Friday, September 25, 2026
spot_img
More
    spot_img
    HomeEntertainmentKichcha Sudeep : ಡಿಕೆಶಿ ನಟ್ಟು-ಬೋಲ್ಟು‌ ಹೇಳಿಕೆಗೆ ಸುದೀಪ್ ಖಡಕ್‌ ತಿರುಗೇಟು!

    Kichcha Sudeep : ಡಿಕೆಶಿ ನಟ್ಟು-ಬೋಲ್ಟು‌ ಹೇಳಿಕೆಗೆ ಸುದೀಪ್ ಖಡಕ್‌ ತಿರುಗೇಟು!

    ಬೆಂಗಳೂರು: 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿದ “ಯಾರಿಗೆ ಹೇಗೆ ನಟ್ಟು ಬೋಲ್ಟ್ ಟೈಟ್ ಮಾಡಬೇಕು ಗೊತ್ತಿದೆ” ಎಂಬ ಹೇಳಿಕೆ ಚಿತ್ರರಂಗದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಕಿಚ್ಚ ಸುದೀಪ್ ( kichcha sudeep ) ತಿರುಗೇಟು ಕೊಟ್ಟಿದ್ದಾರೆ.

    ಡಿಕೆಶಿ ಅವರು, ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಟಾರ್ ನಟ-ನಟಿಯರು ಗೈರಾದ ಬಗ್ಗೆ ಬೇಸರ ವ್ಯಕ್ತಪಡಿಸಿ, “ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತು. ಇದನ್ನು ವಾರ್ನಿಂಗ್ ಅಂತಾ ಅಥವಾ ಮನವಿ ಅಂತಾ ಅಂದುಕೊಳ್ಳಿ” ಎಂದು ಎಚ್ಚರಿಕೆ ನೀಡಿದ್ದರು. ಅವರು ಚಿತ್ರರಂಗದ ಕೆಲವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, “ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ನಟರ ಬಗ್ಗೆ ನನಗೆ ಸಿಟ್ಟು ಬಂದಿದೆ” ಎಂದು ಹೇಳಿದರು.

    ಈ ಹೇಳಿಕೆ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತು. ಕೆಲವರು ಡಿಕೆಶಿ ವಿರುದ್ಧ ಬೇಸರ ವ್ಯಕ್ತಪಡಿಸಿದರೆ, ಕೆಲವರು ಪ್ರತಿಕ್ರಿಯೆ ನೀಡಿದರು. ಇತ್ತೀಚೆಗೆ, ನಟ ಕಿಚ್ಚ ಸುದೀಪ್ ಮೊದಲ ಬಾರಿಗೆ ಡಿಕೆಶಿಯ ಈ ಹೇಳಿಕೆಗೆ ಖಡಕ್ ಉತ್ತರ ನೀಡಿದ್ದಾರೆ. ಸುದೀಪ್, ಡಿಕೆಶಿಯ ಪ್ರತಿಯೊಂದು ಹೇಳಿಕೆಗೆ ಉದಾಹರಣೆಗಳೊಂದಿಗೆ ನಯವಾಗಿ ತಿವಿದಿದ್ದು, “ನಾವು ಮೈ ಮಾರಕೊಳ್ಳುವುದಿಲ್ಲ, ನಮ್ಮ ಕೆಲಸ ನಮ್ಮ ಪ್ರತಿಭೆಗೆ ಆಧಾರಿತ” ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟು ದಿನ ಯಾಕೆ ಪ್ರತಿಕ್ರಿಯೆ ನೀಡಿರಲಿಲ್ಲ ಎಂಬುದನ್ನೂ ಅವರು ವಿವರಿಸಿದ್ದಾರೆ.ಇಂತಹ ಹೇಳಿಕೆಗಳು ಕಲಾವಿದರ ಮಾನಸಿಕ ಸ್ಥಿತಿಗೆ ಮತ್ತು ಸಮಾಜದಲ್ಲಿ ಅವರ ಗೌರವಕ್ಕೆ ಧಕ್ಕೆ ತರುತ್ತವೆ ಎಂದು ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಲಾವಿದರು ತಮ್ಮ ಕೆಲಸದ ಮೂಲಕವೇ ಜನರ ಮನಸ್ಸಿನಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದನ್ನು ಅವರು ಪುನರುಚ್ಛರಿಸಿದ್ದಾರೆ.

