ಬೆಂಗಳೂರು: ಮುಡಾ ಅಕ್ರಮ ಕೇಸ್ನಲ್ಲಿ ಸಿಎಂ ಸಿದ್ದರಾಮಯ್ಯರ ಅಡಿ ಇರುವ ಲೋಕಾಯುಕ್ತ ಸಂಸ್ಥೆ ಸಿಎಂಗೆ ಕ್ಲೀನ್ಚಿಟ್ ಕೊಡಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮುಂಚೆಯೇ ಪರೋಕ್ಷ ಸುಳಿವು ನೀಡಿದ್ದರು.
ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ಲೋಕಾಯುಕ್ತ ತನಿಖೆಯನ್ನು ತನಿಖೆ ಎಂದು ಕರೆಯವೇಕಾ? ತನಿಖೆ ಮಾಡಿದ ಅಧಿಕಾರಿ ವರದಿ ಕೊಡೋಕೆ ಮೇಲಿನ ಅಧಿಕಾರಿ ಹತ್ತಿರ ಅನುಮತಿ ಪಡೆಯಬೇಕಂತೆ. ವರದಿ ಮೊದಲು ಮೇಲಾಧಿಕಾರಿಗಳಿಗೆ ಕೊಟ್ಟು ಮೇಲಾಧಿಕಾರಿಗಳು ಕ್ಲಿಯರ್ ಮಾಡಿದ ಮೇಲೆ ಇವರು ಲೋಕಾಯುಕ್ತಗೆ ವರದಿ ಕೊಡುತ್ತಾರೆ ಅಂತೆ. ಹೇಗೆ ತನಿಖೆ ಆಗಿದೆ ಎಂದು ಮೇಲಾಧಿಕಾರಿಗೆ ತೋರಿಸಿಕೊಂಡು ಮೇಲಾಧಿಕಾರಿ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ವರದಿ ಕೊಡೋದಾ ಎಂದು ಪ್ರಶ್ನೆ ಮಾಡಿದ್ದರು
ಇನ್ನು ಸರ್ಕಾರದ ಸಿಎಂ ವಿರುದ್ಧ ಅವರ ಕೈಕೆಳಗೆ ಕೆಲಸ ಮಾಡುವ ಅಧಿಕಾರಿಗಳು ಸಿಎಂ ವಿರುದ್ಧ ವರದಿ ಕೊಡುತ್ತಾರಾ? ವಾಸ್ತವಾಂಶ ಏನಾಗಿದೆ ಎಂದು ಸಿದ್ದರಾಮಯ್ಯ ವಿರುದ್ಧ ದಾಖಲೆಗಳು ಚೆಲ್ಲಾಡುತ್ತಿವೆ. ಲೋಕಾಯುಕ್ತದವರು ಮಾಡಿರೋದು ಒಂದು ತನಿಖೆನಾ? ಸಿದ್ದರಾಮಯ್ಯ ವಿರುದ್ಧ ಅವರ ವರದಿ ಕೊಡುತ್ತಾರಾ ಎಂದು ಪರೋಕ್ಷವಾಗಿ ಮುಡಾ ಕೇಸ್ನಲ್ಲಿ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ಕೊಡುತ್ತಾರೆ ಎಂದು ಆರೋಪ ಮಾಡಿದ್ದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


