ಮಡಿಕೇರಿ: ಕಳೆದ ಎರಡು ದಿನಗಳಿಂದ ಧರ್ಮಸ್ಥಳ ಪ್ರಕರಣದ ದಿಕ್ಕೇ ಬದಲಾಗಿ ಹೋಗಿದೆ. ಧರ್ಮಸ್ಥಳದ ಆರೋಪಗಳೆಲ್ಲ ಬುರುಡೆ, ಸುಳ್ಳು ಎನ್ನುತ್ತಿದ್ದವರು ಬಾಯಿ ಮುಚ್ಚಿಕೊಂಡು ತೆಪ್ಪಗಾಗಿದ್ದು, ಮೂಳೆಗಳ ಮೇಲೆ ಮೂಳೆಗಳು ಲಭಿಸತೊಡಗಿವೆ.
ಈ ಮೂಲಕ ಧರ್ಮಸ್ಥಳ ಪ್ರಕರಣ ಭಾರೀ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಈ ಪರಿ ತಿರುವು ಕೊಟ್ಟಿದ್ದು ಬಂಗ್ಲೆಗುಡ್ಡದಲ್ಲಿ ಎಸ್‌ಐಟಿ ಅಧಿಕಾರಿಗಳು ನಡೆಸಿದ ಸ್ಥಳ ಮಹಜರು. ಹೌದು, ಸೌಜನ್ಯ ಮಾವ ವಿಠ್ಠಲ ಗೌಡ ನೀಡಿದ ಮಾಹಿತಿಯ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಬಂಗ್ಲೆ ಗುಡ್ಡದಲ್ಲಿ ನಿನ್ನೆ ( ಸೆಪ್ಟೆಂಬರ್ 18 ) ಹಾಗೂ ಮೊನ್ನೆ ಶೋಧ ಕಾರ್ಯ ನಡೆಸಿದ್ದು, ಒಟ್ಟು 7 ಬುರುಡೆಗಳು ಹಾಗೂ ಹಲವಾರು ಮೂಳೆಗಳು ಪತ್ತೆಯಾಗಿವೆ.
ಇದೇ ಸಂದರ್ಭದಲ್ಲಿ ಮಡಿಕೇರಿ ಮೂಲದ ಯು.ಬಿ ಅಯ್ಯಪ್ಪ ಎಂಬ ವ್ಯಕ್ತಿಯ ಗುರುತಿನ ಚೀಟಿ ಸಹ ಅಸ್ತಿಪಂಜರದ ಬಳಿ ಪತ್ತೆಯಾಗಿದ್ದು, ಈ ವ್ಯಕ್ತಿಯ ಪುತ್ರ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
2017ರ ಜೂನ್ 18ರ ಭಾನುವಾರದಂದು ತಮ್ಮ ತಂದೆ ಚಿಕಿತ್ಸೆಗೆಂದು ಮೈಸೂರಿಗೆ ತೆರಳಿದ್ದು. ಅವರನ್ನು ಬಸ್‌ಸ್ಟಾಂಡ್‌ಗೆ ಡ್ರಾಪ್ ಮಾಡಿದ್ದೆ, ಸುಮಾರು 11 ಗಂಟೆಗೆ ಕರೆ ಮಾಡಿ ತಡವಾಯಿತು, ಈ ದಿನ ಬರುವುದು ವಿಳಂಬವಾಗಬಹುದು ಎಂದು ತಿಳಿಸಿದ್ದರು. ಆದರೆ ಆ ಬಳಿಕ ಕರೆ ಮಾಡಿದರೆ ನಾಟ್ ರೀಚಬಲ್ ಬಂತು ಆ ಬಳಿಕ ಅವರು ವಾಪಸ್ ಬರಲಿಲ್ಲ ಎಂದರು.
ಅಲ್ಲದೇ ಐಟಿ ಕಾರ್ಡ್ ಜತೆ ಸಿಕ್ಕಿರುವ ಊರುಗೋಲು ಸಹ ತಮ್ಮ ತಂದೆಯದ್ದೇ ಎಂದು ತಿಳಿಸಿದ ಅವರು ತಮ್ಮ ತಂದೆಗೆ 2016ರಲ್ಲಿ ಲಕ್ವ ಹೊಡೆದಿತ್ತು ಎಂದೂ ಸಹ ಮಾಹಿತಿ ನೀಡಿದರು.
ನಮ್ಮ ತಂದೆ ನಂಜನಗೂಡು ಹಾಗೂ ಧರ್ಮಸ್ಥಳಕ್ಕೆ ಆಗಾಗ ತೆರಳುತ್ತಿದ್ದರು, ಈ ರೀತಿ ನಾಪತ್ತೆಯಾಗುವಂಥವರಲ್ಲ, ತನಿಖೆಯ ಮೂಲಕ ಸತ್ಯ ಹೊರಬರಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಬೆಂಬಲಿತ ಮತದಾರರನ್ನು ಡಿಲಿಟ್ ಮಾಡಿರುವುದಕ್ಕೆ ಸಾಕ್ಷಿ ಇದೆ ಎಂದ ಬಿಆರ್ ಪಾಟೀಲ್
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


