ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಹ ಮುಖ್ಯಮಂತ್ರಿ ಸ್ಥಾನದ ಹಂಚಿಕೆಯ ಕುರಿತು ಚರ್ಚೆಗಳು ನಡೆಯುತ್ತಲೇ ಇವೆ. ಸಿದ್ದರಾಮಯ್ಯ ಅರ್ಧ ಅವಧಿಗೆ ಹಾಗೂ ಡಿಕೆ ಶಿವಕುಮಾರ್ ( dk shivakumar ) ಉಳಿದರ್ಧ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಲಾಗುತ್ತಲೇ ಇದೆ.
ವಿರೋಧ ಪಕ್ಷಗಳೂ ಸಹ ಇದೇ ಮಾತನ್ನು ಹೇಳುತ್ತಾ ಬರುತ್ತಿವೆ. ಡಿಕೆ ಶಿವಕುಮಾರ್ ಹೋದಲ್ಲಿ ಬಂದಲ್ಲಿ ಮುಂದಿನ ಮುಖ್ಯಮಂತ್ರಿ ಕೂಗು ಕೇಳಿಬರುತ್ತಲೇ ಇದೆ. ಹೀಗೆ ಇದೇ ನವೆಂಬರ್‌ನಿಂದ ಡಿಕೆಶಿ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುತ್ತಿದ್ದವರು ಇದೀಗ 2028ಕ್ಕೆ ಡಿಕೆ ಶಿವಕುಮಾರ್ ಅಧಿಕಾರಕ್ಕೆ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಡಿಕೆ ಶಿವಕುಮಾರ್ ( dk shivakumar ) ಬಗ್ಗೆ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ಅಲ್ಲದೇ ಸ್ವತಃ ಡಿಕೆ ಶಿವಕುಮಾರ್ ಸಹ ಈ ಕುರಿತು ಮಾತನಾಡಿದ್ದು, ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಕೆಎನ್ ರಾಜಣ್ಣ ಡಿಕೆ ಶಿವಕುಮಾರ್ ಸರ್ಕಾರ ಬರಲಿ, ಅವರು ಮುಖ್ಯಮಂತ್ರಿಯಾದರೂ ಆಗಲಿ ಅಥವಾ ಪ್ರಧಾನಮಂತ್ರಿಯಾಗಲಿ ಯಾರು ಬೇಡ ಅಂತಾರೆ ಎಂದರು.

ಅಲ್ಲದೇ ಏನೇ ಆದರೂ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳುವವರು ಹೈಕಮಾಂಡ್‌ನವರು, ಪಕ್ಷಕ್ಕೆ ಬಹುಮತ ತಂದು ಅಧಿಕಾರಕ್ಕೆ ತರುವುದು ಸಾಮೂಹಿಕ ನಾಯಕರ ಕರ್ತವ್ಯ. ಆದರೆ ಮುಖ್ಯಮಂತ್ರಿ ಆಯ್ಕೆ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಹೇಳಿಕೆ ನೀಡಿದರು. ಈ ಮೂಲಕ ಯಾರು ಏನೇ ಹೇಳಿಕೆ ಕೊಟ್ಟರೂ, ಯಾರೇ ಪಕ್ಷವನ್ನು ಅಧಿಕಾರಕ್ಕೆ ತಂದರೂ ಅಂತಿಮವಾಗಿ ಹೈಕಮಾಂಡ್‌ನವರು ಹೇಳಿದವರೇ ಸಿಎಂ ಎಂದು ರಾಜಣ್ಣ ಅರ್ಥೈಸಿದ್ದಾರೆ.
ಕುಮಾರಸ್ವಾಮಿಗೆ ಪಂಚೆ, ಪ್ಯಾಂಟ್ ಎಲ್ಲಾ ಕಳುಹಿಸೋಣ; ಚುನಾವಣೆ ಗೆಲ್ಲುತ್ತೇವೆ ಎಂದಿದ್ದಕ್ಕೆ ಡಿಕೆಶಿ ವ್ಯಂಗ್ಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


