ದುಬೈ: ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡಯುತ್ತಿರುವ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತೌಹಿದ್ ಹೃದಯ್ ಶತಕ ಹಾಗೂ ಜೇಕರ್ ಅಲಿ ಜಾಣ್ಮೆಯ ಆಟದ ನೆರವಿನಿಂದ ಭಾರತಕ್ಕೆ 229 ರನ್‌ಗಳ ಗುರಿಯನ್ನು ನೀಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿದ್ದು 229 ರನ್‌ಗಳ ಗುರಿಯನ್ನು ನೀಡಿದೆ.
ಬಾಂಗ್ಲಾದೇಶ 9ನೇ ಓವರ್‌ನಲ್ಲಿಯೇ 35 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಮಯದಲ್ಲಿ ಒಂದಾದ ತೌಹಿದ್ ಹೃದಯ್ ಹಾಗೂ ಜೇಕರ್ ಅಲಿ 154 ರನ್‌ಗಳ ಜತೆಯಾಟವನ್ನಾಡಿ ತಂಡವನ್ನು ತೀವ್ರ ಮುಖಭಂಗದಿಂದ ಪಾರು ಮಾಡಿದರು.
ಇನ್ನು ಒಂಬತ್ತನೇ ಓವರ್‌ನಲ್ಲಿ ಐದನೇ ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶದ ಪರ ಜೇಕರ್ ಅಲಿ ಕಣಕ್ಕಿಳಿದಿದ್ದರು. ಅದೇ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಪಡೆದಿದ್ದ ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದುಕೊಂಡಿದ್ದ ಅಕ್ಷರ್ ಪಟೇಲ್ ಹ್ಯಾಟ್ರಿಕ್ ಸಾಧನೆ ಮಾಡುವ ಹಂತದಲ್ಲಿದ್ದಾಗ ರೋಹಿತ್ ಶರ್ಮಾ ಜೇಕರ್ ಅಲಿ ಅವರ ಕ್ಯಾಚ್ ಬಿಟ್ಟರು. ಈ ಕ್ಯಾಚ್ ಬಿಟ್ಟದ್ದರಿಂದಲೇ ತೌಹಿದ್ ಹೃದಯ್ ಹಾಗೂ ಜೇಕರ್ ಅಲಿ ಶತಕದ ಜತೆಯಾಟವನ್ನಾಡಿದರು. ಇಲ್ಲದಿದ್ದರೆ ಬಾಂಗ್ಲಾ ಇಷ್ಟು ರನ್ ಪೇರಿಸಲು ಸಾಧ್ಯವಾಗುತ್ತಿರಲಿಲ್ಲ.
ಬಾಂಗ್ಲಾದೇಶದ ಇನ್ನಿಂಗ್ಸ್: ತನ್ಜಿದ್ ಹಸನ್ 25, ಸೌಮ್ಯ ಸರ್ಕಾರ್ 0, ನಜ್ಮುಲ್ ಹೊಸೈನ್ ಶಾಂತೊ 0, ಮೆಹಿಡಿ ಹಸನ್ ಮಿರಾಜ್ 5, ತೌಹಿದ್ ಹೃದಯ್ 100, ಮುಷ್ಫಿಕರ್ ರಹೀಮ್ 0, ಜೇಕರ್ ಅಲಿ 68, ರಿಷದ್ ಹೊಸೈನ್ 18, ತನ್ಜಿಮ್ ಹಸನ್ ಶಕಿಬ್ 18, ತಸ್ಕಿನ್ ಅಹ್ಮದ್ 3 ರನ್ ಹಾಗೂ ಮುಸ್ತಫಿಜರ್ ರಹಮಾನ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು.
ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್, ಹರ್ಷಿತ್ ರಾಣಾ 3 ವಿಕೆಟ್ ಹಾಗೂ ಅಕ್ಷರ್ ಪಟೇಲ್ 2 ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


