2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಳ್ಳುತ್ತಿದ್ದು, ಇದಕ್ಕೆ ಬಿಸಿಸಿಐ ವಿರೋಧ ವ್ಯಕ್ತಪಡಿಸುತ್ತಲೇ ಬರುತ್ತಿದೆ. ಈ ಕುರಿತ ಚರ್ಚೆಗಳು ನಡೆಯುತ್ತಿರುವಾಗಲೇ ಪಿಸಿಬಿ ಚಾಂಪಿಯನ್ಸ್ ಟ್ರೋಫಿಯ ಕರಡು ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ವೇಳಾಪಟ್ಟಿಯ ಪ್ರಕಾರ ಫೆಬ್ರವರಿ 19ರಿಂದ ಟೂರ್ನಿ ಆರಂಭವಾಗಲಿದ್ದು, ಕರಾಚಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಇನ್ನು ಭಾರತ ಫೆಬ್ರವರಿ 20ರಂದು ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಅಭಿಯಾನ ಆರಂಭಿಸಲಿದೆ ಎಂದು ವರದಿಯಾಗಿದೆ.
ಹೇಗಿದೆ ವೇಳಾಪಟ್ಟಿ?
ಫೆಬ್ರವರಿ, 19 ಪಾಕಿಸ್ತಾನ್ vs ನ್ಯೂಝಿಲೆಂಡ್ ಕರಾಚಿ
ಫೆಬ್ರವರಿ, 20 ಬಾಂಗ್ಲಾದೇಶ್ vs ಭಾರತ ಲಾಹೋರ್
ಫೆಬ್ರವರಿ, 21 ಅಫ್ಘಾನಿಸ್ತಾನ್ vs ಸೌತ್ ಆಫ್ರಿಕಾ ಕರಾಚಿ
ಫೆಬ್ರವರಿ, 22 ಆಸ್ಟ್ರೇಲಿಯಾ vs ಇಂಗ್ಲೆಂಡ್ ಲಾಹೋರ್
ಫೆಬ್ರವರಿ, 23 ನ್ಯೂಝಿಲೆಂಡ್ vs ಭಾರತ ಲಾಹೋರ್
ಫೆಬ್ರವರಿ, 24 ಪಾಕಿಸ್ತಾನ್ vs ಬಾಂಗ್ಲಾದೇಶ ರಾವಲ್ಪಿಂಡಿ
ಫೆಬ್ರವರಿ, 25 ಅಫ್ಘಾನಿಸ್ತಾನ್ vs ಇಂಗ್ಲೆಂಡ್ ಲಾಹೋರ್
ಫೆಬ್ರವರಿ, 26 ಆಸ್ಟ್ರೇಲಿಯಾ vs ಸೌತ್ ಆಫ್ರಿಕಾ ರಾವಲ್ಪಿಂಡಿ
ಫೆಬ್ರವರಿ, 27 ಬಾಂಗ್ಲಾದೇಶ್ vs ನ್ಯೂಝಿಲೆಂಡ್ ಲಾಹೋರ್
ಫೆಬ್ರವರಿ, 28 ಅಫ್ಘಾನಿಸ್ತಾನ್ vs ಆಸ್ಟ್ರೇಲಿಯಾ ರಾವಲ್ಪಿಂಡಿ
ಮಾರ್ಚ್, 1 ಪಾಕಿಸ್ತಾನ್ vs ಭಾರತ ಲಾಹೋರ್
ಮಾರ್ಚ್, 2 ಸೌತ್ ಆಫ್ರಿಕಾ vs ಇಂಗ್ಲೆಂಡ್ ರಾವಲ್ಪಿಂಡಿ
ಮಾರ್ಚ್, 5 ಸೆಮಿಫೈನ್-1 ಕರಾಚಿ
ಮಾರ್ಚ್, 6 ಸೆಮಿಫೈನಲ್-2 ರಾವಲ್ಪಿಂಡಿ
ಮಾರ್ಚ್, 9 ಫೈನಲ್ ಪಂದ್ಯ ಲಾಹೋರ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


