Saturday, August 8, 2026
spot_img
More
    spot_img
    HomeTop Storyಹಾಲು, ವಿದ್ಯುತ್ ಆಯಿತು ಈಗ ಶಾಲಾ ಮಕ್ಕಳ ಪಠ್ಯಪುಸ್ತಕದ ಬೆಲೆಯೂ ಏರಿಕೆ!

    ಹಾಲು, ವಿದ್ಯುತ್ ಆಯಿತು ಈಗ ಶಾಲಾ ಮಕ್ಕಳ ಪಠ್ಯಪುಸ್ತಕದ ಬೆಲೆಯೂ ಏರಿಕೆ!

    ಬೆಂಗಳೂರು: ಹಾಲು, ನೀರು, ವಿದ್ಯುತ್ ಮತ್ತಿತರ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನರು ಪಠ್ಯಪುಸ್ತಕ ದರದ ಹೆಚ್ಚಳವನ್ನು ಸಹಿಸಿಕೊಳ್ಳಬೇಕಾಗಿದೆ.

    Advertisement

    ಈ ಬಾರಿ ಪಠ್ಯಪುಸ್ತಕದ ದರಶೇ 10 ರಷ್ಟು ಏರಿಕೆಯಾಗಗಲಿದೆ. ದರ ಏರಿಕೆಯನ್ನು ಕರ್ನಾಟಕ ಟೆಕ್ಡ್ಡೆ್ ಬುಕ್ ಸೊಸೈಟಿ ಖಚಿತಪಡಿಸಿದೆ.

    ಖಾಸಗಿ ಶಾಲೆಗಳಿಂದ ಡಿಸೆಂಬರ್ ತಿಂಗಳಲ್ಲಿ ಇಂಡೆಂಟ್ ಪಡೆದಿದ್ದ ಸಂಸ್ಥೆ ಮುಂಗಡ ಶೇ.10ರಷ್ಟು ಹಣವನ್ನು ಆನ್‍ಲೈನ್ ಮೂಲಕ ಪಾವತಿಸಿಕೊಂಡಿತ್ತು.

    ಖಾಸಗಿ ಶಾಲೆಗೆ ಇಂಡೆಂಟ್ ಪಡೆದಿದ್ದಕ್ಕಿಂತ ಶೇ 10 ರಷ್ಟು ದರ ಹೆಚ್ಚಳ ಮಾಡಿರುವುದು ಪೋಷಕರಿಗೆ ಹೊರೆಯಾಗಿ ಪರಿಣಮಿಸುವುದು ಖಚಿತವಾಗಿದೆ.

    ಶಾಲಾ ಪಠ್ಯಪುಸ್ತಕದ ಬೆಲೆ ಏರಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಕ್ಯಾಮ್ಸೌ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು, ಕೇವಲ 10% ಅಲ್ಲ ಕೆಲ ಪುಸ್ತಕಗಳ ಮೇಲೆ 100% ವರೆಗೂ ದರ ಏರಿಕೆ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

    ಇದರ ಹೊರೆಯನ್ನ ಖಾಸಗಿ ಶಾಲೆಗಳು ಪೋಷಕರ ಮೇಲೆನೇ ಹಾಕಬೇಕಾಗುತ್ತೆ. ಶಾಲಾ ಶುಲ್ಕದ ಜೊತೆಗೆನೇ ಈ ದರವನ್ನ ಸೇರಿಸೋದು ಅವಶ್ಯಕತೆ ಇರುತ್ತೆ ಎಂದಿದ್ದಾರೆ.

    ಈಗಾಗಲೇ ಎಲ್ಲದರ ಬೆಲೆ ಏರಿಕೆಯಾಗಿರೋದರಿಂದ ಜನರಿಗೆ ತೊಂದರೆ ಆಗ್ತಾ ಇದೆ ಎಂದು ಸಾಕಷ್ಟು ಬಾರಿ ನಾವು ಸರ್ಕಾರಕ್ಕೂ ಮನವಿ ಮಾಡಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಹೀಗಾಗಿ ಪಠ್ಯ ಪುಸ್ತಕ ದರವನ್ನು ಅನಿವಾರ್ಯವಾಗಿ ಏರಿಕೆ ಮಾಡಬೇಕಿದೆ ಎಂದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading