ನ್ಯೂ ಚಂಡೀಗಢ್: ಮುಲ್ಲಾನ್‌ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 20 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 158 ರನ್‌ಗಳ ಗುರಿಯನ್ನು ನೀಡಿದೆ.
ಪಂಜಾಬ್ ಕಿಂಗ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಪ್ರಭ್‌ಸಿಮ್ರಾನ್ ಸಿಂಗ್ ಹಾಗೂ ಪ್ರಿಯನ್ಶ್ ಆರ್ಯ 4 ಓವರ್‌ಗಳಲ್ಲಿ 40 ರನ್ ಬಾರಿಸುವ ಮೂಲಕ ಉತ್ತಮ ಆರಂಭವನ್ನೇ ಕೊಟ್ಟರು. ಪರಿಣಾಮ ಕೇವಲ ಒಂದು ವಿಕೆಟ್ ನಷ್ಟಕ್ಕೆ ಪವರ್‌ಪ್ಲೇನಲ್ಲಿ 60 ರನ್‌ಗಳ ಗಡಿ ದಾಟಿತು. ಹೀಗೆ 42 ರನ್‌ಗಳ ಜತೆಯಾಟವನ್ನಾಡಿದ್ದ ತಂಡದ ಆರಂಭಿಕರ ವಿಕೆಟ್ ಪಡೆದುಕೊಳ್ಳುವ ಮೂಲಕ ಬ್ರೇಕ್‌ಥ್ರೋ ನೀಡಿದರು. ನಂತರ ಸುಯಶ್ ಶರ್ಮಾ ಮಧ್ಯಮ ಕ್ರಮಾಂಕದ ಸ್ಪೋಟಕ ಆಟಗಾರರ ಎರಡು ವಿಕೆಟ್ ಉರುಳಿಸುವ ಮೂಲಕ ಪಂಜಾಬ್ ಮೇಲೆ ಹಿಡಿತ ಸಾಧಿಸಿದರು.
ಪಂಜಾಬ್ ಕಿಂಗ್ಸ್ ಪರ ಪ್ರಿಯನ್ಶ್ ಆರ್ಯ 22 (15), ಪ್ರಭ್‌ಸಿಮ್ರಾನ್ ಸಿಂಗ್ 33 (17), ನಾಯಕ ಶ್ರೇಯಸ್ ಐಯ್ಯರ್ 6 (10), ಜೋಶ್ ಇಂಗ್ಲಿಸ್ 29 (17), ನೇಹಲ್ ವಧೇರಾ 5 (6), ಮಾರ್ಕಸ್ ಸ್ಟಾಯ್ನಿಸ್ 1 (2), ಮಾರ್ಕೊ ಯಾನ್ಸೆನ್ ಅಜೇಯ 25 (20) ಹಾಗೂ ಶಶಾಂಕ್ ಸಿಂಗ್ ಅಜೇಯ 31 (33) ರನ್ ಬಾರಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕೃನಾಲ್ ಪಾಂಡ್ಯ ಹಾಗೂ ಸುಯಶ್ ಶರ್ಮಾ ತಲಾ ಎರಡು ವಿಕೆಟ್ ಮತ್ತು ರೊಮಾರಿಯೊ ಶೆಫರ್ಡ್ ಒಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


