ತನ್ನ ಮೊದಲ ಮೂರು ವಿಕೆಟ್‌ಗಳನ್ನು ಕೇವಲ 73 ರನ್‌ಗೆ ಕಳೆದುಕೊಂಡಿದ್ದಾಗ ಜತೆಯಾದ ವಿಲ್ ಯಂಗ್ ಹಾಗೂ ಟಾಮ್ ಲಾಥಮ್ ಶತಕದ ಜತೆಯಾಟವಾಡಿ ತಂಡದ ಕೈ ಹಿಡಿದರು. ಯಂಗ್ ವಿಕೆಟ್ ಬಳಿಕ ಲಾಥಮ್ ಜತೆ ಕೈ ಜೋಡಿಸಿದ ಗ್ಲೆನ್ ಫಿಲಿಪ್ಸ್ ಅಬ್ಬರದ ಪ್ರದರ್ಶನ ನೀಡಿದರು.
ಪಾಕ್ ಪರ ನಸೀಮ್ ಷಾ ಹಾಗೂ ಹ್ಯಾರಿಸ್ ರೌಫ್ ತಲಾ 2 ವಿಕೆಟ್ ಪಡೆದರೆ, ಅಬ್ರಾರ್ ಅಹ್ಮದ್ ಒಂದ ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


