ಬೆಂಗಳೂರು;ಸ್ಯಾಂಡಲ್‌ವುಡ್ ನಿರ್ದೇಶಕ ನಂದಕಿಶೋರ್ ( Nanda Kishore ) ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿವೆ. ಯುವ ನಟ ಶಬರೀಶ್ ಶೆಟ್ಟಿ ಅವರು ನಂದಕಿಶೋರ್ ಅವರನ್ನು 2016ರಲ್ಲಿ ಜಿಮ್‌ನಲ್ಲಿ ಪರಿಚಯವಾಗಿದ್ದು, ಅವರು ನಂದಕಿಶೋರ್ ಅವರಿಗೆ 22 ಲಕ್ಷ ರೂಪಾಯಿ ಹಣ ನೀಡಿದ್ದಾರಂತೆ. ಶಬರೀಶ್ ಶೆಟ್ಟಿ ಆರೋಪಿಸಿರುವಂತೆ, ನಂದಕಿಶೋರ್ ಅವರು ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಭರವಸೆ ನೀಡಿ, ಆದರೆ ಹಣವನ್ನು ಹಿಂತಿರುಗಿಸದೆ ಸತಾಯಿಸುತ್ತಿದ್ದಾರೆ.
ಹಣ ಕೇಳಿದಾಗ ನಂದಕಿಶೋರ್ ಶಬರೀಶ್ ಅವರನ್ನು ಧಮ್ಕಿ ನೀಡುತ್ತಿದ್ದು, ನಟ ಕಿಚ್ಚ ಸುದೀಪ್ ಅವರ ಹೆಸರನ್ನು ಬಳಸಿ ಬೆದರಿಕೆ ಹಾಕಿದ್ದಾರೆ ಎಂದು ಶಬರೀಶ್ ಆರೋಪಿಸಿದ್ದಾರೆ. ಅವರು “ನನಗೆ ಸಿನಿಮಾ ಅವಕಾಶ ಕೊಡುತ್ತೇನೆ” ಎಂದು ಮೋಸ ಮಾಡಲಾಗಿದೆ, ಆದರೆ ಆ ಅವಕಾಶವನ್ನು ನೀಡಲಾಗಿಲ್ಲ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ನಾನು ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) ನಲ್ಲಿ ಆಡಬೇಕೆಂಬ ಕನಸು ಹೊಂದಿದ್ದೆ. ಕನ್ನಡ ಚಲನಚಿತ್ರ ಕಪ್ (KCC) ಟೂರ್ನಿಯಲ್ಲಿ ಎರಡು ಸೀಸನ್‌ಗಳಲ್ಲಿ ಭಾಗವಹಿಸಿದ್ದೇನೆ. ಆದರೆ ನಾನು ನನ್ನ ಹಣವನ್ನು ವಾಪಸ್ ಕೇಳಿದಾಗ, ನಿರ್ದೇಶಕ ನಂದಕಿಶೋರ್ ಅವರು “ನಿನ್ನನ್ನು ಕೆಸಿಸಿಯಿಂದ ಹೊರ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು. ಸುದೀಪ್ ಸರ್ ಜೊತೆ ಕ್ರಿಕೆಟ್ ಆಡಬೇಕೆಂಬ ನನ್ನ ಆಸೆಯಿಂದ ನಾನು ಈ ಕುರಿತು ಯಾವುದೇ ಆಕ್ಷೇಪಣೆ ಹೊರಹಾಕದೆ ಸುಮ್ಮನಾಗಿದ್ದೆ.ಇದೀಗ ನನ್ನ ರಾಮಧೂತ ಚಿತ್ರದ ಶೂಟಿಂಗ್ ಪೂರ್ಣಗೊಂಡಿದೆ. ಆದರೆ ಸಿನಿಮಾ ರಿಲೀಸ್ ಮಾಡಲು ನನಗಿಲ್ಲದಿರುವ ಹಣದ ಕೊರತೆ ಅತೀವ ಚಿಂತೆಯ ವಿಷಯವಾಗಿದೆ. ನಾನು ಮತ್ತೊಮ್ಮೆ ನನ್ನ ಹಣವನ್ನು ಹಿಂತಿರುಗಿಸಲು ಕೇಳಿದಾಗ, ನಂದಕಿಶೋರ್ ಅವರು ನನ್ನ ಬಳಿ ಯಾವುದೇ ಹಣವಿಲ್ಲ. ನೀನು ಏನು ಬೇಕಾದರೂ ಮಾಡು, ಯಾರಿಗೆ ಬೇಕಾದರೂ ಹೇಳು ಎಂದು ನಿರ್ಲಕ್ಷ್ಯದಿಂದ ಉತ್ತರಿಸಿದ್ದಾರೆ.
ನಮ್ಮಂತ ಪುಟ್ಟ ಕಲಾವಿದರು ಹೇಗೆ ಬದುಕೋದು ಎಂಬುದು ಈಗ ಗೊಂದಲವಾಗಿದೆ. ನಾನು ಈ ವಿಷಯವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನಿಸಿದಾಗ, ಅವರು ನನ್ನನ್ನು ತಡೆಯುವ ಪ್ರಯತ್ನ ಮಾಡಿದರು. ನನ್ನ ಹಣವನ್ನು ವಾಪಸ್ ಕೊಡದಿದ್ದರೆ, ನಂದ ಕಿಶೋರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ. ಜೊತೆಗೆ, ಶಿವಣ್ಣ ಮತ್ತು ಸುದೀಪ್ ಸರ್ ಅವರ ಮುಂದೆ, ಫಿಲ್ಮ್ ಚೇಂಬರ್‌ಗೆ ದೂರು ನೀಡುವೆ ಎಂದು ತಿಳಿಸಿದ್ದಾರೆ.
ಕೃಷಿ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Microfinance: ಸಾಲ ಕಟ್ಟದ್ದಕ್ಕೆ ಮಗು ಕರೆದೊಯ್ದು ಮೈಕ್ರೋ ಫೈನಾನ್ಸ್ ಕಿರುಕುಳ; ಪರಮೇಶ್ವರ್ ಹೇಳಿದ್ದಿಷ್ಟು!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


