Saturday, August 8, 2026
spot_img
More
    spot_img
    HomeLatest newsನ್ಯೂ ಎಂಡೋಮೆಂಟ್ ಪ್ಲಾನ್: LIC ನ ಹೊಸ ಹೂಡಿಕೆ ಮತ್ತು ವಿಮಾ ಯೋಜನೆ

    ನ್ಯೂ ಎಂಡೋಮೆಂಟ್ ಪ್ಲಾನ್: LIC ನ ಹೊಸ ಹೂಡಿಕೆ ಮತ್ತು ವಿಮಾ ಯೋಜನೆ

    ಭಾರತೀಯ ಜೀವ ವಿಮಾ ನಿಗಮ (LIC) ಜನರಿಗೆ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿರುತ್ತದೆ. LIC ತನ್ನ ಗ್ರಾಹಕರ ಅನುಕೊಲಕ್ಕಾಗಿ ಅವರ ಭವಿಷ್ಯದ ಉಪಯೋಗಕ್ಕಾಗಿ ಈಗಾಗಲೇ ಅನೇಕ ಯೋಜನೆಗಳನ್ನು ಪರಿಚಯಿಸಿದೆ.LIC ಹೊಸ ಯೋಜನೆಯ ಹೆಸರು ನ್ಯೂ ಎಂಡೋಮೆಂಟ್ ಪ್ಲಾನ್(New Endowment Plan). ಎಲ್ಐಸಿಯ ಹೊಸ ಎಂಡೋಮೆಂಟ್ ಪ್ಲಸ್ ಯೋಜನೆಯು ಯುನಿಟ್-ಲಿಂಕ್ಡ್ ಎಂಡೋಮೆಂಟ್ ಪ್ಲಾನ್ ಆಗಿದ್ದು ಅದು ಪಾಲಿಸಿಯ ಅವಧಿಯಲ್ಲಿ ಹೂಡಿಕೆ-ಕಮ್-ವಿಮಾ ರಕ್ಷಣೆಯನ್ನು ನೀಡುತ್ತದೆ. ಈ ಯೋಜನೆಗೆ ಒಳಪಡುವ ವ್ಯಕ್ತಿಯ ವಯಸ್ಸು ಕನಿಷ್ಠ 8 ವರ್ಷಗಳಿಂದ ಗರಿಷ್ಠ 55 ವರ್ಷಗಳವರೆಗೆ ಇರಬೇಕು. ಆದರೆ, ಈ ಯೋಜನೆಗೆ ಕನಿಷ್ಠ ವಿಮಾ ಮೊತ್ತವು 1 ಲಕ್ಷ ರೂಪಾಯಿ ಆಗಿರಬೇಕು.

    Advertisement

    LICಯ ಯಾವುದೇ ವಿಮಾ ಯೋಜನೆಯಿಂದ ಉತ್ತಮ ಆದಾಯವನ್ನು ಗಳಿಸಲು, ವ್ಯಕ್ತಿಯ ವಯಸ್ಸು ಮತ್ತು ಪಾಲಿಸಿ ಅವಧಿ ಎಷ್ಟು ಎನ್ನುವುದು ಬಹಳ ಮುಖ್ಯವಾಗಿದೆ. ಇದರ ಜೊತೆ ಹೂಡಿಕೆ ಮಾಡುವ ಮೊತ್ತವೂ ಮುಖ್ಯವಾಗಿರುತ್ತದೆ.ಒಬ್ಬ ವ್ಯಕ್ತಿಯು 25 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, 35 ವರ್ಷಗಳ ಪಾಲಿಸಿ ಅವಧಿಯನ್ನು ಹೊಂದಿದ್ದು, 9 ಲಕ್ಷದ ವಿಮಾ ಮೊತ್ತವನ್ನು ಆರಿಸಿದರೆ, ಮೊದಲ ವರ್ಷದ ವ್ಯಕ್ತಿಯ ಮಾಸಿಕ ಪ್ರೀಮಿಯಂ 2046 ರೂ. ಆಗಿರುತ್ತದೆ. ಮುಂದಿನ ವರ್ಷದಿಂದ, ಒಬ್ಬ ವ್ಯಕ್ತಿಯು ಈ ಪಾಲಿಸಿಗಾಗಿ ಪ್ರತಿ ತಿಂಗಳು 2002 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. 9 ಲಕ್ಷ ರೂ.ಗಳ ವಿಮಾ ಪಾಲಿಸಿಗೆ ಒಬ್ಬ ವ್ಯಕ್ತಿ 35 ವರ್ಷಗಳವರೆಗೆ ಒಟ್ಟು 8,23,052 ಪಾವತಿಸಬೇಕಾಗುತ್ತದೆ. ಅದರ ರಿಟರ್ನ್ಸ್‌ನಲ್ಲಿ, 35 ವರ್ಷಗಳ ನಂತರ 43,87,500 ರೂ. ಸಿಗುತ್ತದೆ. ವ್ಯಕ್ತಿಯು 35 ವರ್ಷಗಳವರೆಗೆ ಮಾಸಿಕ 2,000 ರೂ ಪ್ರೀಮಿಯಂ ಪಾವತಿಸುವ ಮೂಲಕ 43 ಲಕ್ಷ ರೂ.ಗಿಂತ ಹೆಚ್ಚಿನ ನಿಧಿಯನ್ನು ಪಡೆಯಬಹುದು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading