ಬೆಂಗಳೂರು: ನಿನ್ನೆ ( ಏಪ್ರಿಲ್ 18 ) ನಗರದ ಚಿನ್ನಸ್ವಾಮಿ ಅಂಗಳದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ವಿರುದ್ಧ ಹೀನಾಯ ಸೋಲು ಕಾಣುವ ಮೂಲಕ ಈ ಬಾರಿ ಇಲ್ಲಿಯವರೆಗೆ ತವರಿನಲ್ಲಿ ನಡೆದ ಎಲ್ಲ ಪಂದ್ಯಗಳಲ್ಲಿಯೂ ಸೋಲನುಭವಿಸಿದೆ.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ವೈಫಲ್ಯವೇ ಈ ಸೋಲಿಗೆ ಕಾರಣವಾಗಿದ್ದು, ಸಾಲ್ಟ್, ಕೊಹ್ಲಿ, ಲಿವಿಂಗ್‌ಸ್ಟನ್, ಕೃನಾಲ್, ಜಿತೇಶ್ ಶರ್ಮಾ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಮನೋಜ್ ಭಂಡಾಗೆ ಮಕಾಡೆ ಮಲಗಿದ್ದು ಈ ಸೋಲಿಗೆ ಕಾರಣ. ಅಂತಿಮ ಹಂತದಲ್ಲಿ ಟಿಮ್ ಡೇವಿಡ್ ಕೈಹಿಡಿಯದಿದ್ದರೆ ರಾಯಲ್ ಚಾಲೆಂಜರ್ಸ್ ಹೀನಾಯ ಮೊತ್ತ ಕಲೆಹಾಕಿ ಮತ್ತಷ್ಟು ಟೀಕೆಗೆ ಎಡೆ ಮಾಡಿಕೊಡುತ್ತಿತ್ತು.
ಇನ್ನು ಪಂದ್ಯದ ಸೋಲಿಗೆ ಕಾರಣವೇನು ಎಂಬ ಚರ್ಚೆಗಳು ಒಂದೆಡೆ ಏರ್ಪಟ್ಟಿದ್ದರೆ, ಮೊತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಂದ್ಯ ವೀಕ್ಷಿಸಿದ್ದಕ್ಕೆ ಆರ್‌ಸಿಬಿ ಸೋತಿದೆ ಎಂದು ಕೆಲವು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊನೆಯ ಹೋಮ್ ಪಿಚ್ ಪಂದ್ಯ ವೀಕ್ಷಿಸಲೂ ಸಹ ಸಿದ್ದರಾಮಯ್ಯ ಸ್ಟೇಡಿಯಂಗೆ ಬಂದಿದ್ದರು. ಆ ಪಂದ್ಯ ಸೋತಾಗಲೂ ಸಹ ಸಿದ್ದರಾಮಯ್ಯನವರ ವಿರುದ್ಧ ಇಂತಹ ಟ್ರೋಲ್ ಮಾಡಿ ಕಾಲೆಳೆದಿದ್ದರು.
ಮಳೆ ಕಾರಣ 14 ಓವರ್‌ಗೆ ಕಡಿತಗೊಂಡ ಈ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಮೊದಲು ಬ್ಯಾಟಿಂಗ್ ಮಾಡಿ ಟಿಮ್ ಡೇವಿಡ್ ಅಜೇಯ ಅರ್ಧಶತಕದ ನೆರವಿನಿಂದ 14 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 95 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 96 ರನ್‌ಗಳ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಪಂಜಾಬ್ ಕಿಂಗ್ಸ್ 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಕಲೆಹಾಕಿತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


