Wednesday, August 12, 2026
spot_img
More
    spot_img
    HomeChampions Trophy 2025Champions Trophy 2025: 260 ಹೊಡಿತಾರೆ ಅನ್ಕೊಂಡಿದ್ವಿ 320 ಬಾರಿಸಿದ್ರು; ಕಿವೀಸ್‌ ವಿರುದ್ಧದ ಸೋಲಿಗೆ 2...

    Champions Trophy 2025: 260 ಹೊಡಿತಾರೆ ಅನ್ಕೊಂಡಿದ್ವಿ 320 ಬಾರಿಸಿದ್ರು; ಕಿವೀಸ್‌ ವಿರುದ್ಧದ ಸೋಲಿಗೆ 2 ಕಾರಣ ಕೊಟ್ಟ ಪಾಕ್‌ ನಾಯಕ

    ಕರಾಚಿ: ಇಲ್ಲಿನ ನ್ಯಾಷನಲ್‌ ಸ್ಟೇಡಿಯಂನಲ್ಲಿ ನಿನ್ನೆ (ಫೆಬ್ರವರಿ 19) ನಡೆದ ಐಸಿಸಿ 2025 ಚಾಂಪಿಯನ್ಸ್‌ ಟ್ರೋಫಿ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್‌ ಪಾಕಿಸ್ತಾನದ ವಿರುದ್ಧ 60 ರನ್‌ಗಳ ಬೃಹತ್‌ ಗೆಲುವನ್ನು ದಾಖಲಿಸಿದೆ.

    Advertisement

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್‌ ವಿಲ್‌ ಯಂಗ್‌ ಹಾಗೂ ಟಾಮ್‌ ಲಾಥಮ್‌ ಶತಕಗಳ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 320 ರನ್‌ ಕಲೆಹಾಕಿ ಪಾಕಿಸ್ತಾನಕ್ಕೆ 321 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಪಾಕಿಸ್ತಾನ 47.2 ಓವರ್‌ಗಳಲ್ಲಿ 260 ರನ್‌ಗಳಿಗೆ ಆಲ್‌ಔಟ್‌ ಆಯಿತು.

    ಪಾಕ್‌ ಪರ ಮಧ್ಯಮ ಕ್ರಮಾಂಕದಲ್ಲಿ ಸಲ್ಮಾನ್‌ ಆಘಾ ಹಾಗೂ ಖುಷ್‌ದಿಲ್‌ ಷಾ ವೇಗವಾಗಿ ಬ್ಯಾಟ್‌ ಬೀಸಿ ಯಾರಾದರೂ ಕೈ ಜೋಡಿಸಿದರೆ ಗೆಲ್ಲುವ ಪ್ರಯತ್ನ ಮಾಡಬಹುದು ಎನ್ನುವಂತಹ ಆಟವನ್ನಾಡಿದ್ದು ಬಿಟ್ಟರೆ, ಉಳಿದ ಇನ್ಯಾವುದೇ ಬ್ಯಾಟ್ಸ್‌ಮನ್‌ ಸಹ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಅತ್ತ ಬಾಬರ್‌ ಅಜಮ್‌ ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದರೆ, ನಾಯಕ ರಿಜ್ವಾನ್‌ ಒಂದಂಕಿಗೆ ವಿಕೆಟ್‌ ಒಪ್ಪಿಸಿದರು. ಇನ್ನು ಬೌಲರ್‌ಗಳು ಸಹ ಮಕಾಡೆ ಮಲಗಿದರು.

    ಹೀಗೆ ತಂಡ ಸಂಪೂರ್ಣವಾಗಿ ಎಲ್ಲಾ ವಿಭಾಗದಲ್ಲಿಯೂ ಸಹ ಎಡವಿದ ಕಾರಣ ಹೀನಾಯವಾಗಿ ಪಂದ್ಯವನ್ನು ಸೋತಿದೆ. ಪಂದ್ಯ ಮುಕ್ತಾಯವಾದ ಬಳಿಕ ಪಂದ್ಯದ ಸೋಲಿನ ಕುರಿತು ಪಾಕ್‌ ನಾಯಕ ಮೊಹಮ್ಮದ್‌ ರಿಜ್ವಾನ್‌ ಮಾತನಾಡಿದ್ದು ಸೋಲಿಗೆ ಕಾರಣವಾಗಿದ್ದೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

    “ನ್ಯೂಜಿಲೆಂಡ್‌ ಉತ್ತಮ ಗುರಿಯನ್ನು ನೀಡಿದರು. ನಾವು ಅದನ್ನು ನಿರೀಕ್ಷಿಸಿರಲಿಲ್ಲ. 260 ರ ಆಸುಪಾಸಿನಲ್ಲಿ ಟಾರ್ಗೆಟ್‌ ನೀಡಬಹುದು ಎಂದುಕೊಂಡಿದ್ದೆವು. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ ಮತ್ತು ಎಲ್ಲಾ ತಂತ್ರಗಳನ್ನು ಬಳಸಿದ್ದೇವೆ, ಆದರೆ ಅವರು ಚೆನ್ನಾಗಿ ಆಡಿದರು ಮತ್ತು ಉತ್ತಮ ಗುರಿಯನ್ನು ನೀಡಿದರು. ಮೊದಲು ಪಿಚ್ ಬ್ಯಾಟಿಂಗ್ ಮಾಡಲು ಸುಲಭವಾಗಿರಲಿಲ್ಲ ಆದರೆ ವಿಲ್ ಯಂಗ್ ಮತ್ತು ಲ್ಯಾಥಮ್ ಉತ್ತಮ ಆಟವನ್ನಾಡಿದರು. ಕೊನೆಯಲ್ಲಿ ನಾವು ಲಾಹೋರ್‌ ಪಂದ್ಯದಲ್ಲಿ ಮಾಡಿದ ತಪ್ಪನ್ನು ಮತ್ತೆ ಮಾಡಿದೆವು. ನಾವು ಬ್ಯಾಟಿಂಗ್‌ನಿಂದ ಉತ್ತಮ ಆರಂಭವನ್ನು ಪಡೆಯಲಿಲ್ಲ. ಫಖರ್ ಜಮಾನ್‌ ಇನ್ನೂ ಚೇತರಿಸಿಕೊಳ್ಳದ ಕಾರಣ ಆರಂಭದಲ್ಲಿ ಅವರ ಅನುಪಸ್ಥಿತಿ ಕಾಡಿದೆ. ನಾವು ಎರಡು ಬಾರಿ ಎಡವಿದೆವು. ಒಮ್ಮೆ ಡೆತ್‌ನಲ್ಲಿ ಬೌಲಿಂಗ್ ಮಾಡುವಾಗ ಮತ್ತು ನಂತರ ಪವರ್‌ಪ್ಲೇನಲ್ಲಿ ಬ್ಯಾಟಿಂಗ್ ಮಾಡುವಾಗ ವಿಫಲರಾದೆವು. ಇದು ನಮಗೆ ನಿರಾಸೆ ತಂದಿದೆ, ನಾವು ಸಾಮಾನ್ಯ ಪಂದ್ಯದಂತೆ ಆಡಿದ್ದೇವೆ. ಪಂದ್ಯವು ಈಗ ಹೋಗಿದೆ ಮತ್ತು ಉಳಿದವುಗಳಲ್ಲಿ ನಾವು ಉತ್ತಮವಾಗಿ ಆಡಲು ಕಾಯುತ್ತಿದ್ದೇವೆ” ಎಂದು ತಿಳಿಸಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading