ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ಹಲವು ದಿನಗಳಿಂದ ಚರ್ಚೆಗೀಡಾಗಿರುವ ವಿಷಯಗಳ ಪೈಕಿ ಪ್ರಮುಖವಾದವು ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ. ಸಚಿವ ಸಂಪುಟ ವಿಸ್ತರಣೆ ನಡೆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ( Yathindra Siddaramaiah ) ಸಚಿವರಾಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬದಿವೆ.
ಈ ಕುರಿತು ಸ್ವತಃ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿರುವವರೆಗೂ ಯಾವುದೇ ಸಚಿವ ಸ್ಥಾನವನ್ನು ಹೊಂದಲು ಇಚ್ಛಿಸುವುದಿಲ್ಲ ಎಂದರು. ಈ ವಿಷಯವನ್ನು ತೀರಾ ಹಿಂದೆಯೇ ಸ್ಪಷ್ಟಪಡಿಸಿದ್ದೇನೆ ಎಂದರು ಹಾಗೂ ಈಗಲೂ ಅದೇ ಮಾತನ್ನು ಹೇಳುತ್ತೇನೆ ಎಂದರು.
ಸಿಎಂ ಬದಲಾವಣೆ ಊಹಾಪೋಹ: ಯತೀಂದ್ರ ಸಿದ್ದರಾಮಯ್ಯ ( Yathindra Siddaramaiah )
ಇನ್ನು ಸಚಿವ ಸಂಪುಟ ವಿಸ್ತರಣೆ ಚರ್ಚೆಯ ಬಗ್ಗೆಯೂ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ಅದೆಲ್ಲ ಊಹಾಪೋಹ ತನಗೆ ಗೊತ್ತಿರುವ ಹಾಗೆ ಅಂತಹ ಯಾವುದೇ ಚರ್ಚೆ ಇಲ್ಲ ಎಂದರು. ಅಲ್ಲದೇ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ರಾಜ್ಯ ಕಾಂಗ್ರೆಸ್‌ನ ಫೇಸ್ ಆಗಿದ್ದಾರೆ. ಹೀಗಾಗಿ ಅವರನ್ನು ಟಾರ್ಗೆಟ್ ಮಾಡುವುದು ಸಹಜ ಎಂದರು.

ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂಬ ಮಾತುಗಳು ಅವರು ಮುಖ್ಯಮಂತ್ರಿಯಾದಾಗಿನಿಂದಲೂ ಕೇಳಿ ಬರುತ್ತಿದೆ. ಲೋಕಸಭಾ ಚುನಾವಣೆಯಾದಾಗಲೂ ಈ ಮಾತು ಕೇಳಿಬಂದಿತ್ತು, ಮುಡಾ ವಿವಾದವಾದಾಗಲೂ ಕೇಳಿಬಂದಿತ್ತು ಎನ್ನುತ್ತಾ ವಿರೋಧ ಪಕ್ಷದವರು ಸುಮ್ಮನೆ ಮಾತನಾಡುತ್ತಾರೆ ಎಂದು ಸಿಎಂ ಬದಲಾವಣೆಯನ್ನು ಕಡೆಗಣಿಸಿದರು.
DK Shivakumar: ಡಿಕೆ ಮುಖ್ಯಮಂತ್ರಿಯಾದ್ರೂ ಆಗಲಿ, ಪ್ರಧಾನಮಂತ್ರಿಯಾಗಲಿ ಯಾರು ಬೇಡ ಅಂತಾರೆ?: ಕೆಎನ್ ರಾಜಣ್ಣ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