    kichcha sudeep

    ರಿಪಬ್ಲಿಕ್ ಕನ್ನಡ ವಾಹಿನಿ ಆಯೋಜಿಸಿದ್ದ ಸಂಗಮ 2025 ಕಾರ್ಯಕ್ರಮದಲ್ಲಿ ಸುದೀಪ್ ಡಿಕೆ ಶಿವಕುಮಾರ್ ಅವರ “ನಟ್ಟು-ಬೋಲ್ಟ್ ಟೈಟ್” ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. “ನಾವು ಓಡಾಡುವ ಕಾರುಗಳ ನಟ್ಟು-ಬೋಲ್ಟ್ ಕೂಡ ಟೈಟ್ ಇರಬೇಕು. ಆದರೆ ಟೈಟ್ ಮಾಡಬೇಕಾದರೆ ನಾನು ಹೋಗಿ ಮಾಡೋದರಿಂದ ಆಗುವುದಿಲ್ಲ, ಅದಕ್ಕಾಗಿ ಮೆಕ್ಯಾನಿಕ್ ಹತ್ತಿರವೇ ಹೋಗಬೇಕು. ಯಾಕಂದ್ರೆ ಆ ಮೆಕ್ಯಾನಿಕ್‌ಗೆ ಮಾತ್ರ ಕಾರಿನ ನಟ್ಟು-ಬೋಲ್ಟ್ ಕುರಿತು ಸಂಪೂರ್ಣ ಮಾಹಿತಿ ಇರುತ್ತದೆ. ಅದೇ ರೀತಿ, ಚಿತ್ರರಂಗದ ವಿಷಯಗಳು ಚಿತ್ರರಂಗದಲ್ಲಿರುವವರಿಗೆ ಮಾತ್ರ ಗೊತ್ತು,” ಎಂದು ಸುದೀಪ್ ತಮ್ಮದೇ ಸ್ಟೈಲಲ್ಲಿ ಖಡಕ್‌ ತಿರುಗೇಟು ನೀಡಿದ್ದಾರೆ.ಅವರು ಮುಂದುವರೆದು, “ನನಗೆ ಅವರು ಯಾವ ಅರ್ಥದಲ್ಲಿ ಹೇಳಿದ್ರು ಎಂಬುದು ಸ್ಪಷ್ಟವಿಲ್ಲ. ಆದರೆ ಅವರು ಚಿತ್ರರಂಗದ ನಿಜವಾದ ಸತ್ಯಗಳನ್ನು ತಿಳಿದುಕೊಂಡು ಮಾತನಾಡಿದ್ರೆ, ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತು. ಅವರ ಹೇಳಿಕೆ ಚಿತ್ರರಂಗದ ಅನೇಕ ಮಂದಿಗೆ ನೋವು ತಂದಿದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಡಿಕೆಶಿಯವರ ಮೇಲೆ ಗೌರವವಿದೆ ಎಂದ ಕಿಚ್ಚ ( kichcha sudeep )

    “ಪ್ರತಿ ಕ್ಯಾಂಪನ್‌ನಲ್ಲೂ ನಾವು ಇದ್ದೇವೆ, ನನಗೆ ಡಿಕೆಶಿ ಅವರ ಮೇಲೆ ತುಂಬಾ ಗೌರವ ಇದೆ. ಆದರೆ ಅವರು ಆ ಮಾತು ಹೇಳುವ ಮೊದಲು ಚಿತ್ರರಂಗದ ಸತ್ಯವನ್ನು ಅರ್ಥ ಮಾಡಿಕೊಂಡು, ವಿಚಾರಿಸಿ ಮಾತನಾಡಿದ್ದರೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತು. ಡಿಕೆಶಿ ಅವರ ಹೇಳಿಕೆಯಿಂದ ಚಿತ್ರರಂಗದವರ ಮನಸ್ಸಿಗೆ ತುಂಬಾ ನೋವಾಗಿದೆ. ಅವರು ಕರೆದ ಎಲ್ಲ ಕಾರ್ಯಕ್ರಮಗಳಿಗೆ ನಾವು ಹಾಜರಾಗಿದ್ದೇವೆ, ಅವರ ಜೊತೆಗೆ ನಿಂತಿದ್ದೇವೆ.

    ಚಿತ್ರರಂಗದಲ್ಲಿ ಅನೇಕ ಗೌರವಸ್ಥರು ಇದ್ದಾರೆ. ನಾವು ಯಾರೂ ಮೈ ಮಾರಿಕೊಂಡು ಬಾಳುವವರು ಅಲ್ಲ. ಚಿತ್ರರಂಗದಲ್ಲಿ ನಾವು ಎಲ್ಲರೂ ಮನರಂಜನೆ ನೀಡಲು ಇದ್ದೇವೆ. ನಮ್ಮ ಮನೆಯವರಲ್ಲಿ ಯಾರಾದರೂ ಬದುಕಿದ್ದಾರೆ ಅಥವಾ ಸಾವಾಗಿದ್ದಾರೆ ಎಂಬುದನ್ನು ನೋಡದೆ, ನಿಮ್ಮನ್ನು ನಗಿಸಲು ನಾವು ಸದಾ ಪ್ರಯತ್ನಿಸುತ್ತೇವೆ. ಆದ್ದರಿಂದ, ಕೆಲವು ಸತ್ಯಗಳನ್ನು ತಿಳಿದುಕೊಂಡು ಮಾತನಾಡುವುದು ಉತ್ತಮ. ಅವರಿಗೆ ತಪ್ಪು ಮಾಹಿತಿ ಹೋಗಿರಬಹುದು, ಅದರಿಂದ ಆ ಮಾತು ಬಂದಿರಬಹುದು.ಚಿತ್ರರಂಗದಲ್ಲಿ ಎಲ್ಲರ ನಟ್ಟು-ಬೋಲ್ಟ್‌ ಟೈಟ್‌ ಇದೆ. ನಾವು ಯಾಕೆ ತಕ್ಷಣ ಪ್ರತಿಕ್ರಿಯೆ ನೀಡಲಿಲ್ಲ ಎಂದರೆ, ಅದು ನಾವು ಅವರ ಮೇಲೆ ಇಟ್ಟಿರುವ ಗೌರವವೇ,” ಎಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದ್ದಾರೆ.ಒಟ್ಟಿನಲ್ಲಿ, ಕಿಚ್ಚ ಸುದೀಪ್ ಅವರ ಪ್ರತಿಯೊಂದು ಮಾತು ಸೂಜಿಗಲ್ಲಿನಂತೆ ಮೊನಚಾಗಿದ್ದು, ಎಲ್ಲರ ಮನಸ್ಸಿಗೆ ನೋವಾಗದಂತೆ ಅಳೆಯಾಗಿ, ತೂಗಿ ಮಾತನಾಡಿದ್ದಾರೆ. ಅವರ ಮಾತುಗಳಲ್ಲಿ ಕನ್ನಡ ಮತ್ತು ಕನ್ನಡ ಚಿತ್ರರಂಗದ ಬೆಳವಣಿಗೆಗಾಗಿ ಇರುವ ಪ್ರಗಾಢ ಆಶಯ ಸ್ಪಷ್ಟವಾಗಿ ಕಾಣುತ್ತದೆ. ಕನ್ನಡ ಭಾಷೆ ಮತ್ತು ಚಿತ್ರರಂಗದ ಅಭಿವೃದ್ಧಿ ಎಲ್ಲರ ಹೃದಯದ ಆಕಾಂಕ್ಷೆಯಾಗಿದ್ದು, ಸುದೀಪ್ ಅವರ ಮಾತುಗಳು ಅದನ್ನು ಪ್ರತಿಬಿಂಬಿಸುತ್ತವೆ.

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    Iran: ತನ್ನ ಏರ್‌ಸ್ಪೇಸ್‌ ತೆರೆದು ಭಾರತೀಯರ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಟ್ಟ ಇರಾನ್‌


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading