ಈ ಬಾರಿ ಬೇಸಿಗೆಯ ಆರಂಭದಲ್ಲೇ ಕಡು ಬಿಸಿಲಿನ ತಾಪ ಹೆಚ್ಚಾಗಿದೆ. ಈ ತಾಪವನ್ನು ತಾಳಲಾರದೇ ಜನರು ತಂಪು ಪಾನೀಯಗಳತ್ತ ಧಾವಿಸುತ್ತಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಎಲ್ಲೆತ್ತಲ್ಲೂ ರಾಶಿ ರಾಶಿಯಾಗಿ ಕಲ್ಲಂಗಡಿಗಳು ಕಾಣಿಸುತ್ತಿವೆ. ಈ ಹಣ್ಣು ತಿನ್ನಲು ಮಾತ್ರವಲ್ಲ, ದೇಹಕ್ಕೆ ತಂಪು ನೀಡುವುದರಿಂದಲೂ ಜನಪ್ರಿಯವಾಗಿದೆ. ಕಲ್ಲಂಗಡಿಯ ಹೊರಭಾಗವು ಹಸಿರು ಬಣ್ಣದಲ್ಲಿದ್ದು, ಒಳಗೆ ಕೆಂಪು ಗುಡ್ಡೆಯೊಂದಿಗೆ ಕಪ್ಪು ಬೀಜಗಳು ಹೊಳೆಯುತ್ತವೆ. ಸೀಸನ್ ಆರಂಭದಲ್ಲಿರುವುದರಿಂದ ಬೆಲೆಯೂ ಹಿತವಾಗಿದ್ದು, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇದನ್ನು ಆಸ್ವಾದಿಸುತ್ತಿದ್ದಾರೆ.ಮೊಹಬತ್ ಕಾ ಶರಬತ್ (Mohabbat Ka Sharbat) ಈ ಹೆಸರು ನೀವು ಕೇಳಿದ್ದೀರಾ? ಇದನ್ನು ನೀವು ಈಗಷ್ಟೇ ಕಂಡುಕೊಂಡಿದ್ರಾ? ಆದರೆ ನೀವು ಖಂಡಿತಾ ಟ್ರೈ ಮಾಡಬೇಕಾದ ಒಂದು ಅದ್ಭುತ ಪಾನೀಯ ಇದಾಗಿದೆ! ಸರಳ ಮತ್ತು ರುಚಿಕರವಾದ ಈ ಶರಬತ್ ದೆಹಲಿಯ ಗಲ್ಲಿ ಗಲ್ಲಿಗಳಲ್ಲಿ ಮೊಘಲರ ಕಾಲದಿಂದಲೇ ಪ್ರಚಲಿತವಾಗಿದೆ. ಅದರ ಹಿತವಾದ ಸುವಾಸನೆ ಹಾಗೂ ಸಿಹಿಯಾದ ರುಚಿಯಿಂದ ಇದು ಜನಪ್ರಿಯವಾಗಿದ್ದು, ನವಾಯತ್ ಮುಸ್ಲಿಮರ ಮೂಲಕ ಭಟ್ಕಳದ ತೀರವಾಸಿಗೂ ತಲುಪಿದೆ. ಅಲ್ಲಿಂದ ಇದು ಕರಾವಳಿಯ ಎಲ್ಲೆಡೆ ತನ್ನ ವಿಶೇಷ ಶೈಲಿಯಲ್ಲಿ ಜನರನ್ನು ಮೋಡಿಗೊಳಿಸುತ್ತಾ ಬಂದಿದೆ.

ಬೇಕಾಗುವ ಪದಾರ್ಥಗಳು:
ಹಾಲು – 2ಕಪ್ (ತಣ್ಣಗೆ)
ರೂಹ್ ಅಫ್ತಾ – 4ಚಮಚ
ಕಲ್ಲಂಗಡಿ – 1 ಕಪ್ (ಸಣ್ಣ ತುಂಡುಗಳಾಗಿ ಕತ್ತರಿಸಿದ್ದು)
ಸಕ್ಕರೆ – 1 ದೊಡ್ಡ ಚಮಚ (ಅಗತ್ಯವಿದ್ದರೆ)
ಐಸ್ ತುಂಡುಗಳು -¾ ಕಪ್

ಮೊಹೊಬತ್ ಕಾ ಶರಬತ್ ಸಿದ್ಧಪಡಿಸುವ ವಿಧಾನ:
ನೆನೆಸಿದ ಸಬ್ಬಾ ಸೀಡ್ -1ಚಮಚ,ಸಣ್ಣ ಬಟ್ಟಲಿನಲ್ಲಿ ಸಬ್ಬಾ ಬೀಜಗಳನ್ನು 10-15 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿ, ಅವು ಉಬ್ಬಿ ಜೆಲ್ ತರಹದ ವಿನ್ಯಾಸವನ್ನು ಪಡೆಯುತ್ತವೆ.
ತಣ್ಣನೆಯ ಹಾಲಿನಲ್ಲಿ ರೂಹ್ ಅಫ್ತಾ ಮತ್ತು ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಬೇಕಾದರೆ ಸೇರಿಸಿ ಏಕೆಂದರೆ ರೂಹ್ ಅಫ್ತಾ (ಕೋಕಂ) ಈಗಾಗಲೇ ಸಿಹಿಯಾಗಿರುತ್ತದೆ.
ಕಲ್ಲಂಗಡಿಯ ಸಣ್ಣ ಸಣ್ಣ ತುಂಡುಗಳನ್ನು ಶರಬತ್‌ಗೆ ಹಾಕಿ, ಇದು ಶರಬತ್‌ನ ರುಚಿಯನ್ನು ಇನ್ನಷ್ಟು ಹಣ್ಣಿನಿಂದ ಮತ್ತು ರಿಫ್ರೆಶ್ ಮಾಡುತ್ತದೆ.
ಈಗ ಅದಕ್ಕೆ ಐಸ್ ತುಂಡುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ, ಇದರಿಂದ ಶರಬತ್ ತಂಪಾಗಿ ಮತ್ತು ತಾಜಾತನದಿಂದ ಕೂಡಿರುತ್ತದೆ.
ಸಬ್ಬಾ ಬೀಜಗಳನ್ನು ಹಾಕಿ ಮತ್ತು ಬಡಿಸಿ ಈಗ ನೆನೆಸಿದ ಸಬ್ಬಾ ಬೀಜಗಳನ್ನು ಹಾಕಿ, ಇದು ಶರಬತ್ ಅನ್ನು ಇನ್ನಷ್ಟು ಆರೋಗ್ಯಕರ ಮತ್ತು ತಂಪಾಗಿಸುತ್ತದೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


