ಶಿಮ್ಲ: ಹಿಮಾಚಲ ಪ್ರದೇಶದ ಉಣ್ಣಾ ಜಿಲ್ಲೆಯಲ್ಲಿರುವ ಮಾತಾ ಚಿಂತಪೂರ್ಣಿ ದೇವಸ್ಥಾನದ ಗರ್ಭಗೃಹದಲ್ಲಿ ಪೂಜಾರಿ ಮತ್ತು ಸೆಕ್ಯೂರಿಟಿ ನಡುವೆ ಗಲಾಟೆ ಸಂಭವಿಸಿದೆ. ಈ ಘಟನೆಯಲ್ಲಿ ಪರಸ್ಪರ ಬಡಿದಾಟ ಹಾಗೂ ನಿಂದನೆಗಳು ನಡೆದಿದೆ.
ದೇವಸ್ಥಾನದ ಒಳಗೆ ಭಕ್ತಾದಿಗಳ ಪ್ರವೇಶ ಮತ್ತು ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಾದ ಉದ್ಭವಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ, ಈ ಘಟನೆ ಜೂನ್ 17ರಂದು ಸಂಭವಿಸಿದ್ದು, ದೇವಸ್ಥಾನದ ಗರ್ಭಗೃಹದಲ್ಲಿ ಪೂಜಾರಿ ಮತ್ತು ಸೆಕ್ಯೂರಿಟಿ ನಡುವೆ ತೀವ್ರ ಗಲಾಟೆಗೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಕೈ ಕೈ ಮಿಲಾಯಿಸಿದ್ದು, ಈ ವಿವಾದದ ನಂತರ ಸಂಬಂಧಿತ ಸೆಕ್ಯೂರಿಟಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗರ್ಭಗುಡಿಯಲ್ಲಿ ಈ ರೀತಿ ಕಿತ್ತಾಡಿದ್ದು ತಪ್ಪು ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಅಲ್ಲದೇ ಪೂಜಾರಿ ಹಾಗೂ ಸೆಕ್ಯೂರಿಟಿ ಇಬ್ಬರೂ ತಪ್ಪು ಮಾಡಿರುವಾಗ ಕೇವಲ ಸೆಕ್ಯೂರಿಟಿಗೆ ಏಕೆ ಶಿಕ್ಷೆ, ಪೂಜಾರಿ ವಿರುದ್ಧವೂ ಕ್ರಮ ತೆಗೆದುಕೊಳ್ಳಿ ಎಂದಿದ್ದಾರೆ. ಅಲ್ಲದೇ ತಾಳ್ಮೆ ಇಲ್ಲದ ಈತನನ್ನು ಪೂಜಾರಿ ಮಾಡಿದ್ದು ಯಾರು ಎಂದೂ ಸಹ ಕಾಲೆಳೆದಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


