ಬೆಂಗಳೂರು: ನಿನ್ನೆ ( ಏಪ್ರಿಲ್ 18 ) ಮಳೆ ಅಡ್ಡಿಯಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದ 14 ಓವರ್‌ಗಳ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟಿಮ್ ಡೇವಿಡ್ ಅಜೇಯ ಅರ್ಧಶತಕದ ನೆರವಿನಿಂದ 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 96 ರನ್‌ಗಳ ಗುರಿ ನೀಡಿತ್ತು.
ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಪಂಜಾಬ್ ಕಿಂಗ್ಸ್ 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿತು. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿಯ ಟೂರ್ನಿಯಲ್ಲಿ ತವರಿನಲ್ಲಿ ಆಡಿದ ಎಲ್ಲ ಮೂರು ಪಂದ್ಯಗಳನ್ನು ಸೋತಂತಾಗಿದೆ.
ಹೀಗೆ ತವರಿನಲ್ಲಿ ಮತ್ತೊಮ್ಮ ಮುಖಭಂಗ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಸೋಲಿನ ಕುರಿತು ಮಾತನಾಡಿದ್ದು, ಪಂದ್ಯದ ಸೋಲಿಗೆ ಬ್ಯಾಟಿಂಗ್ ವಿಭಾಗ ಎಂಬುದನ್ನು ತಿಳಿಸಿದ್ದಾರೆ. ಆರಂಭದಲ್ಲಿ ಚೆಂಡು ಮಳೆಯ ಕಾರಣದಿಂದಾಗಿ ಸರಾಗವಾಗಿ ಸಾಗದೇ ಪಿಚ್‌ಗೆ ಅಂಟಿಕೊಳ್ಳುತ್ತಿದ್ದು ಎಂದ ರಜತ್ ಬ್ಯಾಟಿಂಗ್ ವಿಭಾಗದವರಾಗಿ ನಾವು ಅದನ್ನು ಎದುರಿಸಿ ಉತ್ತಮವಾಗಿ ಆಡಬೇಕಿತ್ತು ಎಂದರು.
ಇನ್ನು ಜತೆಯಾಟ ಅತಿಮುಖ್ಯ ಎಂದ ರತಜತ್ ವೇಗವಾಗಿ ವಿಕೆಟ್ ಕಳೆದುಕೊಂಡದ್ದು ತಾವು ಮಾಡಿದ ದೊಡ್ಡ ತಪ್ಪು ಹಾಗೂ ಪಾಠವಾಗಿದೆ ಎಂದರು. ಇನ್ನು ಪಿಚ್ ಅಷ್ಟೇನೂ ಕೆಟ್ಟದಾಗಿರಲಿಲ್ಲ ಎಂದ ರಜತ್ ತುಂಬಾ ಸಮಯದ ಕಾಲ ಮಳೆಯಿಂದಾಗಿ ಕವರ್ ಇದ್ದ ಕಾರಣ ಆ ಬೌಲರ್‌ಳಿಗೆ ಅನುಕೂಲವಾಯಿತು ಎಂದರು. ಪಿಚ್ ಹೇಗಿದ್ದರೂ ಅಷ್ಟೇ, ನಾವು ಚೆನ್ನಾಗಿ ಆಡಿ ಗೆಲ್ಲಬಹುದಾದ ಮೊತ್ತ ಕಲೆಹಾಕಬೇಕಿತ್ತು. ಬೌಲಿಂಗ್ ವಿಭಾಗ ಚೆನ್ನಾಗಿ ಪ್ರದರ್ಶನ ನೀಡುತ್ತಿದೆ. ಅದು ದೊಡ್ಡ ಪಾಸಿಟಿವ್ ವಿಷಯ. ಬ್ಯಾಟಿಂಗ್ ವಿಭಾಗದಲ್ಲಿನ ನಮ್ಮ ತಪ್ಪುಗಳನ್ನು ತಿದ್ದುಕೊಳ್ಳುತ್ತೇವೆ ಎಂದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


