Monday, September 21, 2026
spot_img
More
    spot_img
    HomeTop Storyಕುಮಾರಸ್ವಾಮಿಗೆ ಪಂಚೆ, ಪ್ಯಾಂಟ್‌ ಎಲ್ಲಾ ಕಳುಹಿಸೋಣ; ಚುನಾವಣೆ ಗೆಲ್ಲುತ್ತೇವೆ ಎಂದಿದ್ದಕ್ಕೆ ಡಿಕೆಶಿ ವ್ಯಂಗ್ಯ

    ಕುಮಾರಸ್ವಾಮಿಗೆ ಪಂಚೆ, ಪ್ಯಾಂಟ್‌ ಎಲ್ಲಾ ಕಳುಹಿಸೋಣ; ಚುನಾವಣೆ ಗೆಲ್ಲುತ್ತೇವೆ ಎಂದಿದ್ದಕ್ಕೆ ಡಿಕೆಶಿ ವ್ಯಂಗ್ಯ

    ಎಚ್‌ಡಿ ಕುಮಾರಸ್ವಾಮಿಯವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಉತ್ತಮ ಸಾಧನೆ ಮಾಡಲಿದೆ ಎಂದು ನೀಡಿದ ಹೇಳಿಕೆಯನ್ನು ಕಾಂಗ್ರೆಸ್‌ ನಾಯಕರು ಟೀಕಿಸಿದ್ದು, ಇದುವರೆಗೂ ದೊಡ್ಡ ಸಂಖ್ಯೆ ಗೆಲ್ಲಲಾಗದ ಪಕ್ಷಕ್ಕೆ ಅತಿಯಾದ ಬಿಲ್ಡಪ್‌ ಬೇಡ ಎಂದಿದ್ದಾರೆ.

    Advertisement

    ಇನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಹ ಈ ಕುರಿತು ಮಾತನಾಡಿದ್ದು, ಕುಮಾರಸ್ವಾಮಿ ಮುಂದಿನ ಬಾರಿ ಗೆದ್ದು ಅಧಿಕಾರ ಹಿಡಿಯುತ್ತಾರಂತೆ ಎನ್ನುತ್ತಿದ್ದಂತೆ ಕುಮಾರಸ್ವಾಮಿಗೆ ಪಂಚೆ, ಜುಬ್ಬಾ, ಕೋಟ್‌ ಏನು ಬೇಕೋ ಎಲ್ಲವನ್ನು ತಂದುಕೊಡೋಣ ಅಧಿಕಾರಕ್ಕೆ ಬರಲಿ ಬಿಡಿ ಎಂದು ವ್ಯಂಗ್ಯವಾಡಿದರು.

    ಇನ್ನು ತಮ್ಮ ಸಹೋದರ ಡಿಕೆ ಸುರೇಶ್‌ಗೆ ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ಇಡಿ ಸಮನ್ಸ್‌ ನೀಡಿರುವುದರ ಕುರಿತು ಸಹ ಮಾತನಾಡಿದ ಡಿಕೆ ಶಿವಕುಮಾರ್‌ ಡಿಕೆ ಸುರೇಶ್‌ ಹಾಗೂ ಐಶ್ವರ್ಯಾ ಗೌಡ ಪಕ್ಷದ ಯಾವುದೋ ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿರಬಹುದು ಬಿಟ್ಟರೆ ಬೇರೇನೂ ಇಲ್ಲ ಎಂದಿದ್ದಾರೆ.

    ಸ್ವತಃ ಡಿಕೆ ಸುರೇಶ್‌ ಅವರೇ ತನಗೂ ಈಕೆಗೂ ಯಾವುದೇ ಸಂಬಂಧವಿಲ್ಲ ಒಂದು ತನಿಖೆ ಆಯೋಜಿಸಿ ಎಂದು ದೂರು ನೀಡಿದ್ದಾರೆ ಎಂದು ಡಿಕೆ ಶಿವಕುಮಾರ್‌ ತಿಳಿಸಿದರು. ಇಡಿಗೆ ನಾವು ಸಹಕಾರ ನೀಡುತ್ತೇವೆ, ಇಡಿ ನನಗಾಗಲಿ ಸುರೇಶ್‌ಗಾಗಲಿ ಹೊಸತೇನಲ್ಲ, ಅವರೂ ಕಾನೂನು ಚೌಕಟ್ಟಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.

    ಇನ್ನು ಐಶ್ವರ್ಯ ಗೌಡ ವಿರುದ್ಧ ಆರ್‌ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಶಿಲ್ಪಾ ಗೌಡ ಎಂಬುವವರು ವಂಚನೆ ದೂರು ನೀಡಿದ್ದರು. ಶಿಲ್ಪಾ ಗೌಡ ಕಾಂಗ್ರೆಸ್‌ ಮುಖಂಡ ತಿಬ್ಬೇಗೌಡ ಪತ್ನಿಯಾಗಿದ್ದಾರೆ. ಐಶ್ವರ್ಯಾ ಗೌಡ ವಿರುದ್ಧ 3 ಕೋಟಿ 25 ಲಕ್ಷ ನಗದು ಹಾಗೂ 430 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾಳೆ ಎಂದು ಆರೋಪಿಸಿ ಶಿಲ್ಪಾ ಗೌಡ ದೂರು ನೀಡಿದ್ದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading