Friday, August 7, 2026
spot_img
More
    spot_img
    HomeTop StoryIPL 2025: ಪಂಜಾಬ್‌ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ 2 ಸ್ಥಾನ ಜಿಗಿತ ಕಂಡ ಆರ್‌ಸಿಬಿ

    IPL 2025: ಪಂಜಾಬ್‌ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ 2 ಸ್ಥಾನ ಜಿಗಿತ ಕಂಡ ಆರ್‌ಸಿಬಿ

    ನ್ಯೂ ಚಂಡೀಗಢ್:‌ ಮುಲ್ಲಾನ್‌ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಏಪ್ರಿಲ್ 20 ) ನಡೆದ ಐಪಿಎಲ್‌ನ 37ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 7 ವಿಕೆಟ್‌ಗಳ ಗೆಲುವು ಕಾಣುವುದರ ಮೂಲಕ ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳುವುದರ ಜತೆಗೆ ಅಂಕಪಟ್ಟಿಯಲ್ಲೂ ಏರಿಕೆ ಕಂಡಿದೆ.

    Advertisement

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 158 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 18.5 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 159 ರನ್‌ ಬಾರಿಸಿತು.

    ಈ ಮೂಲಕ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಕಳೆದ ಪಂದ್ಯದಲ್ಲಿ ಚಿನ್ನಸ್ವಾಮಿಯಲ್ಲಿ ಇದೇ ತಂಡದ ವಿರುದ್ಧ ಕಂಡಿದ್ದ ಹೀನಾಯ ಸೋಲಿನ ಸೇಡನ್ನು ತೀರಿಸಿಕೊಂಡಿದೆ. ನಿನ್ನೆ ಲಕ್ನೋ ಸೂಪರ್‌ ಜೈಂಟ್ಸ್‌ ಗೆಲುವು ಕಂಡ ಕಾರಣ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಾರಿದ್ದ ಆರ್‌ಸಿಬಿ ಇಂದಿನ ಗೆಲುವಿನ ಮೂಲಕ ಮತ್ತೆ ಮೂರನೇ ಸ್ಥಾನಕ್ಕೆ ಮರಳಿದೆ. ಈ ಪಂದ್ಯದ ನಂತರದ ಅಂಕಪಟ್ಟಿ ಈ ಕೆಳಕಂಡಂತಿದೆ..

    ಗುಜರಾತ್ ಟೈಟನ್ಸ್: 7 ಪಂದ್ಯಗಳನ್ನಾಡಿ 5ರಲ್ಲಿ ಗೆಲುವು, 2 ಪಂದ್ಯಗಳಲ್ಲಿ ಸೋತು 10 ಅಂಕ ಪಡೆದು ಅಗ್ರ ಸ್ಥಾನದಲ್ಲಿದೆ. (+0.984)
    ಡೆಲ್ಲಿ ಕ್ಯಾಪಿಟಲ್ಸ್: 7 ಪಂದ್ಯಗಳನ್ನಾಡಿ 5ರಲ್ಲಿ ಗೆಲುವು ಸಾಧಿಸಿ 2 ಪಂದ್ಯಗಳಲ್ಲಿ ಸೋತು 10 ಅಂಕ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದೆ. ( +0.589)
    ರಾಯಲ್ ಚಾಲೆಂಜರ್ಸ್ ಬೆಂಗಳೂರು: 8 ಪಂದ್ಯಗಳನ್ನಾಡಿ 5ರಲ್ಲಿ ಗೆಲುವು, 3 ಪಂದ್ಯಗಳಲ್ಲಿ ಸೋತು 10 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. (+0.472)
    ಪಂಜಾಬ್ ಕಿಂಗ್ಸ್: 8 ಪಂದ್ಯಗಳನ್ನಾಡಿ 5ರಲ್ಲಿ ಗೆದ್ದು, 3 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದು ನಾಲ್ಕನೇ ಸ್ಥಾನದಲ್ಲಿದೆ. (+0.177)
    ಲಕ್ನೋ ಸೂಪರ್ ಜೈಂಟ್ಸ್: 8 ಪಂದ್ಯಗಳನ್ನಾಡಿ 5ರಲ್ಲಿ ಗೆಲುವು, 3 ಪಂದ್ಯಗಳಲ್ಲಿ ಸೋತು 10 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿದೆ. (+0.088)
    ಕೊಲ್ಕತ್ತಾ ನೈಟ್ ರೈಡರ್ಸ್: 7 ಪಂದ್ಯಗಳನ್ನಾಡಿ ಮೂರರಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು ಆರನೇ ಸ್ಥಾನದಲ್ಲಿದೆ. (+0547)
    ಮುಂಬೈ ಇಂಡಿಯನ್ಸ್: 7 ಪಂದ್ಯಗಳನ್ನಾಡಿ 3ರಲ್ಲಿ ಗೆದ್ದು, 4 ಪಂದ್ಯದಲ್ಲಿ ಸೋತು 7ನೇ ಸ್ಥಾನದಲ್ಲಿದೆ. (+0.239)
    ರಾಜಸ್ಥಾನ್ ರಾಯಲ್ಸ್: 8 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು, 6 ಪಂದ್ಯದಲ್ಲಿ ಸೋತು 8ನೇ ಸ್ಥಾನದಲ್ಲಿದೆ. (-0.633)
    ಸನ್‌ರೈಸರ್ಸ್ ಹೈದರಾಬಾದ್: 7 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು, 5 ಪಂದ್ಯದಲ್ಲಿ ಸೋತು 9ನೇ ಸ್ಥಾನದಲ್ಲಿದೆ. (-1.217)
    ಚೆನ್ನೈ ಸೂಪರ್ ಕಿಂಗ್ಸ್: 7 ಪಂದ್ಯಗಳನ್ನಾಡಿ 2ರಲ್ಲಿ ಗೆದ್ದು 5 ಪಂದ್ಯದಲ್ಲಿ ಸೋತು ಕೊನೆಯ ಸ್ಥಾನದಲ್ಲಿದೆ. (-1.276)
    ( ಮೇಲಿನ ಅಂಕಪಟ್ಟಿಯಲ್ಲಿ ಆವರಣದಲ್ಲಿರುವುದು ನೆಟ್ ರನ್ ರೇಟ್ )


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading