Saturday, August 8, 2026
spot_img
More
    spot_img
    HomeSportsCricketIPL 2025: 8 ತಿಂಗಳ ಗರ್ಭಿಣಿ ಥರ ಓಡ್ತಾನೆ ಇವನ್ಯಾವ ಫೀಲ್ಡರ್; ಆರ್‌ಸಿಬಿ ಆಟಗಾರನನ್ನು ಹೀಯಾಳಿಸಿದ...

    IPL 2025: 8 ತಿಂಗಳ ಗರ್ಭಿಣಿ ಥರ ಓಡ್ತಾನೆ ಇವನ್ಯಾವ ಫೀಲ್ಡರ್; ಆರ್‌ಸಿಬಿ ಆಟಗಾರನನ್ನು ಹೀಯಾಳಿಸಿದ ನೆಟ್ಟಿಗರು!

    ಬೆಂಗಳೂರು: ನಿನ್ನೆ ( ಏಪ್ರಿಲ್ 18 ) ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದ್ದವು.

    Advertisement

    ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಿಮ್ ಡೇವಿಡ್ ಅಜೇಯ ಅರ್ಧಶತಕದ ನೆರವಿನಿಂದ 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 96 ರನ್‌ಗಳ ಗುರಿ ನೀಡಿತ್ತು.

    ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಪಂಜಾಬ್ ಕಿಂಗ್ಸ್ 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿ 5 ವಿಕೆಟ್‌ಗಳ ಗೆಲುವು ಕಂಡಿತು.

    ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀನಾಯ ಪ್ರದರ್ಶನ ನೀಡಿದ್ದು, ತಂಡ ಮುಂದಿನ ಪಂದ್ಯಗಳನ್ನು ಗೆಲ್ಲಬೇಕೆಂದರೆ ತಂಡದಲ್ಲಿ ಕೆಲ ಬದಲಾವಣೆಗಳಾಗಬೇಕು ಎಂದು ಅಭಿಮಾನಿಗಳು ಎಕ್ಸ್ ಖಾತೆಯ ಮೂಲಕ ಟ್ವೀಟ್ ಮಾಡಿ ಸಲಹೆ ನೀಡಿವೆ.

    ಲಿಯಾಮ್ ಲಿವಿಂಗ್‌ಸ್ಟನ್ ಅವರನ್ನು ತಂಡದಿಂದ ಹೊರಹಾಕಿ ಎಂದಿರುವ ಅಭಿಮಾನಿಗಳು ನಿನ್ನೆಯ ಪಂದ್ಯದಲ್ಲಿ ಫ್ಲಾಪ್ ಆದ ಯಶ್ ದಯಾಳ್ ವಿರುದ್ಧವೂ ಸಹ ಕಿಡಿಕಾರಿದ್ದಾರೆ. ಒಂದು ಕ್ಯಾಚ್ ಬಿಟ್ಟ ದಯಾಳ್ ಬಳಿಕ ತಡೆಯಬಹುದಾಗಿದ್ದ ಬೌಂಡರಿಯೊಂದನ್ನು ತಡೆಯಲು ಪ್ರಯತ್ನವನ್ನೂ ಸಹ ಮಾಡದೇ ಇದ್ದದ್ದು ಸದ್ಯ ಆಟಗಾರನ ಫಿಟ್‌ನೆಸ್ ಕುರಿತ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

    ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿನ್ನೆಯ ಪಂದ್ಯದಲ್ಲಿ ಹೀನಾಯ ರನ್ ಕಲೆಹಾಕಿ ಸೋತು ಮುಖಭಂಗವನ್ನು ಅನುಭವಿಸಿದ್ದು, ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ ತಂಡದಲ್ಲಿ ಕೆಲ ಬದಲಾವಣೆಗಳು ಆದರೆ ಮಾತ್ರ ಇಂತಹ ತಪ್ಪುಗಳನ್ನಾಗಿಸುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು ಯಶ್ ದಯಾಳ್‌ರನ್ನು ಎಂಟು ತಿಂಗಳ ಗರ್ಭಿಣಿಗೆ ಹೋಲಿಸಿ ಟ್ವೀಟ್ ಮಾಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading