Tuesday, November 3, 2026
spot_img
More
    spot_img
    HomeLatest newsಬೆಂಗಳೂರಿನಲ್ಲಿ ಆಪಲ್‌ನ ಬೃಹತ್ ಯೋಜನೆ: 1010 ಕೋಟಿ ರೂ. ವೆಚ್ಚದಲ್ಲಿ ಹೊಸ ಕಚೇರಿ!

    ಬೆಂಗಳೂರಿನಲ್ಲಿ ಆಪಲ್‌ನ ಬೃಹತ್ ಯೋಜನೆ: 1010 ಕೋಟಿ ರೂ. ವೆಚ್ಚದಲ್ಲಿ ಹೊಸ ಕಚೇರಿ!

    ಬೆಂಗಳೂರು;ಅಮೆರಿಕ ಮೂಲದ ಟೆಕ್ ದೈತ್ಯ ಮತ್ತು ಐಫೋನ್ ತಯಾರಕ ಆಪಲ್, ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ದೊಡ್ಡ ಯೋಜನೆ ರೂಪಿಸಿದೆ. ಇದರ ಭಾಗವಾಗಿ, ಬೆಂಗಳೂರಿನಲ್ಲಿ 2.7 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು 10 ವರ್ಷಗಳ ಕಾಲ ಗುತ್ತಿಗೆಗೆ ಪಡೆದುಕೊಂಡಿದೆ. ವಸಂತನಗರದ ಸ್ಯಾಂಕಿ ರಸ್ತೆಯಲ್ಲಿರುವ ಎಂಬಸಿ ಜೆನಿತ್ ಕಟ್ಟಡದ 5ರಿಂದ 13ನೇ ಮಹಡಿಗಳನ್ನು ಆಪಲ್ ಬಳಸಲಿದೆ.

    ಈ ಬಾಡಿಗೆ ಒಪ್ಪಂದದ ಒಟ್ಟು ವೆಚ್ಚ (ಬಾಡಿಗೆ + ಪಾರ್ಕಿಂಗ್ + ನಿರ್ವಹಣೆ) ₹1,010 ಕೋಟಿ. ಕಂಪನಿ ಮಾಸಿಕವಾಗಿ ₹6.31 ಕೋಟಿ ಬಾಡಿಗೆ ಪಾವತಿಸಲಿದೆ, ಅಂದರೆ ಪ್ರತಿ ಚದರ ಅಡಿಗೆ ₹235. ಒಪ್ಪಂದ ಪ್ರಕಾರ ಪ್ರತಿ ವರ್ಷ ಬಾಡಿಗೆ 4.5% ಹೆಚ್ಚಳವಾಗಲಿದೆ. ಕಂಪನಿಯು ₹31.57 ಕೋಟಿ ಭದ್ರತಾ ಠೇವಣಿ ಇಟ್ಟಿದ್ದು, ಗುತ್ತಿಗೆ ಏಪ್ರಿಲ್ 3, 2025ರಿಂದ ಆರಂಭವಾಗಿದೆ.

    ಬೆಂಗಳೂರಿನಲ್ಲಿ ಇದು ದಾಖಲೆಯ ಮಟ್ಟದ ಬಾಡಿಗೆ ಒಪ್ಪಂದಗಳಲ್ಲಿ ಒಂದಾಗಿದೆ. ಈ ಕಟ್ಟಡದಲ್ಲಿ ಕನಿಷ್ಠ 1,200 ಮಂದಿ ಕೆಲಸ ಮಾಡುವ ನಿರೀಕ್ಷೆ ಇದೆ. ಕಂಪನಿ ಕೆಳಗಿನ ಮಹಡಿಗಳನ್ನೂ ಬಾಡಿಗೆಗೆ ಪಡೆಯುವ ಆಲೋಚನೆಯಲ್ಲಿ ಇದೆ.

    ಮುಂಬೈ ಮತ್ತು ದೆಹಲಿಯಲ್ಲಿ ಮಳಿಗೆಗಳನ್ನು ಯಶಸ್ವಿಯಾಗಿ ತೆರೆದಿರುವ ಆಪಲ್, ಇದೀಗ ಬೆಂಗಳೂರಿನ ಫೀನಿಕ್ಸ್ ಮಾಲ್ ಆಫ್ ಏಷ್ಯಾದಲ್ಲಿ ತನ್ನ ಮೂರನೇ ಅಧಿಕೃತ ಮಳಿಗೆಯನ್ನು ತೆರೆಯಲು ಸಿದ್ಧವಾಗಿದೆ. ಸುಮಾರು 8,000 ಚದರ ಅಡಿ ಜಾಗವನ್ನು 10 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದಿದ್ದು, ವಾರ್ಷಿಕ ಬಾಡಿಗೆ ₹2.09 ಕೋಟಿ ಆಗಲಿದೆ.

    ಆಪಲ್ ಭಾರತದಲ್ಲಿ ತನ್ನ ಎಂಜಿನಿಯರಿಂಗ್ ಮತ್ತು ರೀಟೇಲ್ ಕಾರ್ಯಾಚರಣೆಗಳನ್ನು ವೇಗವಾಗಿ ವಿಸ್ತರಿಸುತ್ತಿದೆ. ಬೆಂಗಳೂರಿನ ಪ್ರೆಸ್ಟೀಜ್ ಮಿನ್ಸ್ಕ್ ಸ್ಕ್ವೇರ್ನಲ್ಲಿರುವ ಅತ್ಯಾಧುನಿಕ ಕೇಂದ್ರದಲ್ಲಿ ಸಂಶೋಧನೆ, ಹಾರ್ಡ್‌ವೇರ್ ವಿನ್ಯಾಸ, ಸಾಫ್ಟ್‌ವೇರ್ ಅಭಿವೃದ್ಧಿ, ಪರೀಕ್ಷೆ ಮುಂತಾದ ಕಾರ್ಯಗಳನ್ನು ಮುಂದುವರೆಸಿದೆ. ಜೊತೆಗೆ, ಅಪ್ಲಿಕೇಶನ್ ಆಕ್ಸಿಲರೇಟರ್ ಮೂಲಕ iOS ಡೆವಲಪರ್‌ಗಳಿಗೆ ಮಾರ್ಗದರ್ಶನ ನೀಡುತ್ತಿದೆ.

    ಕಂಪನಿ ಪ್ರಸ್ತುತ ಮೆಷಿನ್ ಲರ್ನಿಂಗ್ ಎಂಜಿನಿಯರ್, ಸಾಫ್ಟ್‌ವೇರ್ ಡೆವಲಪರ್, RF ಸಿಸ್ಟಮ್ ಇಂಟಿಗ್ರೇಷನ್ ಎಂಜಿನಿಯರ್, ಪ್ರೋಗ್ರಾಂ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿದೆ. ಇದರೊಂದಿಗೆ, ಬೆಂಗಳೂರು ಆಪಲ್‌ಗೆ ಜಾಗತಿಕ ಮಟ್ಟದ ಪ್ರಮುಖ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ.

    ಐಟಿಐ ಪಾಸಾದವರಿಗೆ ಅವಕಾಶ: DRDO 70ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search