ಚನ್ನಪಟ್ಟಣ: ಇಡೀ ರಾಜ್ಯದ ಗಮನ ಸೆಳೆದಿರುವ ಚನ್ನಪಟ್ಟಣ ಉಪಚುನಾವಣೆ ಕಣ ಇದೀಗ ಫಲಿತಾಂಶಕ್ಕೂ ಮುನ್ನವೇ ಎಲ್ಲರ ಕೇಂದ್ರ ಬಿಂದುವಾಗಿದೆ.
ಇದೇ ನವೆಂಬರ್.23ರಂದು ಚನ್ನಪಟ್ಟಣ ಉಪಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಬೆಟ್ಟಿಂಗ್ ಜ್ವರ ಜೋರಾಗಿದೆ.
ಈ ಬಾರಿ ಚನ್ನಪಟ್ಟಣ ಫಲಿತಾಂಶದಲ್ಲಿ ಅನಿರೀಕ್ಷಿತ ಫಲಿತಾಂಶ ಬರುವ ಸಾಧ್ಯತೆಯಿದ್ದು. ಬೆಟ್ಟಿಂಗ್ ಕಟ್ಟುವವರ ಹುಮ್ಮಸ್ಸು ಮಾತ್ರ ಕಡಿಮೆಯಾಗಿಲ್ಲ.
ಚುನಾವಣೆ ನಡೆದ ಮಾರನೇ ದಿನವೇ ಯೋಗೇಶ್ವರ್ ಸುದ್ದಿಗೋಷ್ಠಿ ಮಾಡಿರುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ಕಡೆ ಭಯ ಶುರುವಾಗಿದೆ ಎನ್ನಲಾಗಿದೆ.
ಆದರೆ ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಉತ್ಸಾಹ ಹೆಚ್ಚಾಗಿದ್ದು, ಪಂಟರ್‌ಗಳು ಬಾಜಿ ಕಟ್ಟಲು ಸಿದ್ಧರಾಗಿದ್ದಾರೆ.
ಕೆಲ ಜನರು 2 ರಿಂದ 3 ಲಕ್ಷದವರೆಗೂ ಬೆಟ್ಟಿಂಗ್ ಕಟ್ಟಿದ್ದು, ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸುತ್ತಾರೆ ಎನ್ನಲಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


